»   » ನಿರಾಕರಿಸಿದವರಿಗೆ ಕಾರಣ ಕೇಳಿದ ರಚಿತಾ ರಾಮ್

ನಿರಾಕರಿಸಿದವರಿಗೆ ಕಾರಣ ಕೇಳಿದ ರಚಿತಾ ರಾಮ್

Posted By:
Subscribe to Filmibeat Kannada
ನಿರಾಕರಿಸಿದವರಿಗೆ ಕಾರಣ ಕೇಳಿದ ರಚಿತಾ ರಾಮ್ | Filmibeat kannada

ರಚಿತಾ ರಾಮ್ ಕನ್ನಡ ಸಿನಿಮಾರಂಗದ ಡಿಂಪಲ್ ಕ್ವೀನ್, ಅಭಿನಯಿಸಿದ ಮೊದಲ ಚಿತ್ರದಲ್ಲೇ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸನ್ನು ಕದ್ದ ನಟಿ. ಒಂದೇ ರೀತಿಯ ಸಿನಿಮಾಗಳಲ್ಲಿ ಗುರುತಿಸಿಕೊಳ್ಳದ ರಚಿತಾ ಚಂದನವನದ ಸ್ಟಾರ್ ನಟರೆಲ್ಲರ ಜೊತೆಯೂ ಆಕ್ಟ್ ಮಾಡಿ ಸೈ ಎನ್ನಿಸಿಕೊಂಡವರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಅದಾದ ನಂತರ ರಮೇಶ್ ಅರವಿಂದ್ ಅವರ ಜೊತೆಯಲ್ಲೂ ರಚಿತಾ ಅಭಿನಯಿಸಿ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿಕೊಂಡರು. ಪವರ್ ಸ್ಟಾರ್ ಜೊತೆ ಚಕ್ರವ್ಯೂಹ ದಲ್ಲಿ ಕಾಣಿಸಿಕೊಂಡ ನಂತರ ಮತ್ತೆ ಡಿಂಪಲ್ ಕ್ವೀನ್ ಪವರ್ ಸ್ಟಾರ್ ಜೊತೆಯಾಗುತ್ತಿದ್ದಾರೆ. ಚಿತ್ರತಂಡ ರಚಿತಾ ಅವರನ್ನ ಖುಷಿಯಿಂದ ಸ್ವಾಗತ ಮಾಡಿ ಚಿತ್ರೀಕರಣವನ್ನೂ ಆರಂಭ ಮಾಡಿದೆ.

ಅಪ್ಪು' ಚಿತ್ರದಿಂದ ಹೋದವರನ್ನ ಬಿಟ್ಟು, ಬಂದವರಿಗೆ ಟೀಕೆ.! ಇದು ಸರಿನಾ.?

ಆದರೆ ಅಭಿಮಾನಿಗಳು ಮಾತ್ರ ಈ ಸಿನಿಮಾಗೆ ರಚಿತಾ ಬೇಡ ಅಂತ ಕೆಲ ದಿನ ಅಭಿಯಾನವನ್ನ ಆರಂಭ ಮಾಡಿದ್ದರು? ಈ ಅಭಿಯಾನ ಯಾತಕ್ಕಾಗಿ? ಸಿನಿಮಾದಲ್ಲಿ ಕನ್ನಡ ನಾಯಕಿಗೆ ಅವಕಾಶ ಕೊಟ್ಟಿದ್ದು ತಪ್ಪಾ? ಹಾಗಾದರೆ ಕನ್ನಡ ಕಲಾವಿದರು ಎಲ್ಲಿ ಹೋಗಬೇಕು? ಸಿನಿಮಾದಲ್ಲಿ ರಚಿತಾ ಯಾಕೆ ಬೇಡ ಎನ್ನುವುದಕ್ಕೆ ಕಾರಣವೇನು? ಇಷ್ಟೆಲ್ಲಾ ಪ್ರಶ್ನೆಗಳು ಅನೇಕರ ತಲೆಯಲ್ಲಿ ಹುಟ್ಟಿಕೊಂಡಿದೆ? ಇವೆಲ್ಲವುದರ ಬಗ್ಗೆ ರಚಿತಾ ಏನು ಹೇಳುತ್ತಾರೆ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಕನ್ನಡ ನಾಯಕಿಯರಿಗೆ ಬೇಕು ಅವಕಾಶ

