ನಟ ದರ್ಶನ್ ಅವರನ್ನು ಕಂಡರೆ ಭಯ: ನಟಿ ರಚಿತಾ ರಾಮ್!
ಕನ್ನಡ ಸಿನಿಮಾ ರಂಗದ ಮೆಚ್ಚಿನ ತಾರಾ ಜೋಡಿಗಳಲ್ಲಿ ನಟಿ ರಚಿತಾ ರಾಮ್ ಮತ್ತು ನಟ ದರ್ಶನ್ ಅವರ ಜೋಡಿ ಕೂಡ ಒಂದು. ಈ ಜೋಡಿ ತಮ್ಮ ಮೊದಲ ಚಿತ್ರದ ಮೂಲಕವೇ ಪ್ರೇಕ್ಷಕರ ಮನ ಗೆದ್ದಿತ್ತು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ ಅಂದರೆ ಆ ವಿಚಾರ ಸಾಕಷ್ಟು ಕುತೂಹಲಕ್ಕೆ ಎಡೆ ಮಾಡಿ ಕೊಡುತ್ತದೆ.
ಈ ಜೋಡಿ ಮತ್ತೆ ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತದೆ ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದರ್ಶನ್ ಮತ್ತು ರಚಿತಾ ರಾಮ್ 'ಕ್ರಾಂತಿ' ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದಾರೆ. ಇದು ಅಭಿಮಾನಿಗಳಲ್ಲಿ ಸಂತಸ ತಂದಿದೆ.
ಈ ನಡುವೆ ನಟಿ ರಚಿತಾ ರಾಮ್ ಇದೀಗ ದರ್ಶನ್ ಬಗ್ಗೆ ಹೊಸ ಕಾಮೆಂಟ್ ಮಾಡಿದ್ದಾರೆ. ಸಂದರ್ಶನ ಒಂದರಲ್ಲಿ ದರ್ಶನ್ ಬಗ್ಗೆ ರಚಿತಾ ರಾಮ್ ಮಾತನಾಡಿದ್ದಾರೆ. ಸದ್ಯ ರಚ್ಚು ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದರ್ಶನ್ ಫೋಟೊ ಕಂಡು ನಾನೆಷ್ಟು ಲಕ್ಕಿ ಎಂದ ರಚಿತಾ!
ನಟಿ ರಚಿತಾ ರಾಮ್ ಇತ್ತೀಚೆಗೆ ಖಾಸಗಿ ವಾಹಿನಿ ಒಂದರ ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ನಟ ದರ್ಶನ್ ಅವರನ್ನು ಕಂಡರೆ ಭಯ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. ದರ್ಶನ್ ಕಂಡರೆ ಭಯ ಮತ್ತು ಗೌರವ ಎರಡು ಕೂಡ ಹಾಗೆಯೇ ಇದೆ ಎಂದು ಹೇಳಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ದರ್ಶನ್ ಅವರ ಫೊಟೋವನ್ನು ಗೊತ್ತಿಲ್ಲದೆ ಆಯ್ಕೆ ಮಾಡಿಕೊಂಡ ರಚಿತಾ ರಾಮ್ "ನಾನು ಎಷ್ಟು ಲಕ್ಕಿ. ಮೊದಲ ಆಯ್ಕೆಯಲ್ಲೇ ದರ್ಶನ್ ಅವರ ಫೋಟೋ ಸಿಕ್ಕಿದೆ. ಅವರನ್ನು ಕಂಡರೆ ಅದೇ ಭಯ ಮತ್ತು ಗೌರವ ಹಾಗೆ ನಾನು ಮೊದಲು ನಾಯಕಿ ಆಗಿ ಅಭಿನಯಿಸಿದ್ದು ಅವರೊಂದಿಗೆ" ಎಂದಿದ್ದಾರೆ. ಜೊತೆಗೆ ರಚಿತಾ ರಾಮ್ ಅತ್ಯಂತ ಸಂತಸವನ್ನೂ ವ್ಯಕ್ತ ಪಡಿಸಿದ್ದಾರೆ.

ದರ್ಶನ್‌ಗಾಗಿ ಹಾಡು ಡೆಡಿಕೇಟ್ ಮಾಡಿದ ರಚ್ಚು!
ಇದರೊಂದಿಗೆ ರಚಿತಾ ರಾಮ್ ದರ್ಶನ್ ಗಾಗಿ ವಿಶೇಷ ಹಾಡು ಒಂದನ್ನು ಅರ್ಪಿಸಿದ್ದಾರೆ. ಯಜಮಾನ ಸಿನಿಮಾದ 'ಒಂದು ಮುಂಜಾನೆ ಹಾಗೆ ಸುಮ್ಮನೆ ನಾವು ಹೋಗುವ ಬಾರೆ'. ಈ ಹಾಡನ್ನು ಹಾಡುವುದರ ಮೂಲಕ ದರ್ಶನ್ ಅವರಿಗಾಗಿ ಕಾರ್ಯಕ್ರಮದಲ್ಲಿ ಈ ನಟಿ ರಚಿತಾ ರಾಮ್ ಡೆಡಿಕೇಟ್ ಮಾಡಿದ್ದಾರೆ. ಹಾಗೆ ದರ್ಶನ್ ಅವರು ಎಂದರೆ ಮೊದಲ ಚಿತ್ರದಲ್ಲಿ ಇದ್ದಂತಹ ಗೌರವ ಮತ್ತು ಭಯ ಹಾಗೆ ಇದೆ ಎನ್ನುವುದನ್ನು ರಚಿತಾ ರಾಮ್ ಹೇಳಿಕೊಂಡಿದ್ದಾರೆ.

