'ಅಲೆಲೆಲೇಲೆ ಇವ್ಳು ಚೆಂದಾಗವ್ಳೆ' : ಆಲ್ಬಂ ಹಾಡಿಗೆ ಸೊಂಟ ಬಳುಕಿಸಿದ ರಚಿತಾ ರಾಮ್!

ಸ್ಯಾಂಡಲ್ ವುಡ್ ನಟಿ ರಚಿತಾ ರಾಮ್ ಸದ್ಯ ಕನ್ನಡ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಬ್ಯುಸಿಯಾಗಿರುವ ನಟಿ. ಆದರೆ ರಚಿತಾ ರಾಮ್‌ ಎಲ್ಲರಂತೆ ಅಲ್ಲ. ರಚ್ಚುನೇ ಬೇರೆ, ರಚ್ಚು ಸ್ಟೈಲೇ ಬೇರೆ. ಕೇವಲ ಬಿಗ್ ಬಜೆಟ್ ಸಿನಿಮಾ, ಸ್ಟಾರ್ ನಟರ ಸಿನಿಮಾ, ದೊಡ್ಡ ಬ್ಯಾನರ್‌ ಸಿನಿಮಾ ಅಂತೆಲ್ಲಾ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ.

ಕನ್ನಡ ಚಿತ್ರರಂಗದ ಲಕ್ಕಿ ಬೆಡಗಿ ಎನಿಸಿಕೊಳ್ಳುವ ರಚ್ಚು ರಚಿತಾ ರಾಮ್‌ ಅವರಿಗೆ ಯಾವುದೇ ಪಾತ್ರ ಅಥವಾ ಸಿನಿಮಾ ಇಷ್ಟ ಆದ್ರೂ ಸಾಕು ಕಣ್ಣು ಮುಚ್ಚಿ ಒಪ್ಪಿ ಬಿಡುತ್ತಾರೆ.

ಇದೀಗ ರಚಿತಾ ರಾಮ್ ಸಿನಿಮಾಗಳಲ್ಲಿ ಮಾತ್ರ ಅಲ್ಲ. ಆಲ್ಬಂ ಸಾಂಗ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಅಷ್ಟಕ್ಕೂ ರಚಿತಾ ರಾಮ್‌ ಯಾವ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ, ಯಾವ ಆಲ್ಬಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ.

ಸಿನಿಮಾ ಬ್ಯೂಸಿ ನಡುವೆಯೂ ರಚ್ಚು ಆಲ್ಬಂ ಹಾಡು!

ಸಿನಿಮಾ ಬ್ಯೂಸಿ ನಡುವೆಯೂ ರಚ್ಚು ಆಲ್ಬಂ ಹಾಡು!

ರಚಿತಾ ರಾಮ್ ಸದ್ಯ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಿರತವಾಗಿದ್ದಾರೆ. ದಿನ ಕಳೆದಂತೆ ರಚಿತಾ ರಾಮ್ ಸಿನಿಮಾಗಳ ಲಿಸ್ಟ್‌ ಬೆಳೆಯುತ್ತಿದೆ. ಸಿನಿಮಾ ಲಿಸ್ಟ್‌ ಹೆಚ್ಚುವುದರ ಜೊತೆಗೆ ರಾಚಿರಾ ರಾಮ್‌ ಪಾತ್ರ ಪ್ರಯೋಗಗದ ಲಿಸ್ಟ್‌ ಕೂಡ ಹೆಚ್ಚುತ್ತಿದೆ. ಈಗ ಇದರ ಜೊತೆಗೆ ರಚಿತಾ ರಾಮ್ ಆಲ್ಬಂ ಹಾಡಿನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿನ ತುಣುಕು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ರಿಲೀಸ್‌ ಆಗಿದೆ. ರಚಿತ ಆ ರಾಮ್‌ ಲುಕ್‌ ಕೂಡ ರಿವೀಲ್‌ ಆಗಿದೆ.

