For Quick Alerts
  ALLOW NOTIFICATIONS  
  For Daily Alerts

  ಆಟೋ ಚಾಲಕರ ಡಾರ್ಲಿಂಗ್ 'ಡಿಂಪಲ್ ಕ್ವೀನ್' ರಚಿತಾ

  |

  ಸಾಮಾನ್ಯವಾಗಿ ಆಟೋಗಳ ಮೇಲೆ ಕರಾಟೆ ಕಿಂಗ್ ಶಂಕರ್ ನಾಗ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಹಸ ಸಿಂಹ ವಿಷ್ಣುವರ್ಧನ್ ಸೇರಿದಂತೆ ಸ್ಟಾರ್ ನಟರ ಫೋಟೋಗಳು ರಾರಾಜಿಸುತ್ತವೆ.

  ಆದ್ರೆ, ಇತ್ತೀಚಿನ ದಿನಗಳಲ್ಲಿ ಆಟೋ ಮೇಲೆ 'ಡಿಂಪಲ್ ಕ್ವೀನ್' ರಚಿತಾ ರಾಮ್ ಫೋಟೋಗಳು ಹೆಚ್ಚು ಮಿಂಚುತ್ತಿವೆ. ಈಗಷ್ಟೇ ಅಭಿಮಾನಿಯೊಬ್ಬ ತನ್ನ ಆಟೋ ಮೇಲೆ ರಚ್ಚು ಫೋಟೋ ಹಾಕಿಸಿಕೊಂಡು, ಅದನ್ನು ಸ್ವತಃ ರಚಿತಾ ರಾಮ್ ಬಳಿ ಅನಾವರಣ ಮಾಡಿಸಿದ್ದಾರೆ.

  'ಲವ್ ಮಿ or ಹೇಟ್ ಮಿ,,,' ಅಂತಿದೆ ರಚ್ಚು-ಡಾರ್ಲಿಂಗ್ ಕೃಷ್ಣ ಜೋಡಿ'ಲವ್ ಮಿ or ಹೇಟ್ ಮಿ,,,' ಅಂತಿದೆ ರಚ್ಚು-ಡಾರ್ಲಿಂಗ್ ಕೃಷ್ಣ ಜೋಡಿ

  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ರಚಿತಾ ರಾಮ್ ಸಹ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಆಟೋ ಚಾಲಕ ರಿಜ್ವಾನ್‌ಗೆ ಜಾಗರೂಕತೆಯಿಂದ ಆಟೋ ಚಾಲನೆ ಮಾಡಿ ಎಂದು ಶುಭ ಹಾರೈಸಿದ್ದಾರೆ.

  ''ಈ ರೀತಿ ಪ್ರೀತಿ ತೋರಿಸಿದಾಗ, ನಿಜಕ್ಕೂ ಬಹಳ ಖುಷಿ ಆಗುವುದು. ನನ್ ಮನಸಾರೆ #ಥ್ಯಾಂಕ್ ಯೂ ರಿಜ್ವಾನ್, ಗಾಡಿಯನ ಜೋಪಾನವಾಗಿ ಓಡಿಸಿ ಗಾಡಿಯನ ಜೋಪಾನವಾಗಿ ಓಡಿಸಿ'' ಎಂದು ವಿಡಿಯೋ ಹಂಚಿಕೊಂಡಿದ್ದಾರೆ ರಚ್ಚು.

  ರಚಿತಾ ರಾಮ್ ಸಿನಿಮಾಗಳು

  ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಏಕ್ ಲವ್ ಯಾ' ಸಿನಿಮಾದಲ್ಲಿ ರಚ್ಚು ನಟಿಸಿದ್ದಾರೆ. ರಮೇಶ್ ಅರವಿಂದ್ ಅಭಿನಯದ '100' ಸಿನಿಮಾದಲ್ಲಿಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿ 'ಸೂಪರ್ ಮಚ್ಚಿ' ಸಿನಿಮಾ ತಯಾರಾಗಿದೆ. ಪ್ರಜ್ವಲ್ ದೇವರಾಜ್ ಜೊತೆ 'ವೀರಂ' ಸಿನಿಮಾ ಮಾಡ್ತಿದ್ದಾರೆ.

  Comedy Khiladigalu Championship 2 ಗ್ರಾಂಡ್ ಫಿನಾಲೆಯಲ್ಲಿ ಗೆಲ್ಲೋದು ಯಾರು? | Filmibeat Kannada

  ಸತೀಶ್ ನೀನಾಸಂ ಜೊತೆ 'ಮ್ಯಾಟ್ನಿ' ಸೇರಿದಂತೆ ಲವ್ ಯೂ ರಚ್ಚು, ಏಪ್ರಿಲ್, ಮಾನ್ಸೂನ್ ರಾಗಾ, ಲಿಲ್ಲಿ, ಬ್ಯಾಡ್ ಮ್ಯಾನರ್ಸ್, ಶಬರಿ ಸರ್ಚಿಂಗ್ ಫಾರ್ ರಾವಣ, ಲವ್ ಮೀ ಔರ್ ಹೇಟ್ ಮೀ, ರವಿ ಭೋಪಣ್ಣ, ಡಾಲಿ, ಪಂಕಜ ಕಸ್ತೂರಿ ಅಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Sandalwood Dimple queen Rachita Ram Overwhelmed for her fans love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X