ರಚಿತಾ ರಾಮ್ ಅಪ್ಪಟ ಕನ್ನಡ ನೆಲದ ಹುಡುಗಿ. ಇಲ್ಲಿಯ ತನಕ ಯಾವುದೇ ಗಾಸಿಪ್ ಆಗಲಿ ವಿವಾದವಾಗಲಿ ಮಾಡಿಕೊಳ್ಳದೆ ತನ್ನ ಕೆಲಸದ ಮೂಲಕ ಗುರುತಿಸಿಕೊಂಡಿರುವ ನಾಯಕಿ. ಅಪ್ಪು ಸಿನಿಮಾಗೆ ರಚಿತಾ ನಾಯಕಿ ಬೇಡ ಅಂತ ಅಭಿಮಾನಿಗಳು ವಿರೋಧ ಯಾಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಖುದ್ದು ಅಭಿಮಾನಿಗಳ ಬಳಿಯೇ ಉತ್ತರವಿಲ್ಲ.

ನಿರಾಕರಣೆಗೆ ಬೇಕಾಗಿದೆ ಕಾರಣ

ಅಷ್ಟಕ್ಕೂ ರಚಿತಾ ಸಿನಿಮಾಗೆ ಬೇಡ ಎನ್ನಲು ಕಾರಣ ಆದರೂ ಏನು ಎನ್ನುವುದನ್ನ ಹುಡುಕುತ್ತಾ ಹೊರಟರೇ ಯಾವುದೇ ಉತ್ತರ ಸಿಗುವುದಿಲ್ಲ. ರಚಿತಾ ಕನ್ನಡದವರು, ಕನ್ನಡವನ್ನ ಸ್ಪಷ್ಟವಾಗಿ ಮಾತನಾಡಬಲ್ಲವರು. ಅಭಿನಯಿಸಿದ ಎಲ್ಲಾ ಚಿತ್ರವೂ ಸೂಪರ್ ಹಿಟ್. ಆದರೆ ಕಾರಣವಿಲ್ಲದೆ ನಿರಾಕರಣೆ ಮಾತ್ರ ಕೇಳಿ ಬರುತ್ತಿದೆ.

ಅಭಿಮಾನಿಯಾಗಿ ಮಾತನಾಡಿದ್ದು ತಪ್ಪಾ?

ಚಕ್ರವ್ಯೂಹ ಸಿನಿಮಾ ಬಿಡುಗಡೆ ಸಮಯದಲ್ಲಿ ಇದು ನಿಮ್ಮ ಅಪ್ಪು ಸಿನಿಮಾ ನೀವು ನೋಡಬೇಕು ಎಂದು ಹೇಳಿದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅಭಿಮಾನಿಗಳು ಈ ರೀತಿ ವರ್ತನೆ ತೋರುತ್ತಿದ್ದಾರೆ. ಆದರೆ ರಚಿತಾ ಕೂಡ ಪವರ್ ಸ್ಟಾರ್ ಅಭಿಮಾನಿ ಆ ಕಾರಣದಿಂದ ಇದು ಅಪ್ಪು ಸಿನಿಮಾ ಎನ್ನುವ ಹೇಳಿಕೆ ಕೊಟ್ಟಿದ್ದರು. ಅದನ್ನೇ ದೊಡ್ಡದಾಗಿ ಮಾಡುವುದು ಎಷ್ಟು ಸರಿ?

ಧೈರ್ಯ ತುಂಬಿದ ಚಿತ್ರತಂಡ

ರಚಿತಾ ಪವರ್ ಸ್ಟಾರ್ ಜೊತೆ ಹಾಗೂ ಶಿವಣ್ಣ ಜೊತೆ ಈ ಹಿಂದೆಯೇ ಕೆಲಸ ಮಾಡಿದ್ದಾರೆ. ಚಿತ್ರತಂಡ ಚೆನ್ನಾಗಿ ಯೋಚನೆ ಮಾಡಿಯೇ ರಚಿತಾ ರಾಮ್ ಅವರನ್ನ ಆಯ್ಕೆ ಮಾಡಿಕೊಂಡಿದೆ. ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರೂ ಕೂಡ ಪುನೀತ್ ರಾಜ್ ಕುಮಾರ್ ಮತ್ತು ಸಿನಿಮಾತಂಡ ತಲೆ ಕೆಡಿಸಿಕೊಳ್ಳದೆ ಆರಾಮಾಗಿ ಚಿತ್ರೀಕರಣದಲ್ಲಿ ಭಾಗಿ ಆಗಿ ಎಂದಿದ್ದಾರೆ.

English summary
Kannada actress Rachita Ram questioned fans about Rachithabeda campaig, last week Fans start campaigned Rachithabeda on the social networking site.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X