»   » ಕಿಚ್ಚ ಸುದೀಪ್ ಜತೆ ಬುಲ್ ಬುಲ್ ರಚಿತಾ ರಾಮ್

ಕಿಚ್ಚ ಸುದೀಪ್ ಜತೆ ಬುಲ್ ಬುಲ್ ರಚಿತಾ ರಾಮ್

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ನ 'ಬುಲ್ ಬುಲ್' ಹಕ್ಕಿ ರಚಿತಾ ರಾಮ್ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ರಣ ವಿಕ್ರಮ' ಚಿತ್ರದಿಂದ ಡೇಟ್ಸ್ ಸಮಸ್ಯೆ ಕಾರಣ ಹೊರಬಿದ್ದಿದ್ದ ಈ ಬೆಡಗಿ ಇದೀಗ ಕಿಚ್ಚ ಸುದೀಪ್ ಜೊತೆಗಿನ ಚಿತ್ರಕ್ಕೆ ನಾಯಕಿಯಾಗುತ್ತಿದ್ದಾರೆ.

ತೆಲುಗಿನ ಸೂಪರ್ ಡೂಪರ್ ಹಿಟ್ ಚಿತ್ರ ಪವನ್ ಕಲ್ಯಾಣ್ ಅವರ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಆ ಚಿತ್ರದಲ್ಲೇ ಸುದೀಪ್ ಗೆ ಜೋಡಿಯಾಗಲಿದ್ದಾರೆ ರಚಿತಾ ರಾಮ್ ಎನ್ನುತ್ತವೆ ಮೂಲಗಳು.

Actress Rachita Ram to act with Sudeep

ಅತ್ತಾರಿಂಟಿಕಿ ದಾರೇದಿ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದರು. ಒಬ್ಬರು ಸಮಂತಾ ಹಾಗೂ ಇನ್ನೊಬ್ಬ ಬೆಡಗಿ ಪ್ರಣೀತಾ. ಕನ್ನಡ ಚಿತ್ರಕ್ಕಾಗಿ ಹಂಸಿಕಾ ಅವರನ್ನೂ ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಸದ್ಯಕ್ಕೆ ರಚಿತಾ ರಾಮ್ ಅವರು ದರ್ಶನ್ ಅವರ 'ಅಂಬರೀಷ' ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ಇನ್ನು ತೆಲುಗಿನಲ್ಲಿ ನಾದಿಯಾ ಅವರು ಅತ್ತೆ ಪಾತ್ರ ಪೋಷಿಸಿದ್ದರು. ಕನ್ನಡದಲ್ಲಿ ಆ ಸ್ಥಾನವನ್ನು ಮಧೂ ತುಂಬುತ್ತಿದ್ದಾರೆ. ಅತ್ತೆ ಸೊಸೆ ಕಥೆಯುಳ್ಳ ಅಣ್ಣಯ್ಯ ಚಿತ್ರದಲ್ಲಿ ಸಕತ್ತಾಗಿ ನಟಿಸಿದ್ದ ಮಧೂ ಅವರು ಈಗ ಈ ಚಿತ್ರದ ಮೂಲಕ ಸೊಸೆ ರೋಲ್ ನಿಂದ ಅತ್ತೆ ರೋಲ್ ಗೆ ಬಡ್ತಿ ಪಡೆದಿದ್ದಾರೆ ಎನ್ನಬಹುದು.

ಟಾಲಿವುಡ್ ಬಾಕ್ಸ್ ಆಫೀಸಲ್ಲಿ ನೂರು ದಿನಗಳಲ್ಲಿ ಸರಿಸುಮಾರು ರು. 90 ಕೋಟಿ ಗಳಿಸಿದ ಹೆಗ್ಗಳಿಕೆ 'ಅತ್ತಾರಿಂಟಿಕಿ ದಾರೇದಿ' ಚಿತ್ರದ್ದು. ಇದೀಗ ಈ ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿರುವುದು ವಿಶೇಷ. ಬುಲ್ ಬುಲ್, ದಿಲ್ ರಂಗೀಲಾ ಹಾಗೂ ಅಂಬರೀಷ ಚಿತ್ರಗಳ ಬಳಿಕ ರಚಿತಾ ರಾಮ್ ಅವರು ಸುದೀಪ್ ಗೆ ಜೋಡಿಯಾಗುತ್ತಿದ್ದಾರೆ.

English summary
Sandalwood sensational actress Rachita Ram to bag Kichcha Sudeep's next film — The Kannada remake of the Telugu film Attarintiki Daredi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada