For Quick Alerts
  ALLOW NOTIFICATIONS  
  For Daily Alerts

  ಶ್ರೀಮರಳಿ ಜೊತೆ ರಚಿತಾ : ಮತ್ತೆ ಒಂದಾಯ್ತು 'ರಥಾವರ' ಜೋಡಿ

  |
  ಶ್ರೀಮುರಳಿಯ 'ಭರಾಟೆ'ಗೆ ಜೈ ಎಂದ ರಚಿತಾ ರಾಮ್ | FILMIBEAT KANNADA

  ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೆ ಕಾಣಿಸಿಕೊಂಡಿದ್ದಾರೆ. ಶ್ರೀಮುರಳಿ ಜೊತೆ ರಚಿತಾನಾ ಅಂತ ಅಚ್ಚರಿ ಪಡಬೇಡಿ, ಮುರಳಿ ಅಭಿನಯದ ಮುಂದಿನ ಸಿನಿಮಾದಲ್ಲಿ ರಚಿತಾ ಅಭಿನಯಿಸುತ್ತಿದ್ದಾರೆ.

  ಈ ಹಿಂದೆ 'ರಥಾವರ' ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಈ ಜೋಡಿ ಈಗ 'ಭರಾಟೆ' ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅಷ್ಟಕ್ಕೂ 'ಭರಾಟೆ' ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾದ್ರೆ ರಚಿತಾ ಏನು ಮಾಡ್ತಾರೆ ಅಂತೀರಾ, 'ಬುಲ್ ಬುಲ್' ಬೆಡಗಿ ಶ್ರೀಮುರಳಿ ಜೊತೆ ಒಂದು ಹಾಡಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

  ಟಾಲಿವುಡ್ ಗೆ ಎಂಟ್ರಿಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

  ಹೌದು, ಚಿತ್ರದ ಟೈಟಲ್ ಸಾಂಗ್ ಗೆ ರಚಿತಾ ಡಾನ್ಸ್ ಮಾಡುತ್ತಿದ್ದಾರಂತೆ. 'ಭರಾಟೆ' ಚಿತ್ರದ ಟೈಟಲ್ ಟ್ರ್ಯಾಕ್ ಅನ್ನು ಅದ್ಧೂರಿಯಾಗಿ ಸೆರೆ ಹಿಡಿಯಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆಯಂತೆ. ಈ ಹಾಡಿನಲ್ಲಿ ರಚಿತಾ ರಾಮ್ ಶ್ರೀಮುರಳಿಗೆ ಜೊತೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹಾಡಿಗಾಗಿ ಸಾಕಷ್ಟು ನಾಯಕಿಯರ ಹುಡುಕಾಟ ಮಾಡಿದ ಚಿತ್ರತಂಡ ಕೊನೆಯದಾಗಿ ರಚಿತಾ ಅವರನ್ನು ಆಯ್ಕೆ ಮಾಡಿದೆ.

  'ಭರಾಟೆ'ಯ ಟೈಟಲ್ ಸಾಂಗ್ ಗಾಗಿ ಅದ್ದೂರಿ ಸೆಟ್ ರೆಡಿಯಾಗುತ್ತಿದೆಯಂತೆ. ನಾಳೆ (ಏಪ್ರಿಲ್ 2) ಯಿಂದ ಹಾಡಿನ ಚಿತ್ರೀಕರಣ ಪ್ರಾರಂಭವಾಗಲಿದ್ದು ಮೋಹನ್ ನೃತ್ಯ ಸಂಯೋಜನೆ ಮಾಡಲಿದ್ದಾರಂತೆ. ಸುಮಾರು 200 ಜನ ಜೂನಿಯರ್ ಆರ್ಟಿಸ್ಟ್ ಈ ಹಾಡಿನಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

  'ಭರಾಟೆ' ಕ್ಲೈಮ್ಯಾಕ್ಸ್ ನಲ್ಲಿ 10 ವಿಲನ್ ಗಳ ಎದುರು ಶ್ರೀಮುರುಳಿ ಫೈಟ್

  'ಭರಾಟೆ' ನಿರ್ದೇಶಕ ಚೇತನ್ ಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇತ್ತಿಚಿಗಷ್ಟೆ ಹೈ ವೋಲ್ಟೇಜ್ ಆಕ್ಷನ್ ದೃಶ್ಯದ ಮೂಲಕ ಸಖತ್ ಸುದ್ದಿಯಾಗಿತ್ತು. ನಟ ರವಿಶಂಕರ್ ಮೂವರು ಸಹೋದರರು ಸೇರಿದಂತೆ 10 ಜನ ಖ್ಯಾತ ವಿಲನ್ ಗಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.

  English summary
  Kannada actress Rachita Ram playing special role in actor Sri Murali starrer 'Bharate' kannada movie. This movie is directed by Chethan Kumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X