ಭಿನ್ನ ಪಾತ್ರ ಪ್ರಯೋಗದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್!

ನಟಿ ರಚಿತಾ ರಾಮ್ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಚಿತಾ ರಾಮ್ ಒಂದೇ ರೀತಿಯ ಪಾತ್ರಗಳಿಗೆ ಜೋತು ಬೀಳದೆ. ಕೇವಲ ಸ್ಟಾರ್ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿದೆ. ಭಿನ್ನ-ವಿಭಿನ್ನ ಪಾತ್ರಗಳ ಪ್ರಯೋಗಕ್ಕೆ ರಚಿತಾ ರಾಮ್ ಮುಂದಾಗಿದ್ದಾರೆ.

ನಟಿ ರಚಿತಾ ರಾಮ್ ಮುಂದಿನ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದಾರೆ. ರಚಿತಾ ರಾಮ್ ಮುಂದಿನ ಸಿನಿಮಾ 'ಮಾನ್ಸೂನ್ ರಾಗ'. ಈ ಚಿತ್ರದ ಪೋಸ್ಟರ್ ಮತ್ತು ಟೀಸರ್‌ಗಳೇ ಹೆಚ್ಚು ಕುತೂಹಲ ಹುಟ್ಟಿಸಿದ್ದವು. ಈಗ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ.

'ಮಾನ್ಸೂನ್ ರಾಗ' ಚಿತ್ರದ ಟ್ರೈಲರ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಈ ಟ್ರೈಲರ್‌ನಲ್ಲಿ ನಟಿ ರಚಿತಾ ರಾಮ್ ಮತ್ತು ಧನಂಜಯ್ ಪಾತ್ರಗಳು ಗಮನ ಸೆಳೆದಿವೆ. ಈ ಪಾತ್ರ ನಟಿ ರಚಿತಾ ರಾಮ್ ಇಷ್ಟ ಪಟ್ಟು ಮಾಡಿರುವ ಪ್ರಾಯೋಗಿಕ ಪಾತ್ರ. ಈ ಚಿತ್ರದ ಮೇಕಿಂಗ್‌ನ ಸಣ್ಣ ತುಣುಕನ್ನು ನಟಿ ರಚಿತಾ ರಾಮ್ ಹಂಚಿಕೊಂಡಿದ್ದಾರೆ.

'ಮಾನ್ಸೂನ್ ರಾಗ' ಹಾಡುತ್ತಿರುವ ರಚ್ಚು!

'ಮಾನ್ಸೂನ್ ರಾಗ' ಹಾಡುತ್ತಿರುವ ರಚ್ಚು!

ನಟಿ ರಚಿತಾ ರಾಮ್ ಇತ್ತೀಚೆಗೆ ವಿಭಿನ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಾಲು, ಸಾಲು ವಿಭಿನ್ನ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ರಚಿತಾ ರಾಮ್ ಮುಂದಿನ ಸಿನಿಮಾ 'ಮಾನ್ಸೂನ್ ರಾಗ'. ರಿಲೀಸ್ ಆಗಿರುವ ಚಿತ್ರದ ಟ್ರೈಲರ್‌ನಲ್ಲಿ ರಚಿತಾ ರಾಮ್ ಡೈಲಾಗ್ ಮಾತ್ರವೇ ಇದೆ. ರಚಿತಾ ರಾಮ್ ಲುಕ್‌ ಕೂಡ ಭಿನ್ನವಾಗಿದೆ. ತಂಡದ ಮೇಲಿನ ನಂಬಿಕೆಯಿಂದಲೇ ರಚಿತಾ ರಾಮ್ ಈ ಪಾತ್ರವನ್ನು ಒಪ್ಪಿಕೊಂಡರಂತೆ.

ವಿಶೇಷ ದೃಶ್ಯ ಹಂಚಿಕೊಂಡ ರಚಿತಾ!

ವಿಶೇಷ ದೃಶ್ಯ ಹಂಚಿಕೊಂಡ ರಚಿತಾ!

