'ಏಪ್ರಿಲ್' ನ ರಹಸ್ಯ ಭೇದಿಸಲಿರುವ ಡಿಂಪಲ್ ಕ್ವೀನ್

By Pavithra

ರಚಿತಾ ರಾಮ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ನಂಬರ್ ಒನ್ ಪಟ್ಟವನ್ನು ಗಿಟ್ಟಿಸಿಕೊಳ್ಳುವುದರ ಜೊತೆಯಲ್ಲಿ ಸಾಲು ಸಾಲು ಸ್ಟಾರ್ ನಾಯಕರ ಜೊತೆ ನಾಯಕಿಯಾಗಿ ಅಭಿನಯ ಮಾಡುತ್ತಿರುವ ನಟಿ. ಬ್ಯಾಕ್ ಟು-ಬ್ಯಾಕ್ ಹಿಟ್ ಸಿನಿಮಾ ಕೊಡುತ್ತಿರುವ ರಚಿತಾ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ.

ಕಮರ್ಷಿಯಲ್ ಸಿನಿಮಾಗಳೇ ಹೆಚ್ಚಾಯ್ತು, ಹೊಸ ರೀತಿ ಚಿತ್ರದಲ್ಲಿ ಕಾಣಿಸಿಕೊಳ್ಳೋದು ಯಾವಾಗ ಎನ್ನುತ್ತಿದ್ದ ಅಭಿಮಾನಿಗಳಿಗಾಗಿ ಡಿಂಪಲ್ ಕ್ವೀನ್ ಈ ವರ್ಷ ವಿಭಿನ್ನ ಎನ್ನಿಸುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ಮನೆ ಹುಡುಗಿ, ನಮ್ಮ ಹಳ್ಳಿ ಹುಡುಗಿ ಎನ್ನಿಸುವಂತಹ ಕ್ಯಾರೆಕ್ಟರ್ ಗಳನ್ನ 'ಅಯೋಗ್ಯ' ಹಾಗೂ 'ಸೀತಾ ರಾಮ ಕಲ್ಯಾಣ' ಚಿತ್ರದಲ್ಲಿ ನಿಭಾಯಿಸುತ್ತಿದ್ದಾರೆ.

ಇನ್ನು ಒಂದು ಹೆಜ್ಜೆ ಮುಂದು ಹೋಗಿ ಮಹಿಳಾ ಪ್ರಧಾನ ಸಿನಿಮಾದಲ್ಲಿ ರಚ್ಚು ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಆಗಿದ್ದರೆ ರಚಿತಾ ಈ ಹಿಂದೆಯೇ ಮಹಿಳಾ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಸ್ವಲ್ಪ ಸಮಯ ತೆಗೆದುಕೊಂಡು ಒಂದೊಳ್ಳೆ ಕಥೆಯೊಂದಿಗೆ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಹಾಗಾದರೆ ರಚಿತಾ ಅಭಿನಯ ಮಾಡುತ್ತಿರುವ ಸಿನಿಮಾ ಯಾವುದು? ಚಿತ್ರೀಕರಣ ಯಾವಾಗ ಶುರು? ಇನ್ನಷ್ಟು ಮಾಹಿತಿ ಇಲ್ಲಿದೆ ಮುಂದೆ ಓದಿ

ಮಹಿಳಾ ಪ್ರಧಾನ ಚಿತ್ರದಲ್ಲಿ ಡಿಂಪಲ್ ಕ್ವೀನ್

ಮಹಿಳಾ ಪ್ರಧಾನ ಚಿತ್ರದಲ್ಲಿ ಡಿಂಪಲ್ ಕ್ವೀನ್

ರಚಿತಾ ರಾಮ್ ಮಹಿಳಾ ಪ್ರಧಾನ ಸಿನಿಮಾದಲ್ಲಿ ಅಭಿನಯ ಮಾಡುವುದು ಪಕ್ಕಾ ಆಗಿದೆ. 'ಏಪ್ರಿಲ್' ಎನ್ನುವ ಚಿತ್ರದಲ್ಲಿ ರಚ್ಚು ಆಕ್ಟ್ ಮಾಡುತ್ತಿದ್ದು, ಹೆಸರೇ ಹೇಳುವಂತೆ ಇದೊಂದು ಥ್ರಿಲ್ಲರ್ ಕಥಾಹಂದರವಿರುವ ಚಿತ್ರ.

