ಹುಟ್ಟುಹಬ್ಬದ ಸಂಭ್ರಮದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಇಂದು ಹುಟ್ಟುಹಬ್ಬ ಸಂಭ್ರಮ. ರಚಿತಾ ಸರಳವಾಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಡಿಂಪಲ್ ಕ್ವೀನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸಿನಿಮಾ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸುತ್ತಿದ್ದಾರೆ.

ರಚಿತಾ ಹುಟ್ಟುಹಬ್ಬದ ಪ್ರಯುಕ್ತ ಇಂದು 'ಮ್ಯಾಟ್ನಿ' ಸಿನಿಮಾದ ಬರ್ತಡೇ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಗಿಫ್ಟ್ ಆಗಿ ನೀಡಲಾಗಿದೆ. ಅಂದ್ಹಾಗೆ ರಚಿತಾ 'ಮ್ಯಾಟ್ನಿ' ಮೂಲಕ ಮತ್ತೆ ನೀನಾಸಂ ಸತೀಶ್ ಜೊತೆ ನಟಿಸುತ್ತಿದ್ದಾರೆ.

ನಿನ್ನೆಯಷ್ಟೆ 'ಮ್ಯಾಟ್ನಿ' ಸಿನಿಮಾದ ಲುಕ್ ರಿವೀಲ್ ಮಾಡುವ ಮೂಲಕ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. ಇಂದು ರಚಿತಾ ಹುಟ್ಟುಹಬ್ಬದ ಪ್ರಯುಕ್ತ ರಚಿತಾ ಲುಕ್ ರಿಲೀಸ್ ಮಾಡಲಾಗಿದೆ. 'ಅಯೋಗ್ಯ' ಸಿನಿಮಾ ಬಳಿಕ ರಚಿತಾ ಮತ್ತ ನೀನಾಸಂ ಸತೀಶ್ ಎರಡನೇ ಬಾರಿಗೆ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಳ್ಳುತ್ತಿರುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Actress Rachitha Ram Celebrating Her Birthday Very Simple

'ಮ್ಯಾಟ್ನಿ' ಮನೋಹರ್ ಕಾಂಪಲ್ಲಿ ಸಾರಥ್ಯದಲ್ಲಿ ಬರುತ್ತಿರುವ ಸಿನಿಮಾ. ಪೂರ್ಣಚಂದ್ರ ತೇಜಸ್ವಿ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸತೀಶ್ ಅಭಿನಯದ 'ಲೂಸಿಯಾ' ಸಿನಿಮಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದರು.

ರಚಿತಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಮತ್ತಷ್ಟು ಸಿನಿಮಾದ ಪೋಸ್ಟರ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗುವ ಸಾಧ್ಯತೆ ಇದೆ. 10ಕ್ಕು ಹೆಚ್ಚು ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ತೆಲುಗು ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಬಹುತೇಕ ಸಿನಿಮಾಗಳು ಮುಂದಿನ ವರ್ಷ ರಿಲೀಸ್ ಆಗುವ ಸಾಧ್ಯತೆ ಇದೆ.

Recommended Video

Abhishek Ambarish ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಟ್ಟ ದುನಿಯಾ ಸೂರಿ | Bad Manners | Oneindia Kannada

More from Filmibeat

English summary
Actress Rachitha Ram celebrating her birthday very simple. Matinee movie poster release on her birthday special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X