ಇನ್ನು ರಚಿತಾ ರಾಮ್ ಈ ಹಿಂದೆ ಇದೇ ತಂಡದ ಜೊತೆಗೆ 'ಪುಷ್ಪಕ ವಿಮಾನ' ಚಿತ್ರದಲ್ಲಿ ನಟಿಸಿದ್ದರು. ಹಾಗಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಾರೆ ಎನ್ನುವ ನಂಬಿಕೆಯ ಮೇಲೆ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಸದ್ಯ ರಚಿತಾ ರಾಮ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪಾತ್ರದ ಮೇಕಿಂಗ್ ತುಣುಕನ್ನು ಹಂಚಿಕೊಂಡಿದ್ದಾರೆ. "ಕಥೆಯನ್ನು, ಹಾಡು ನೃತ್ಯದ ಮೂಲಕ ಹೇಳಲು ನನಗೆ ಇಷ್ಟ, ಅದು ಮಾನ್ಸೂನ್ ರಾಗದಲ್ಲಿ ಇದೆ." ಎಂದು ರಚಿತಾ ರಾಮ್ ಬರೆದುಕೊಂಡಿದ್ದಾರೆ.

ವಿಭಿನ್ನ ಪಾತ್ರದಲ್ಲಿ ರಚಿತಾ ರಾಮ್!

ವಿಭಿನ್ನ ಪಾತ್ರದಲ್ಲಿ ರಚಿತಾ ರಾಮ್!

ಇನ್ನು ಈ ಚಿತ್ರದಲ್ಲಿ ನಟಿ ರಚಿತಾ ರಾಮ್ ಅವ್ರದ್ದು ವೇಶ್ಯೆಯ ಪಾತ್ರ. ಟ್ರೈಲರ್‌ನಲ್ಲಿ ರಚಿತಾ ತುಂಬಾನೇ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ರಚಿತಾ ರಾಮ್ " ಈ ಪಾತ್ರದ ಬಗ್ಗೆ ಅಪ್ರೋಚ್ ಬಂದಾಗ, ನಾನು ಏನು ರಿಯಾಕ್ಷನ್ ಕೊಟ್ಟಿರಲಿಲ್ಲ. ಆದರೆ ಈ ತಂಡ ನನಗೆ ಒಂದು ಮಾತು ಹೇಳಿತ್ತು. ಈ ಪಾತ್ರವನ್ನು ನಾವು ಹೇಗೆ ನಾವು ತೋರಿಸುತ್ತೇವೆ ಎನ್ನುವುದನ್ನು ನೋಡಿ, ನಿಮ್ಗೆ ಇಷ್ಟ ಆಗಲಿಲ್ಲ ಅಂದರೆ ಮತ್ತೆ ಮರು ಚಿತ್ರೀಕರಣ ಮಾಡೋಣ ಎಂದಿದ್ದರು. ಇಡೀ ತಂಡಕ್ಕೆ ಧನ್ಯವಾದಗಳು. ಸೆಕ್ಸ್ ವರ್ಕರ್ ಪಾತ್ರ ನನ್ನದು. ತುಂಬಾನೇ ಅದ್ಭುತವಾಗಿ ಮೂಡಿ ಬಂದಿದೆ. ಅದನ್ನು ಆಗಸ್ಟ್ 19ಕ್ಕೆ ತೆರೆಮೇಲೆ ನೀವೇ ನೋಡ್ತೀರಾ." ಎಂದಿದ್ದಾರೆ ರಚಿತಾ ರಾಮ್.

'ಕ್ರಾಂತಿ'ಯಲ್ಲಿ ರಚಿತಾ ನಾಯಕಿ!

'ಕ್ರಾಂತಿ'ಯಲ್ಲಿ ರಚಿತಾ ನಾಯಕಿ!

ನಟಿ ರಚಿತಾ ರಾಮ್ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ವರ್ಷ ರಚಿತಾ ರಾಮ್ ಹುಟ್ಟು ಹಬ್ಬಕ್ಕೆ ಹಲವು ಸಿನಿಮಾಗಳು ಪ್ರಕಟವಾಗಿದ್ದವು. ಅವುಗಳಲ್ಲಿ ಸದ್ಯ 'ಮಾನ್ಸೂನ್ ರಾಗ' ರಿಲೀಸ್‌ಗೆ ರೆಡಿಯಾಗಿದ್ದು, 'ಕ್ರಾಂತಿ' ಸಿನಿಮಾದಲ್ಲಿ ದರ್ಶನ್ ಜೊತೆಗೆ ರಚ್ಚು ತೆರೆಹಂಚಿಕೊಂಡಿದ್ದಾರೆ. 'ಮಾನ್ಸೂನ್ ರಾಗ' ಚಿತ್ರದ ಬಳಿಕ ' ಕ್ರಾಂತಿ' ತೆರೆಗೆ ಬರಲಿದೆ.

More from Filmibeat

English summary
Actress Rachita Ram playing As Sex Worker In Monsoon Raaga Film, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X