ಅಮ್ಮ ಕೊಡಿಸಿದ ಸೀರೆಯಲ್ಲಿ ಮಿಂಚಿದ ಡಿಂಪಲ್ ಕ್ವೀನ್ ರಚಿತಾ ರಾಮ್
ಸ್ಯಾಂಡಲ್ ವುಡ್ ನ ಕ್ಯೂಟ್ ಸುಂದರಿ ಡಿಂಪಲ್ ಬೆಡಗಿ ನಟಿ ರಚಿತಾ ರಾಮ್ ಸೀರೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇತ್ತೀಚಿಗೆ ಸೀರೆಯಲ್ಲಿ ಫೋಟೋಶೂಟ್ ಮಾಡಿಸಿರುವ ಬುಲ್ ಬುಲ್ ಬೆಡಗಿಯ ಮಸ್ತ್ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸೀರೆ ಧರಿಸಿರುವ ರಚ್ಚು ನೋಡಿ ಪಡ್ಡೆಯುವರು 'ಸೀರೆಲಿ ಹುಡುಗಿಯ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೆಚರ್' ಎಂದು ಹೇಳುತ್ತಿದ್ದಾರೆ. ಬುಲ್ ಬುಲ್ ಸುಂದರಿ ಅಪರೂಪಕ್ಕೊಮ್ಮೆ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಧರಿಸಿದ್ದ ಸೀರೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಬಳಿ ಬಣ್ಣದ ಸೀರಿಗೆ ಕೆಂಪು ಬಣ್ಣ ಬಾರ್ಡರ್ ಇದೆ. ವಿಶೇಷ ಅಂದ್ರೆ ರಚ್ಚು ಧರಿಸಿರುವ ಸೀರೆ ಅವರ ಅಮ್ಮ ಆಯ್ಕೆ ಮಾಡಿದ ಸೀರೆಯಂತೆ. ಈ ಬಗ್ಗೆ ರಚಿತಾ ಅವರೆ ಹೇಳಿಕೊಂಡಿದ್ದಾರೆ. ಅಮ್ಮನ ಪ್ರೀತಿಯ ಸೀರೆಯಲ್ಲಿ ಮಿಂಚಿರುವ ಸಂತಸವನ್ನು ಫೋಟೋ ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ರಚಿತಾ ರಾಮ್ ಸದ್ಯ ರಮೇಶ್ ಅರವಿಂದ್ ನಿರ್ದೇಶನದ 100 ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಏಪ್ರಿಲ್ ಸಿನಿಮಾ ಕೂಡ ಬಾಕಿ. ಜೊತೆಗೆ ಧನಂಜಯ್ ಜೊತೆ ಡಾಲಿ ಸಿನಿಮಾದಲ್ಲೂ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಶಿವಣ್ಣ ಜೊತೆ ನಾಯಕನಾಗಿ ಮಿಂಚಿರುವ ಆಯುಷ್ಮಾನ್ ಭವ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.


Click it and Unblock the Notifications











