ದುಬಾರಿ ಕಾರ್ ಖರೀದಿ ಮಾಡಿದ ಡಿಂಪಲ್ ಕ್ವೀನ್ ರಚಿತಾ
Recommended Video
ಕನ್ನಡ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿ ನಡೆಯುತ್ತಿದೆ. ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ವಿವಾಹ ನಿಶ್ಚಯ ಆಗಿದೆ. ಈ ಸಂಭ್ರಮದ ನಡುವೆ ರಚಿತಾ ರಾಮ್ ಹೊಸ ಕಾರು ಕೊಂಡುಕೊಂಡಿದ್ದಾರೆ.
ಮರ್ಸಿಡಿಸ್ ಬೆನ್ಜ್ ಕಾರಿನ ಒಡತಿ ಆಗಬೇಕು ಎನ್ನುವುದು ರಚಿತಾ ರಾಮ್ ಆಸೆ ಆಗಿತ್ತು. ಆ ಆಸೆ ಈಗ ಈಡೇರಿದೆ. ಸ್ಟಾರ್ ನಟಿಯಾಗಿ ಕೈ ತುಂಬಿ ಸಿನಿಮಾ ಅವಕಾಶಗನ್ನು ಹೊಂದಿರುವ ರಚಿತಾ ತಮ್ಮ ಕನಸಿನ ಕಾರ್ ರನ್ನು ಖರೀದಿ ಮಾಡಿದ್ದಾರೆ.
ಹೊಸ ಕಾರ್ ಜೊತೆಗೆ ಅಕ್ಕನ ಮದುವೆ ಮಾಡಲು ಸಿದ್ಧವಾಗಿದ್ದಾರೆ. ನಟಿ ರಚಿತಾ ರಾಮ್ ಹೊಸ ಕಾರಿನ ಫೋಟೋಗಳು ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿವೆ.

ಮರ್ಸಿಡಿಸ್ ಬೆನ್ಜ್ ಕಾರ್ ಒಡತಿ
ಡಿಂಪಲ್ ಕ್ವೀನ್ ರಚಿತಾ ರಾಮ್ ಮರ್ಸಿಡಿಸ್ ಬೆನ್ಜ್ ಕಾರಿನ ಒಡತಿ ಆಗಿದ್ದಾರೆ. ನವೆಂಬರ್ 15 ರಂದು ಅಂದರೆ, ಕಳೆದ ಶುಕ್ರವಾರ ರಚಿತಾ ರಾಮ್ ಕಾರನ್ನು ಕೊಂಡುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾಗೆ ಬಂದಿವೆ. ಹೊಸ ಕಾರ್ ಜೊತೆ ನಗುತ್ತಾ ಡಿಂಪಲ್ ಕ್ವೀನ್ ಪೋಸ್ ನೀಡಿದ್ದಾರೆ.

ಕಾರ್ ನ ಬೆಲೆ 90 ಲಕ್ಷ ಮೌಲ್ಯದ ಕಾರ್
ಮರ್ಸಿಡಿಸ್ ಬೆನ್ಜ್ ದುಬಾರಿ ಕಾರ್ ಗಳಲ್ಲಿ ಒಂದು. ರಚಿತಾ ರಾಮ್ ಕೊಂಡುಕೊಂಡ ಬೆನ್ಜ್ ಕಾರಿನ ಬೆಲೆ ಸುಮಾರು 90 ಲಕ್ಷ ಆಗಲಿದೆ. ನೀಲಿ ಬಣ್ಣದ ಕಾರ್ ಇದಾಗಿದೆ. ಅಂದಹಾಗೆ, ಈ ಹಿಂದೆ ಕನ್ನಡ ನಟ ಯಶ್ ಒಂದೇ ದಿನ ಮೂರು ಮರ್ಸಿಡಿಸ್ ಬೆನ್ಜ್ ಕಾರ್ ಖರೀದಿ ಮಾಡಿದ್ದರು. ಗಣೇಶ್ ಕೂಡ ಬೆನ್ಜ್ ಕಾರು ಹೊಂದಿದ್ದಾರೆ. ಇತ್ತೀಚಿಗಷ್ಟೆ ಶ್ರೀಮುರಳಿ ಸಹ ಬೆನ್ಜ್ ಕಾರ್ ಕೊಂಡುಕೊಂಡಿದ್ದರು.

ಆಯುಷ್ಮಾನ್ ಭವ ಹಿಟ್, ತೆಲುಗು ಆಫರ್
'ಬುಲ್ ಬುಲ್' ಸಿನಿಮಾದ ಮೂಲಕ ಚಿತ್ರರಂಗದ ಪ್ರವೇಶ ಮಾಡಿದ ರಚಿತಾ ರಾಮ್ ಇಂದು ಸ್ಯಾಂಡಲ್ ವುಡ್ ಸ್ಟಾರ್ ನಟಿ. ಕಳೆದ ವಾರ ಅವರ 'ಆಯುಷ್ಮಾನ್ ಭವ' ಸಿನಿಮಾ ಬಿಡುಗಡೆ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅವರ ಪಾತ್ರಕ್ಕೆ ಮೆಚ್ಚುಗೆ ಪಡೆದಿದ್ದಾರೆ. ಇದರೊಂದಿಗೆ, ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಅವರು ಟಾಲಿವುಡ್ ಗೆ ಕಾಲಿಟ್ಟಿದ್ದಾರೆ.

ಅಕ್ಕನ ಮದುವೆ ಸಂಭ್ರಮ
ನಟಿ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಮದುವೆ ಸಂಭ್ರಮ ಶುರುವಾಗಿದೆ. ಡಿಸೆಂಬರ್ 5 ರಂದು ವಿವಾಹ ಮಹೋತ್ಸವ ನಡೆಯಲಿದೆ. ಆಸ್ಟೇಲಿಯಾದ ಉದ್ಯಮಿ ಜೊತೆಗೆ ನಿತ್ಯಾ ಮದುವೆ ಆಗುತ್ತಿದ್ದಾರೆ. ನಿತ್ಯಾ 'ನಂದಿನಿ' ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದಾರೆ. 'ಮುದ್ದು ಮನಸೇ' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಕೆಲಸಗಳ ನಡುವೆ ಅಕ್ಕನ ಮದುವೆ ಸಂಭ್ರಮದಲ್ಲಿ ರಚಿತಾ ಬ್ಯುಸಿ ಇದ್ದಾರೆ.


Click it and Unblock the Notifications