ಹೊಸ ವರ್ಷಕ್ಕೆ ಬರುತ್ತಾ ಚಂದನ್-ರಚಿತಾ ಹಾಡು!

ಹೊಸ ವರ್ಷಕ್ಕೆ ಬರುತ್ತಾ ಚಂದನ್-ರಚಿತಾ ಹಾಡು!

ಹೊಸ ವರ್ಷ ಬಂತು ಅಂದರೆ ಸಾಕು ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಹಾಡು, ಪಾರ್ಟಿ ರಂಗು ಹೆಚ್ಚಿಸಲು ಸಿದ್ದ ಆಗಿರುತ್ತದೆ. ಪ್ರತಿ ಹೊಸ ವರ್ಷಕ್ಕೆ ಚಂದನ್‌ ಶೆಟ್ಟಿ ಹೊಸ ಹಾಡಿನೊಂದಿಗೆ ಬರುತ್ತಾರೆ. ಈ ಬಾರಿ ಚಂದನ್‌ ಶೆಟ್ಟಿ ಏನು ಮಾಡ್ತಿದ್ದಾರೆ ಎನ್ನುವ ಬಗ್ಗೆ ಸುಳಿವು ಸಿಕ್ಕಿದೆ. ಅಷ್ಟಕ್ಕೂ ರಚಿತಾ ರಾಮ್‌ ವಿಚಾರದಲ್ಲಿ ಚಂದನ್‌ ಶೆಟ್ಟಿ ಹೆಸರು ಹೇಳಲು ಕಾರಣ ಇದೆ. ರಚಿತಾ ರಾಮ್‌ ಹೆಜ್ಜೆ ಹಾಕುತ್ತಿರುದು ಚಂದನ್ ಶೆಟ್ಟಿ ಆಲ್ಬಂನಲ್ಲಿ.

ಗ್ಲ್ಯಾಮರಸ್‌ ಲುಕ್‌ನಲ್ಲಿ ರಚಿತಾ ರಾಮ್‌ ಡಾನ್ಸ್‌!

ಚಂದನ್ ಶೆಟ್ಟಿ ಮತ್ತು ರಚಿತಾ ರಾಮ್ ಕಾಂಬಿನೇಷನ್ ಒಂದು ರೀತಿ ವಿಭಿನ್ನ ಎನಿಸುತ್ತದೆ. ಯಾಕೆಂದರೆ ಚಂದನ್ ಶೆಟ್ಟಿ ಇಲ್ಲಿ ತನಕ ಸಾಕಷ್ಟು ಆಲ್ಬಂ ಹಾಡುಗಳಲ್ಲಿ ಕನ್ನಡದ ನಟಿಯರ ಜೊತೆಗೆ ಡಾನ್ಸ್ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ರಚಿತಾ ರಾಮ್ ಚಂದನ್‌ ಶೆಟ್ಟಿ ಆಲ್ಬಂ ಸಾಂಗ್‌ನಲ್ಲಿ ಡಾನ್ಸ್‌ ಮಾಡುತ್ತಲಿದ್ದಾರೆ.

ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಕನ್ನಡ ಸ್ಟಾರ್ ನಟಿ ರಚಿತಾ ಅಂದ್ರೆ ತುಂಬಾ ವಿಶೇಷದಿಂದ ಕೊಡಬೇಕಾಗುತ್ತೆ. ಅದೇ ರೀತಿ ವಿಶೇಷವಾದ ಹಾಡೊಂದನ್ನು ಚಂದನ್ ಶೆಟ್ಟಿ ರೆಡಿ ಮಾಡಿದ್ದಾರೆ. ಇದೀಗ ಆ ಹಾಡಿನ ತುಣುಕು ಎಲ್ಲೆಡೆ ವೈರಲ್ ಆಗುತ್ತಿದೆ.

