ಬೋಲ್ಡ್ ಪಾತ್ರದ ಬಗ್ಗೆನೇ ಸುದ್ದಿ: ರಚಿತಾ ರಾಮ್ ಬೇಸರ!

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸಾಲು, ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. ಒಂದಾದ ಬಳಿಕ ಒಂದು ಚಿತ್ರಗಳು ತೆರೆಗೆ ಬರ್ತಿವೆ. ಸದ್ಯ ರಚ್ಚು ಅಭಿನಯದ ಏಕ್ ಲವ್ ಯಾ ಸಿನಿಮಾ ತೆರೆಗೆ ಇಂದು (ಫೆಬ್ರವರಿ24) ರಂದು ರಿಲೀಸ್ ಆಗಿದೆ.

ಈ ಚಿತ್ರದಲ್ಲಿ ಕೂಡ ರಚಿತಾ ಅವರ ಬೋಲ್ಡ್ ಅವತಾರ ಹೆಚ್ಚಾಗಿ ಗಮನ ಸೆಳೆದಿದೆ. ಈ ಬಗ್ಗೆ ನಟಿ ರಚಿತಾ ರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಯಾಕೆ ಕೇವಲ ಬೋಲ್ಡ್ ದೃಶ್ಯದ ವಿಚಾರಗಳು ಮಾತ್ರ ಸುದ್ದಿ ಆಗುತ್ತವೆ ಎಂದು ಬೇಸರ ಹೊರ ಹಾಕಿದ್ದಾರೆ. ರಚಿತಾ ರಾಮ್ ಪಕ್ಕದ‌ ಮನೆ ಹುಡುಗಿ ಅಂದ್ರೆ ಹೋಮ್ಲಿ ಗರ್ಲ್‌ಲುಕ್ ನಲ್ಲಿ ಕಾಣಿಸಿಕೊಂದ್ದೇ ಹೆಚ್ಚು. ಆದರೆ ಇತ್ತೀಚೆಗೆ ತಮ್ಮ ಕಂಫರ್ಟ್ ಜೋನ್‌ನಿಂದ ಹೊರ ಬಂದು ವಿಭಿನ್ನ ಪಾತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಆದರೆ ಇಲ್ಲಿ ಹೆಚ್ಚಾಗಿ ಬೋಲ್ಡ್ ದೃಶ್ಯಗಳು ಮಾತ್ರ ಸುದ್ದಿ ಆಗುತ್ತಿವೆ ಎನ್ನುವುದೇ ಬೇಸರ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್ ನಲ್ಲಿ 'ಡಿಂಪಲ್ ಕ್ವೀನ್' ಎಂದೇ ಹೆಸರು ಮಾಡಿರುವ ನಟಿ ರಚಿತಾ ರಾಮ್ ತಮ್ಮ ಇತ್ತೀಚಿನ ಸಿನಿಮಾಗಳಲ್ಲಿ ಬೋಲ್ಡ್ ಪಾತ್ರಗಳನ್ನು ನಿರ್ವಹಿಸಿ ಸುದ್ದಿ ಮಾಡಿದವರು. ಆದರೆ ಕಮರ್ಷಿಯಲ್ ಸಿನಿಮಾಗಳು ಮಾತ್ರವಲ್ಲದೆ ಕಂಟೆಂಟ್ ಇರುವ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Actress Rachita Ram Sad About Her Bold Roles In Head Lines

'ಐ ಲವ್ ಯೂ' ಸಿನಿಮಾದಲ್ಲಿ ರಚಿತಾ ನಿರ್ವಹಿಸಿದ್ದ ಬೋಲ್ಡ್ ಪಾತ್ರ ಮೊದಲು ಚರ್ಚೆಗೆ ಕಾರಣವಾಗಿತ್ತು. ನಂತರ ' ಲವ್ ಯೂ ರಚ್ಚು' ಸಿನಿಮಾದಲ್ಲಿನ ಕೆಲ ದೃಶ್ಯಗಳು ವಿವಾದಕ್ಕೆ ಕಾರಣವಾಗಿತ್ತು. ಇದೀಗ ನಿರ್ದೇಶಕ ಪ್ರೇಮ್ ಅವರ 'ಏಕ್ ಲವ್ ಯಾ' ಸಿನಿಮಾದ ಪಾತ್ರವೂ ಚರ್ಚೆಗೆ ಗ್ರಾಸವಾಗಿದೆ.

'ಏಕ್ ಲವ್ ಯಾ' ಸಿನಿಮಾದ ಟ್ರೇಲರ್‌ನಲ್ಲಿ ರಚಿತಾ ಸ್ಮೋಕಿಂಗ್, ಡ್ರಿಂಕಿಂಗ್ ಅಲ್ಲದೆ ನಾಯಕ ರಾಣಾಗೆ ಕಿಸ್ ಕೊಡುವ ದೃಶ್ಯಗಳೂ ಇದ್ದವು. ಈ ಸಂಗತಿ ಮುನ್ನೆಲೆಗೆ ಬಂದು ಚರ್ಚೆಗೆ ಕಾರಣವಾಗಿರುವ ಬಗ್ಗೆ ರಚಿತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪುಷ್ಪಕ ವಿಮಾನ, ಆಯುಷ್ಮಾನ್ ಭವ, 100 ಸಿನಿಮಾಗಳಲ್ಲಿಯೂ ತಮ್ಮ ಅಭಿನಯ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ, ಆ ಪಾತ್ರಗಳು ಹೆಡ್ ಲೈನಿನಲ್ಲಿ ಬರಲೇ ಇಲ್ಲ. ಬರೀ ಬೋಲ್ಡ್ ಪಾತ್ರಗಳೇ ಹೆಡ್‌ಲೈನ್‌ನಲ್ಲಿ ಬರೋದೇಕೆ ಎಂದು ರಚಿತಾ ಪ್ರಶ್ನಿಸಿದ್ದಾರೆ.

ಏಕ್ ಲವ್ ಯಾ ಸಿನಿಮಾದಲ್ಲಿ ಸ್ಮೋಕಿಂಗ್ , ಡ್ರಿಂಕಿಂಗ್ ಮತ್ತು ರೋಮ್ಯಾಂಟಿಕ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕೆ ಅದು ಅವಶ್ಯಕತೆ ಇದ್ದುದರಿಂದ ಮಾತ್ರ. ನಾನು ಏನೇ ಮಾಡಿದರೂ ಅದು ಸಿನಿಮಾಗಾಗಿ. ಪ್ರಚಾರಕ್ಕಾಗಿ ಮಾಡುತ್ತಿಲ್ಲ ಎಂದು ರಚಿತಾ ಬೇಸರ ವ್ಯಕ್ತ ಪಡಿಸಿದ್ದಾರೆ.

More from Filmibeat

English summary
Actress Rachita Ram Not Happy About Her Bold Roles In Head Line Always,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X