ದರ್ಶನ್ ಜೊತೆಗೆ ಇಟ್ಟ ಮೊದಲ ಹೆಜ್ಜೆ ನೆನೆದ 'ಬುಲ್ ಬುಲ್' ರಚಿತಾ ರಾಮ್!

ಕನ್ನಡದ ಯಶಸ್ವಿ ಸ್ಟಾರ್ ನಟಿಯರಲ್ಲಿ ನಟಿ ರಚಿತಾ ರಾಮ್ ಮುಂಚೂಣಿಯಲ್ಲಿ ಇದ್ದಾರೆ. ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿ ಇರುತ್ತಾರೆ. ರಚ್ಚು ಸ್ಯಾಂಡಲ್‌ವುಡ್‌ನ ಲಕ್ಕಿ ಹುಡುಗಿ ಅಂತಲೇ ಫೇಮಸ್. ರಚಿತಾ ಅಭಿನಯಿಸಿದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿವೆ. ಈಗ ರಚ್ಚು ಬಗ್ಗೆ ಮಾತನಾಡೋಕೆ ಕಾರಣ ಆಕೆಯ ಮೊದಲ ಸಿನಿಮಾ.

ನಟಿ ರಚಿತಾ ರಾಮ್ ಮೊದಲ ಚಿತ್ರದ ಬಗ್ಗೆ ನಿಮಗೆಲ್ಲಾ ಗೊತ್ತೇ ಇರುತ್ತೆ. ನಟ ದರ್ಶನ್ ಜೊತೆಗೆ 'ಬುಲ್ ಬುಲ್' ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾರಂಗಕ್ಕೆ ರಚಿತಾ ಬಂದಿದ್ದೇ ಬಂದಿದ್ದು, ಅದೃಷ್ಟ ಆಕೆಯ ಕೈ ಹಿಡಿತು. ಇಂದು ಕನ್ನಡದ ನಂಬರ್ 1 ನಟಿಯ ಸ್ಥಾನದಲ್ಲಿ ಇದ್ದಾರೆ ರಚ್ಚು.

ರಚಿತಾ ರಾಮ್‌ಗೆ ಇಂದು (ಮೇ 10) ಬಹಳ ವಿಶೇಷವಾದ ದಿನ. ಯಾಕೆಂದರೆ ಇಂದು ಆಕೆ ಅಭಿನಯದ ಮೊದಲ ಸಿನಿಮಾ 'ಬುಲ್ ಬುಲ್' ರಿಲೀಸ್ ಆಗಿ 9 ವರ್ಷ ಕಳೆದಿದೆ. ಇದು ಈ ಚಿತ್ರಕ್ಕೆ ಮಾತ್ರವಲ್ಲ ಸೀಮಿತವಾಗಿಲ್ಲ. ರಚಿತಾ ರಾಮ್ ಸಿನಿಮಾ ಜರ್ನಿಗೂ ಅನ್ವಯ ಆಗುತ್ತದೆ. ಹಾಗಾಗಾಗಿ ರಚಿತಾ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ.

ರಚಿತಾ ರಾಮ್ ಸಿನಿಮಾ ಜರ್ನಿಗೆ 9 ವರ್ಷ!

ರಚಿತಾ ರಾಮ್ ಸಿನಿಮಾ ಜರ್ನಿಗೆ 9 ವರ್ಷ!

ನಟಿ ರಚಿತಾ ರಾಮ್ ಬಣ್ಣದ ಲೋಕಕ್ಕೆ ಬಂದಿದ್ದು ಕಿರುತೆರೆಯ ಮೂಲಕ. ಅರಸಿ ಧಾರಾವಾಹಿ ಮೂಲಕ ಪ್ರೇಕ್ಷಕರ ಮನೆ ಗೆದ್ದ ರಚಿತಾ ರಾಮ್, ನೇರವಾಗಿ ಬಂದಿದ್ದು ಸಿನಿಮಾರಂಗಕ್ಕೆ. ರಚಿತಾ ರಾಮ್ ಮೊದಲ ಸಿನಿಮಾವೇ ಸೂಪರ್ ಹಿಟ್ ಆದ ಕಾರಣ ಕನ್ನಡದ ಬಹುಬೇಡಿಕೆಯ ನಟಿಯಾಗಿ ರಚಿತಾ ಹೊರ ಹೊಮ್ಮಿದರು. 'ಬುಲ್ ಬುಲ್' ಚಿತ್ರದಿಂದ ಶುರುವಾದ ರಚಿತಾ ರಾಮ್ ಸಿನಿಮಾ ಪಯಣಕ್ಕೆ ಈಗ ಬರೋಬ್ಬರಿ 9 ವರ್ಷ.

'ಬುಲ್ ಬುಲ್' ಬಗ್ಗೆ ರಚಿತಾ ರಾಮ್ ಪೋಸ್ಟ್!

'ಬುಲ್ ಬುಲ್' ಚಿತ್ರದ ಜೊತೆಗೆ ತಮ್ಮ ಸಿನಿಮಾ ಪಯಣವನ್ನು ನೆನೆದು ರಚಿತಾ ರಾಮ್ ಎಲ್ಲರಿಗೂ ಧನ್ಯವಾದ ತಿಳಿಸದ್ದಾರೆ. ದರ್ಶನ್ ಜೊತೆಗಿನ 'ಬುಲ್ ಬುಲ್' ಪೋಸ್ಟರ್ ಹಂಚಿಕೊಂಡು, "ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರ ಋಣಿಯಾಗಿರುತ್ತೇವೆ, ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ". ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟನ್ನು ನಟ ದರ್ಶನ್‌ಗೆ ಟ್ಯಾಗ್ ಮಾಡಿದ್ದಾರೆ.

ರಚ್ಚು- ದಚ್ಚು ಕಾಂಬಿನೇಶನ್ ಹಿಟ್!

ರಚಿತಾ ರಾಮ್ ಮತ್ತು ದರ್ಶನ್ 'ಬುಲ್ ಬುಲ್', 'ಅಂಬರೀಶ' ಚಿತ್ರಗಳಲ್ಲಿ ನಟಿಸಿದ್ದಾರೆ. 'ಜಗ್ಗುದಾದ' ಚಿತ್ರದಲ್ಲಿ ರಚಿತಾ ಅತಿಥಿ ಪಾತ್ರ ಮಾಡಿದ್ದಾರೆ. ಆದರೆ ಆ ಬಳಿಕ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿಲ್ಲ. ಈಗ ಮತ್ತೆ 'ಕ್ರಾಂತಿ' ಸಿನಿಮಾದ ಮೂಲಕ ಒಂದಾಗಿದೆ. ರಚಿತಾ ರಾಮ್ ಮತ್ತು ದರ್ಶನ್ ಕಾಂಬಿನೇಶನ್ ಇರುವ ಕಾರಣಕ್ಕೆ ಈ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ರಾಮ್ ಬ್ಯುಸಿ!

ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ರಾಮ್ ಬ್ಯುಸಿ!

ರಚಿತಾ ರಾಮ್ ತಮ್ಮ 9 ವರ್ಷಗಳ ಸಿನಿಮಾ ಜರ್ನಿಯಲ್ಲಿ ಹತ್ತು ಹಲವು ಬಗೆಯ ಪಾತ್ರಗಳನ್ನು ಮಾಡಿದ್ದಾರೆ. ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕಿಯಾಗಿ ಮಾತ್ರ ಅಭಿನಯಿಸದೆ, '100', ' ಲವ್ ಯು ರಚ್ಚು' ಅಂತಹ ವಿಭಿನ್ನ ಕಥಾ ಹಂದರಯುಳ್ಳ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಈಗಂತೂ ಸಾಲು, ಸಾಲು ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. 'ಮಾನ್ಸೂನ್ ರಾಗ', 'ಕ್ರಾಂತಿ', 'ಲಿಲ್ಲಿ', 'ಮ್ಯಾಟ್ನಿ' ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ.

More from Filmibeat

English summary
Actress Rachita Ram Remember Her First Step With Darshan In Bulbul movie On Its 9th Anniversary, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X