ಮುಖ ಮುಚ್ಚಿಕೊಂಡು ಬೆಳ್ಳಂಬೆಳಗ್ಗೆ ರಚಿತಾರಾಮ್ ಹೋಗಿದ್ದು ಎಲ್ಲಿಗೆ?
ನಟಿ ರಚಿರಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ಆಗಿರುತ್ತಾರೆ. ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಇರುತ್ತಾರೆ. ಆದರೆ ಇದ್ದಕ್ಕಿದ್ದ ಹಾಗೆ ರಚಿತಾ ರಾಮ್ ಅವರು ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತ್ಯಕ್ಷ ಆಗಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಅಚ್ಚರಿ ತಂದಿದೆ.
ಇದು ರಚಿತಾ ರಾಮ್ ಅವರಿಗೆ ಹೊಸದೇನಲ್ಲಾ. ಈ ಹಿಂದೆಯೋ ರಚಿತಾ ರಾಮ್ ಅವರು ಚಿತ್ರ ಒಂದರ ಕಾಸ್ಟ್ಯೂಂ ಖರೀದಿ ಮಾಡಲು ಹೀಗೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಕಮರ್ಷಿಯಲ್ ಸ್ಟ್ರೀಟ್ ಬಟ್ಟೆ ಅಂಗಡಿಗಳಲ್ಲಿ ಕಾಣಿಸಿಕೊಂಡಿದ್ದರು.
ಆದರೆ ಈ ಬಾರಿ ರಚಿತಾ ರಾಮ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಶಾಪಿಂಗ್ ಮಾಡಲು ಹೋಗಿಲ್ಲ. ಸ್ನೇಹಿತ ಮಯೂರ್ ಅವರ ಜೊತೆಗೆ ರಚಿತಾ ರಾಮ್ ಹೋಗಿದ್ದು ಎಲ್ಲಿಗೆ ಎನ್ನುವ ವಿವರವನ್ನು ಮುಂದೆ ಓದಿ...

ಆಂಜನೇಯನ ದರ್ಶನ ಪಡೆದ ರಚ್ಚು!
ನಟಿ ರಚಿತಾ ರಾಮ್ ಅವರು ಆಂಜನೆಯನ ಭಕ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಂದು ಬೆಳಗ್ಗೆ ಸ್ನೇಹಿತ ನಿರ್ದೇಶಕ ಮಯೂರ ರಾಘವೇಂದ್ರ ಅವರ ಜೊತೆಗೆ ಹೆಜ್ಜೆ ಹಾಕಿದ ರಚಿತಾ ರಾಮ್ ಅವರು ಮೊದಲು ಆಂಜನೇಯ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇಗುಲದ ಮುಂದೆ ನಿಂತು ಆಂಜನೇಯ ಮೂರ್ತಿ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಆನಂತರ ಅವರು ಪ್ರತ್ಯಕ್ಷ ಆಗಿದ್ದು ಹೋಟೆಲ್‌ನಲ್ಲಿ.

ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ರಚಿತಾ ರಾಮ್!
ದೇವಸ್ಥಾನ ವಿಸಿಟ್ ಬಳಿಕ ರಚಿತಾ ರಾಮ್ ಮತ್ತು ಮಯೂರ್ ಇಬ್ಬರೂ ದೋಸೆ ತಿನ್ನಲು ಹೋಟೆಲ್‌ಗೆ ಹೋಗಿದ್ದಾರೆ. ಅವರು ಗಾಂಧಿ ಬಜಾರ್‌ನಲ್ಲಿ ಇರುವ ವಿದ್ಯಾರ್ಥಿ ಭವನದ ದೋಸೆ ಸವಿದಿದ್ದಾರೆ. ವಿದ್ಯಾರ್ಥಿ ಭವನದಲ್ಲಿ ಕೂತು ದೋಸೆ ತಿನ್ನುತ್ತಿರುವ ಫೊಟೋವನ್ನು ಕೂಡ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಹಾಗೆ ಓಡಾಡಿದರೆ ಜನ ಸೆಲ್ಫಿಗೆ ಮುಗಿ ಬೀಳಬಹುದು ಎನ್ನವ ಕಾರಣಕ್ಕೆ ರಚಿತಾ ರಾಮ್ ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತಾರೆ. ಈ ರೀತಿ ಅನೇಕ ಬಾರಿ ರಚಿತಾ ಅವರು ಹೀಗೆ ಬೆಂಗಳೂರಿನ ಗಲ್ಲಿಗಳಲ್ಲಿ ಓಡಾಡಿದ್ದು ಇದೆ.

ಸದ್ಯ ಮ್ಯಾಟ್ನಿ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ರಚಿತಾ!
ನಟಿ ರಚಿತಾರಾಮ್ ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳು ಇವೆ. ಹಾಗಾಗಿ ಒಂದು ಚಿತ್ರ ರಿಲೀಸ್ ಬಳಿಕ ಮತ್ತೊಂದು ಚಿತ್ರದ ಕೆಲಸಗಳನ್ನು ರಚಿತಾ ರಾಮ್ ಆರಂಭ ಮಾಡುತ್ತಿದ್ದಾರೆ. ಲವ್ ಯು ರಚ್ಚು ಚಿತ್ರ ತೆರೆ ಕಂಡ ಬಳಿಕ, ಈಗ ನಟ ಸತೀಶ್ ಜೊತೆಗೆ 'ಮ್ಯಾಟ್ನಿ' ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಚಿತ್ರೀಕರಣ ವೇಳೆಯ ಫೊಟೋಗಳನ್ನು ಕೂಡ ಹಂಚಿಕೊಂಡಿದ್ದರು. ಇದು ರಚಿತಾ ರಾಮ್ ಮತ್ತು ಸತೀಶ್ ಕಾಂಬಿನೇಷನ್‌ನ 2ನೇ ಚಿತ್ರ.

ರಚಿತಾ ರಾಮ್ ಕೈಯಲ್ಲಿ ಸದ್ಯ 14 ಚಿತ್ರಗಳಿವೆ!
ಇನ್ನು ನಟಿ ರಚಿತಾ ರಾಮ್ ಅವರು ಒಂದಲ್ಲ ಎರಡಲ್ಲಾ 14 ಚಿತ್ರಗಳಿಗೆ ಸಹಿ ಮಾಡಿದ್ದಾರೆ. 'ಬ್ಯಾಡ್ ಮ್ಯಾನರ್ಸ್, ಕ್ರಾಂತಿ, ಏಕ್ ಲವ್ ಯಾ, ಮಾನ್ಸೂನ್ ರಾಗ, ವೀರಂ, ಲಿಲ್ಲಿ, ಲವ್ ಮಿ ಆರ್ ಹೇಟ್ ಮಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ರಚ್ಚು ಅಭಿನಯಿಸುತ್ತಿದ್ದಾರೆ. ಆದರೆ ಇನ್ನು ಅಧಿಕೃತವಾಗಿ ಪ್ರಕಟ ಆಗದ ಚಿತ್ರಗಳು ಕೂಡ ಇವೆ. ಒಟ್ಟಾರೆ ಸದ್ಯ ಕನ್ನಡ ಚಿತ್ರ ರಂಗದಲ್ಲಿ ಬಹುತೇಕ ಚಿತ್ರಗಳಲ್ಲಿ ನಟಿ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ.


Click it and Unblock the Notifications











