For Quick Alerts
    ALLOW NOTIFICATIONS  
    For Daily Alerts

    ಮೆಟ್ರೋ ಪ್ರಯಾಣ ಮಾಡಿ, ಆಸೆ ಈಡೇರಿಸಿಕೊಂಡ ರಚಿತಾ

    |
    ಮೆಟ್ರೋ ಪ್ರಯಾಣ ಮಾಡಿ, ಆಸೆ ಈಡೇರಿಸಿಕೊಂಡ ರಚಿತಾ | Rachitha Ram

    ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ, ತಮ್ಮ ಅನುಭವ ಹಂಚಿಕೊಂಡಿದ್ದರು. ಇದೀಗ, ಈಗ ನಟಿ ರಚಿತಾ ರಾಮ್ ಸರದಿ ಬಂದಿದೆ.

    ದೊಡ್ಡ ದೊಡ್ಡ ಕಾರ್ ಗಳಲ್ಲಿ ಓಡಾಡುವ ಸ್ಟಾರ್ ಗಳಿಗೆ ಮೆಟ್ರೋ ಪ್ರಯಾಣ ಹೇಗಿರುತ್ತದೆ ಎನ್ನುವ ಕುತೂಹಲ ಇರುತ್ತದೆ. ಅದೇ ಕಾರಣದಿಂದ ಅನೇಕ ಸ್ಟಾರ್ ಗಳು ಆಗಾಗ ಮೆಟ್ರೋ ಪ್ರಯಾಣ ಮಾಡುತ್ತಾರೆ. ಇದೀಗ ರಚಿತಾ ರಾಮ್ ಮೊದಲ ಬಾರಿಗೆ ಮೆಟ್ರೋ ಸವಾರಿ ಮಾಡಿದ್ದಾರೆ.

    'ಏಪ್ರಿಲ್' ನಲ್ಲಿ ರಚಿತಾಗೆ ಜೋಡಿಯಾಗಲಿದ್ದಾರೆ ಚಿರಂಜೀವಿ ಸರ್ಜಾ'ಏಪ್ರಿಲ್' ನಲ್ಲಿ ರಚಿತಾಗೆ ಜೋಡಿಯಾಗಲಿದ್ದಾರೆ ಚಿರಂಜೀವಿ ಸರ್ಜಾ

    ಸಾಮಾನ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸ್ಟಾರ್‌ ಗಳು ಓಡಾಡುವುದು ಸ್ವಲ್ಪ ಕಷ್ಟ ಆಗುತ್ತದೆ. ಸಾಕಷ್ಟು ಅಭಿಮಾನಿಗಳು, ಜನರು ಅವರ ಹಿಂದೆ ಬೀಳುವುದು ಕೆಲವು ಬಾರಿ ಕಿರಿ ಕಿರಿ ಆಗುತ್ತದೆ. ಈ ಕಾರಣದಿಂದ ಯಾರಿಗೂ ತಿಳಿಯದ ಹಾಗೆ ರಚಿತಾ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೆಟ್ರೋದಲ್ಲಿ ಹೋಗಿ ಬಂದಿದ್ದಾರೆ.

    ಮೆಟ್ರೋ ನಿಲ್ದಾಣದಲ್ಲಿ ನಿಂತಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ರಚಿತಾ ರಾಮ್ ಹಂಚಿಕೊಂಡಿದ್ದಾರೆ. ಮೆಟ್ರೋ ಪ್ರಯಾಣ ಮಾಡಿಸಿದ ತೇಜು ಕಾರಂತಿಗೆ ಧನ್ಯವಾದ ಹೇಳಿದ್ದಾರೆ.

     ಅಮ್ಮ ಕೊಡಿಸಿದ ಸೀರೆಯಲ್ಲಿ ಮಿಂಚಿದ ಡಿಂಪಲ್ ಕ್ವೀನ್ ರಚಿತಾ ರಾಮ್ ಅಮ್ಮ ಕೊಡಿಸಿದ ಸೀರೆಯಲ್ಲಿ ಮಿಂಚಿದ ಡಿಂಪಲ್ ಕ್ವೀನ್ ರಚಿತಾ ರಾಮ್

    ರಚಿತಾ ರಾಮ್ ಸದ್ಯ, 'ಆಯುಷ್ಮಾನ್ ಭವ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಶಿವರಾಜ್ ಕುಮಾರ್ ಜೊತೆಗೆ ಬುಲ್ ಬುಲ್ ಹುಡುಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

    English summary
    Kannada actress Rachita Ram travels in Bengaluru Metro.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X