ಈ ಹಾಡಿಗೆ ' ಅಲೆಲೆಲೇಲೆ ಇವಳು ಚೆಂದಾಗವ್ಳೆ' ಎನ್ನುವ ಸಾಹಿತ್ಯ ಇದೆ. ಈ ರೀತಿಯಾ ಟ್ರೆಂಡಿ ಲಿರಿಕ್ಸ್ ಇದೆ. ಆದರೆ ಪೂರ್ತಿ ಹಾಡು ರಿಲಿಸ್‌ ಆಗುವವರೆಗೂ ಕಾಯ ಬೇಕು ಅಷ್ಟೇ. ಜೊತೆಗೆ ರಚಿತಾ ರಾಮ್‌ ಸ್ಟೈಲಿಶ್‌ ಆಗಿ ಮೈ ಬಳುಕಿಸಿದ್ದರೆ. ರಚಿತಾ ರಾಮ್‌ ಲುಕ್‌ ಕೂಡ ಹೆಚ್ಚು ಗಮನ ಸೆಳೆದಿದೆ.

ಕುತೂಹಲ ಮೂಡಿಸಿದ ಚಂದನ್-ರಚಿತಾ ಕಾಂಬಿನೇಷನ್!

ಕುತೂಹಲ ಮೂಡಿಸಿದ ಚಂದನ್-ರಚಿತಾ ಕಾಂಬಿನೇಷನ್!

ರಚಿತಾ ರಾಮ್‌ ಮೊದಲ ಬಾರಿಗೆ ಆಲ್ಬಂ ಹಾಡಿನಲ್ಲಿ ಕಾಣಿಸಿ ಕೊಳ್ಳುತ್ತಲಿದ್ದಾರೆ ಎನ್ನುವುದು ಒಂದು ಕಡೆ ಆದರೆ. ಮತ್ತೊಂದು ಕಡೆ ಚಂದನ್‌ ಶೆಟ್ಟಿಯ ಹಾಡುಗಳ ಮೇಲು ನಿರೀಕ್ಷೆ ಇದೆ. ಹಾಗಾಗಗಿ ಈ ಬಾರಿಯ ಹೊಸ ವರ್ಷವನ್ನು ಇದೇ ಹಾಡಿನೊಂದಿಗೆ ಬರ ಮಾಡಿಕೊಳ್ಳ ಬಹುದಾಗಿದೆ.

ಚಂದನ್ ಶೆಟ್ಟಿ ನಿರ್ದೇಶನ ಮಾಡಿದ ಕೊನೆಯ ಆಲ್ಬಂ ಹಾಡು 'ಪಾರ್ಟಿ ಫ್ರಿಕ್' ಈ ಹಾಡಿನಲ್ಲಿ ನಟಿ ನಿಶ್ವಿಕಾ ನಾಯ್ಡು, ಚಂದನ್ ಶೆಟ್ಟಿ ಜೊತೆಗೆ ಚಂದನ್‌ ಪತ್ನಿ ನಿವೇದಿತಾ ಗೌಡ ಕೂಡ ಕಾಣಿಸಿ ಕೊಂಡಿದ್ದರು.

ಇದೀಗ ರಚಿತಾ ರಾಮ್ ಜೊತೆಗೆ ನಟ ಚಂದನ್ ಶೆಟ್ಟಿ ಕೈಜೋಡಿಸಿದ್ದಾರೆ. ಈ ಹಾಡು ಪಾರ್ಟಿ ಪ್ರಿಯರಿಗೆ ಬಿಗ್‌ ಗಿಫ್ಟ್ ಆಗುವ ಎಲ್ಲಾ ಸಾಧ್ಯತೆ ಇದೆ. ಇನ್ನೂ ಸದ್ಯದಲ್ಲಿಯೇ ಈ ಹಾಡಿನ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ.

More from Filmibeat

English summary
Actress Rachita Ram To Dance In Chandan Shetty Song, Shooting In progress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X