For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಚಮಕ್ ಕೊಡಲಿದ್ದಾರೆ ಡಿಂಪಲ್ ಕ್ವೀನ್

  By Pavithra
  |

  ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಸಕ್ಸಸ್ ಫುಲ್ ನಾಯಕಿ ಎನ್ನಿಸಿಕೊಂಡಿರುವ ನಟಿ ರಚಿತಾ ರಾಮ್ ಸಿನಿಮಾ ಪ್ರೇಕ್ಷಕರಿಗೆ ಚಮಕ್ ನೀಡಲು ಬರ್ತಿದ್ದಾರೆ. ಅರೆ ಚಮಕ್ ಸಿನಿಮಾ ಗಣೇಶ್ ಅವರದ್ದು ಅಲ್ವಾ ಅಂತ ಕನ್ಫೂಸ್ ಆಗಬೇಡಿ.

  ಕಳೆದ ಆರು ವರ್ಷದಿಂದ ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಸೈ ಎನ್ನಿಸಿಕೊಂಡಿರುವ ಡಿಂಪಲ್ ಕ್ವೀನ್ ತಮ್ಮ ಕೆರಿಯರ್ ನಲ್ಲಿ ಮತ್ತೊಂದು ಹಂತಕ್ಕೆ ಹೋಗುತ್ತಿದ್ದಾರೆ.

  ರಚಿತಾ ರಾಮ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

  ನಟಿಯಾಗಿ ನಿರ್ಮಾಪಕಿಯಾಗಿಯೂ ಗುರುತಿಸಿಕೊಂಡಿರುವ ರಚಿತಾ ರಾಮ್ ಇತ್ತೀಚಿಗಷ್ಟೇ ತಮ್ಮ ಚಿತ್ರಕ್ಕೆ ತಾವೇ ಡಬ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದರು. ಆದರೆ ಈಗ ರಚಿತಾ ಪರಬಾಷೆಯ ಸಿನಿಮಾದಲ್ಲಿ ಅಭಿನಯಿಸಲು ತಯಾರಾಗಿದ್ದಾರೆ. ಹಾಗಾದ್ರೆ ರಚಿತಾ ಅಭಿನಯಿಸುತ್ತಿರುವುದು ಯಾವ ಭಾಷೆಯಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

  ಚಮಕ್ ಸಿನಿಮಾದಲ್ಲಿ ರಚಿತಾ ರಾಮ್

  ಚಮಕ್ ಸಿನಿಮಾದಲ್ಲಿ ರಚಿತಾ ರಾಮ್

  ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್ ನಟಿ ಪಟ್ಟವನ್ನ ಗಿಟ್ಟಿಸಿಕೊಂಡಿರು ಡಿಂಪಲ್ ಕ್ವೀನ್ ಟಾಲಿವುಡ್ ಅಂಗಳಕ್ಕೆ ಎಂಟ್ರಿಕೊಡುತ್ತಿದ್ದಾರೆ. ಸಿ ಆರ್ ಮನೋಹರ್ ನಿರ್ಮಾಣದ ಚಿತ್ರದಲ್ಲಿ ಡಿಂಪಲ್ ಕ್ವೀನ್ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

  ರೋಗ್ ಚಿತ್ರದ ನಾಯಕನ ಎರಡನೇ ಚಿತ್ರ

  ರೋಗ್ ಚಿತ್ರದ ನಾಯಕನ ಎರಡನೇ ಚಿತ್ರ

  ರೋಗ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಪರಿಚಯವಾದ ನಟ ಇಶಾನ್ ಅಭಿನಯದ ಎರಡನೇ ಚಿತ್ರ ತೆಲುಗಿನಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಯಲ್ಲಿ ಮತ್ತೊಂದು ತೆಲುಗು ಸಿನಿಮಾದಲ್ಲಿ ರಚಿತಾ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ.

  ಟಾಲಿವುಡ್ ಗೆ ಸಂಚು ಹಾಕಿದ ರಚ್ಚು

  ಟಾಲಿವುಡ್ ಗೆ ಸಂಚು ಹಾಕಿದ ರಚ್ಚು

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಬಿಡುಗಡೆ ಆಗಿರುವ ಚಮಕ್ ಸಿನಿಮಾವನ್ನ ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಮಾಪಕ ಟಿ ಆರ್ ಚಂದ್ರಶೇಖರ್ ಸಿದ್ದತೆ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲೂ ರಚಿತಾ ಅಭಿನಯಿಸುತಿದ್ದಾರೆ. ಸದ್ಯ ಟಾಲಿವುಡ್ ನ ಎರಡು ಪ್ರಾಜೆಕ್ಟ್ ಗಳು ರಚಿತಾ ರಾಮ್ ಕೈನಲ್ಲಿವೆ.

  ನಾನಿ ಜೊತೆಯಲ್ಲಿ ರಚಿತಾ ರಾಮ್

  ನಾನಿ ಜೊತೆಯಲ್ಲಿ ರಚಿತಾ ರಾಮ್

  ಸದ್ಯದ ಸುದ್ದಿಯ ಪ್ರಕಾರ ರಚಿತಾ ಅಭಿನಯದ ತೆಲುಗು ಸಿನಿಮಾದಲ್ಲಿ ಅರ್ಜುನ್ ರೆಡ್ಡಿಯ ಚಿತ್ರದ ವಿಜಯ್ ದೇವರಕೊಂಡ ಅಥವಾ ನಾನಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

  ಟಿ ಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ಚಿತ್ರ

  ಟಿ ಆರ್ ಚಂದ್ರಶೇಖರ್ ನಿರ್ಮಾಣದಲ್ಲಿ ಚಿತ್ರ

  ಚಮಕ್ ಹಾಗೂ ಅಯೋಗ್ಯ ಸಿನಿಮಾವನ್ನ ನಿರ್ಮಾಣ ಮಾಡುತ್ತಿರುವ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ತೆಲಗಿನಲ್ಲಿ 'ಚಮಕ್' ಸಿನಿಮಾ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ರಚಿತಾ ಅಭಿನಯಿಸುತ್ತಿರುವ ಅಯೋಗ್ಯ ಚಿತ್ರಕ್ಕೂ ಚಂದ್ರಶೇಖರ್ ಅವರೇ ಪ್ರೊಡ್ಯೂಸರ್

  English summary
  Kannada Actress Rachita Ram plays the heroine in two Telugu films. Rachita has been chosen as the heroine for actor Ishaan's first telugu movie. Rachita Ram will be the heroine in Telugu remake of Chamak

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X