Rachita Ram: ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಶೀರ್ವಾದ ಪಡೆದ ಡಿಂಪಲ್ ಕ್ವೀನ್ ರಚಿತಾ ರಾಮ್
ದಕ್ಷಿಣ ಕನ್ನಡದ ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ಭ್ರಮರ ಇಂಚರ ನುಡಿ ಹಬ್ಬ ಕಾರ್ಯಕ್ರಮ ನಡೆಯುತ್ತಿದೆ. ಸಮಾರಂಭಕ್ಕೆ ಅತಿಥಿಯಾಗಿ ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಹಾಜರಾಗಿದ್ದಾರೆ.
ಭ್ರಮರ ಇಂಚರ ನುಡಿ ಹಬ್ಬ ಕಾರ್ಯಕ್ರಮಕಲ್ಲಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿ, ಅವರ ಜೊತೆಗೆ ಸಂವಾದ ನಡೆಸಿದ್ದಾರೆ. ಕಾರ್ಯಕ್ರಮದದ ಜೊತೆಗೆ ಕರಾವಳಿಯ ಪುಣ್ಯಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಚಂದದ ಸೀರೆಯುಟ್ಟು ದೇವಸ್ಥಾನದಲ್ಲಿ ದುರ್ಗಾಪರಮೇಶ್ವರಿ ಆಶೀರ್ವಾದ ಪಡೆದಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಸನ್ನಿದಿಯಲ್ಲಿ ಡಿಂಪಲ್ ಕ್ವೀನ್
ಮೊದಲ ಬಾರಿಗೆ ಪುಣ್ಯಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಚಿತಾ ರಾಮ್ ಭೇಟಿ ನೀಡಿದ್ದಾರೆ. ಇದೇ ಕಾರಣಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇಗುಲದ ಅರ್ಚಕ ವೆಂಕಟರಮಣ ಅಸ್ರಣ್ಣ ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ನಟಿಯನ್ನು ಗೌರವಿಸಿದ್ದಾರೆ.
ಕಟೀಲು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ರಚಿತಾ ರಾಮ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಚಿತಾ ರಾಮ್ ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ವಿದ್ಯಾಥಿಗಳು ನಟಿ ರಚಿತಾ ರಾಮ್ ಅವರ ಡ್ರಾಯಿಂಗ್ ಮಾಡಿ ಕೊಡುಗೆಯಾಗಿ ನೀಡಿದ್ದಾರೆ. ವಿದ್ಯಾರ್ಥಿನಿಯನ್ನು ಅಪ್ಪಿ ಧನ್ಯವಾದ ಹೇಳಿದ ರಚಿತಾ, ವಿದ್ಯಾರ್ಥಿಗಳಿಗೆ ತಮ್ಮ ಜೀವನ ಹೇಗೆ ರೂಪಿಸಿಕೊಳ್ಳಬೇಕು, ತಂದೆ- ತಾಯಿಗೆ ಗೌರವ ಕೊಡುವುದು ಸೇರಿದಂತೆ ಹಲವು ಕಿವಿಮಾತು ಹೇಳಿದ್ದಾರೆ.

ನುಡಿ ಹಬ್ಬದಲ್ಲಿ ರಂಗಭೂಮಿ ಮತ್ತು ಸಿನಿಮಾ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಬುಲ್ ಬುಲ್ ರಚಿತಾ ರಾಮ್, "ಜೀವನದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಮಿಸ್ ಮಾಡದೇ ಸದುಪಯೋಗಪಡಿಸಿಕೊಳ್ಳಿ. ಅದುವೇ ನಮ್ಮ ಬದುಕಿನ ದಾರಿದೀಪವಾಗಬಹುದು. ಸಿಕ್ಕ ಅವಕಾಶ, ಸಮಯ ಮಿಸ್ ಮಾಡಿದ್ರೆ ಮತ್ತೆ ಸಿಗೋದಿಲ್ಲ. ನಿಮ್ಮೊಳಗಿನ ಟ್ಯಾಲೆಂಟ್ ಬಚ್ಚಿಟ್ಕೋಬೇಡಿ "ಎಂದು ರಚಿತಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಅತ್ಯಂತ ಲವಲವಿಕೆಯಿಂದ ಇದ್ದ ರಚಿತಾ ರಾಮ್, ಮಕ್ಕಳನ್ನು ವೇದಿಕೆಗೆ ಕರೆದು ಮಾತನಾಡಿಸಿ, ಹಾಡು ಹಾಡಿಸಿ, ನಕ್ಕು ನಗಿಸಿದ್ದಾರೆ. ಅಷ್ಟು ದೊಡ್ಡ ನಟಿಯಾದರೂ ಕೂಡ ಇಷ್ಟು ಸರಳವಾಗಿರುವುದು, ವಿದ್ಯಾರ್ಥಿಗಳ ಜೊತೆಗೆ ಬೆರೆಯುವುದನ್ನು ಕಂಡು ಕಟೀಲು ಶ್ರೀ ದುರ್ಗಾಪರಮೇಶ್ವರಿ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೂ ಫುಲ್ ಖುಷಿ ಆಗಿದ್ದಾರೆ.


Click it and Unblock the Notifications