ದಚ್ಚು ಜೊತೆ ಮುಂದುವರೆದ ರಚ್ಚು ಸಿನಿ ಪಯಣ!
ಬುಲ್ ಬುಲ್ ಸಿನಿಮಾದ ನಂತರ ನಟಿ ರಚಿತಾ ರಾಮ್ ಮತ್ತು ದರ್ಶನ್ ತಾರಾ ಜೋಡಿ ಸೂಪರ್ ಹಿಟ್ ಆಗಿತ್ತು. ಈ ಮೊದಲು ನಟಿ ರಕ್ಷಿತಾ ಮತ್ತು ರಮ್ಯಾ ನಟ ದರ್ಶನ್ ಜೊತೆಗೆ ಅಭಿನಯಿಸಿದ್ದರು. ಇವರ ಜೋಡಿಗಳು ಕೂಡ ಹಿಟ್ ಲಿಸ್ಟ್ ಸೇರಿದ್ದವು. ಅವರ ಬಳಿಕ ಸರದಿಯಲ್ಲಿ ರಚಿತಾ ರಾಮ್ ಬಂದಿದ್ದಾರೆ. ರಚಿತಾ ರಾಮ್ ಚಿತ್ರರಂಗದ ಪಯಣ ಆರಂಭ ಆಗಿದ್ದೇ ದರ್ಶನ್ ಜೊತೆಗೆ. 'ಬುಲ್ ಬುಲ್' ಸಿನಿಮಾದ ಬಳಿಕ 'ಅಂಬರೀಶ' ಚಿತ್ರದಲ್ಲಿ ದರ್ಶನ್ ಜೊತೆಗೆ ಅಭಿನಯಿಸಿದ ರಚಿತಾ ರಾಮ್ ಮತ್ತೆ ದರ್ಶನ್ ಜೊತೆಗೆ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ.

8 ವರ್ಷಗಳ ಬಳಿಕಾ ಒಂದಾಯ್ತು ರಚ್ಚು-ದಚ್ಚು ಜೋಡಿ!
ಎಂಟು ವರ್ಷದ ಬಳಿಕ ಮತ್ತೆ ದರ್ಶನ್ ಜೊತೆಗೆ ನಟಿಸಲು ನಟಿ ರಚಿತಾ ರಾಮ್ ಸಿದ್ಧವಾಗಿದ್ದಾರೆ. ಕ್ರಾಂತಿ ಸಿನಿಮಾದ ಮೂಲಕ ಈ ಕಾಂಬಿನೇಷನ್ ಮತ್ತೆ ಒಂದಾಗಿದೆ. ಸಿನಿಮಾದಲ್ಲಿ ರಚಿತಾ ರಾಮ್ ಪಾತ್ರ ಕೂಡ ಬಹುಮುಖ್ಯ. ಹಾಗಾಗಿ ಈ ಪಾತ್ರಕ್ಕೆ ರಚಿತಾ ರಾಮ್ ಅವರೇ ಬೇಕು ಎಂದು ನಿರ್ಮಾಪಕಿ ಶೈಲಜಾ ನಾಗ್ ಆಯ್ಕೆ ಮಾಡಿಕೊಂಡಿದ್ದಾರೆ. ಕ್ರಾಂತಿ ಸಿನಿಮಾದ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಲು ಈ ಕಾಂಬಿನೇಷನ್ ಕೂಡ ಒಂದು ಕಾರಣ.
ಸದ್ಯ 'ಕ್ರಾಂತಿ' ಸಿನಿಮಾ ಸೆಟ್ಟೇರಿದೆ. ಚಿತ್ರೀಕರಣ ಕೂಡ ಆರಂಭ ಆಗಿದೆ. ಕೆಲ ದಿನಗಳ ಶೂಟಿಂಗ್ ಕೂಡ ಮಾಡಿ ಮುಗಿಸಿದೆ 'ಕ್ರಾಂತಿ' ಚಿತ್ರ ತಂಡ. ರಚ್ಚು-ದಚ್ಚು ಪಾತ್ರವನ್ನು ಈ ಚಿತ್ರದಲ್ಲಿ ಹೇಗೆ ಕಟ್ಟಿಕೊಡಲಾಗುತ್ತದೆ ಎನ್ನುವ ಕುತೂಹಲ ಮನೆ ಮಾಡಿದೆ.


Click it and Unblock the Notifications