ಕಥೆ ಕೇಳಿ ಇಂಪ್ರೆಸ್ ಆದ ರಚಿತಾ

ಕಥೆ ಕೇಳಿ ಇಂಪ್ರೆಸ್ ಆದ ರಚಿತಾ

ರಚಿತಾ ರಾಮ್ ಇತ್ತೀಚಿನ ದಿನಗಳಲ್ಲಿ ಹೊಸ ರೀತಿಯ ಪಾತ್ರಗಳು ಉತ್ತಮ ಎನ್ನಿಸುವ ಕಥೆಗಳಿಗೆ ಹೆಚ್ಚಾಗಿ ಒತ್ತು ಕೊಡುತ್ತಿದ್ದಾರೆ. ಇದೇ ಕಾರಣದಿಂದಾಗಿ 'ಏಪ್ರಿಲ್' ನಲ್ಲಿ ಹೊಸ ನಿರ್ದೇಶಕರಿಗೆ ಅವಕಾಶವನ್ನೂ ನೀಡಿದ್ದಾರೆ. 'ಏಪ್ರಿಲ್' ಚಿತ್ರವನ್ನು ಸತ್ಯ ರಾಯಲ ಎನ್ನುವವರು ನಿರ್ದೇಶನ ಮಾಡುತ್ತಿದ್ದು ಏಪ್ರಿಲ್ ಡಿಸೋಜಾ ಪ್ರಾತ್ರದಲ್ಲಿ ಡಿಂಪಲ್ ಕ್ವೀನ್ ಕಾಣಿಸಿಕೊಳ್ಳಲಿದ್ದಾರೆ.

ತೆರೆ ಮೇಲೆ ಸತ್ಯ ಘಟನೆ

ತೆರೆ ಮೇಲೆ ಸತ್ಯ ಘಟನೆ

'ಏಪ್ರಿಲ್' ಸತ್ಯ ಘಟನೆ ಆಧರಿಸಿದ ಸಿನಿಮಾ ಆಗಿದ್ದು, ನಿರ್ದೇಶಕ ಸತ್ಯ ಅಟ್ಲಾಂಟದಲ್ಲಿದ್ದಾಗ ಓದಿದ್ದ ಕಥೆಯನ್ನು ಈಗ ಸಿನಿಮಾ ಆಗಿ ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು ಮೊದಲ ನೋಟವೇ ಚಿತ್ರದ ಬಗ್ಗೆ ಕುತೂಹಲ ಮೂಡಿಸುವಂತಿದೆ.

ಚಿತ್ರೀಕರಣಕ್ಕೆ ಸಜ್ಜಾದ ಚಿತ್ರತಂಡ

ಚಿತ್ರೀಕರಣಕ್ಕೆ ಸಜ್ಜಾದ ಚಿತ್ರತಂಡ

'ಏಪ್ರಿಲ್' ಸಿನಿಮಾವನ್ನು ಸತ್ಯ ರಾಯಲ ನಿರ್ದೇಶನ ಮಾಡುತ್ತಿದ್ದು, ಹರಿ ಚರಣ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಾರಾಯಣ್ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಉದಿತ್ ಹರಿದಾಸ್ ಸಂಗೀತ, ಅರ್ಜುನ್ ಶೆಟ್ಟಿ ಕ್ಯಾಮೆರಾ ವರ್ಕ್ ಸಿನಿಮಾಗಿರಲಿದೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಶುರು ಮಾಡಲಿದೆ ಚಿತ್ರತಂಡ.

More from Filmibeat

English summary
Kannada actress Rachita Ram Acting as a heroin in April movie. 'Apri'l is a female oriented film directed by new director Satya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X