ಫ್ಯಾನ್ಸ್‌ಗೆ ಮನೆ ಅಡ್ರೆಸ್ ಕೊಟ್ಟು ಆಹ್ವಾನ ನೀಡಿದ ಸ್ಯಾಂಡಲ್‌ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ!

ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ, ನಟಿಯರ ಬರ್ತ್‌ಡೇ ಒಂದು ರೀತಿ ಹಬ್ಬವಿದ್ದಂತೆ. ಆ ದಿನವನ್ನು ಅವರ ಜೊತೆಗೆ ಕಳೆಯಬೇಕು. ಇಲ್ಲ ಕೆಲ ಕಾಲವಾದರೂ ಅವರನ್ನು ಭೇಟಿಯಾಗಿ ಮಾತನಾಡಿಸಿ ವಿಶ್ ಮಾಡಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಸೆಯಾಗಿರುತ್ತೆ. ಆದರೆ, ಎಲ್ಲಾ ಹೀರೋ, ಹಿರೋಯಿನ್‌ಗಳು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ.

ಕೆಲ ನಟ, ನಟಿಯರು ತಮ್ಮ ಹುಟ್ಟುಹಬ್ಬವನ್ನು ಖಾಸಗಿಯಾಗಿ ಆಚರಿಸಿಕೊಳ್ಳುತ್ತಾರೆ. ಕೆಲವೇ ಕೆಲವು ಆಪ್ತರ ಜೊತೆಯಲ್ಲಿ ಸಂಭ್ರಮಿಸುತ್ತಾರೆ. ಇದೇ ಲಿಸ್ಟ್‌ನಲ್ಲಿ ಕನ್ನಡ ಚಿತ್ರರಂಗದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಕೂಡ ಇದ್ದಾರೆ. ಹಲವು ವರ್ಷಗಳಿಂದ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಆದರೆ, ಈ ಬಾರಿ ಅವರ ನಿರ್ಧಾರ ಬದಲಾಗಿದೆ.

radhika-kumaraswamy-to-celebrate-birthday

ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ ಸ್ವೀಟಿ

ಕೊರೊನಾ ಕಾರಣದಿಂದ ಹಲವು ಮಂದಿ ಕಲಾವಿದರು ಅದ್ಧೂರಿ ಬರ್ತ್‌ಡೇ ಸಮಾರಂಭಗಳಿಂದ ದೂರವಿದ್ದರು. ಮನೆಗಳ ಬಳಿ ಬರುವ ಅಭಿಮಾನಿಗಳಿಗೂ ಕೂಡ ಬರದಂತೆ ಮನವಿ ಮಾಡಿದ್ದರು. ಫ್ಯಾನ್ಸ್‌ಗಳಿಂದ ತಪ್ಪಿಸಿಕೊಳ್ಳಲು ಬೇರೆ ಊರುಗಳಿಗೂ ತೆರಳಿದ್ದರು. ಸದ್ಯಕ್ಕೆ ಎಲ್ಲಾ ಹದಕ್ಕೆ ಬಂದಿದ್ದು, ಸ್ಟಾರ್ ನಟರು ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ.

ಕೆಲವು ವರ್ಷಗಳಿಂದ ಬರ್ತ್ಡೇ ಆಚರಿಸಿಕೊಳ್ಳದ ನಟಿ ರಾಧಿಕಾ ಕುಮಾರಸ್ವಾಮಿ ಈ ಬಾರಿ ಹುಟ್ಟುಹಬ್ಬ ಸೆಲಬ್ರೆಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ವಿಡಿಯೋವನ್ನು ಮಾಡಿ ಅಭಿಮಾನಗಳಿಗೆ ಆಹ್ವಾನ ನೀಡಿದ್ದಾರೆ. ನವೆಂಬರ್ 11ರಂದು ಸ್ವೀಟಿಯ ಹುಟ್ಟುಹಬ್ಬವಿದೆ.

ಅಭಿಮಾನಿಗಳಿಗೆ ಮನೆ ವಿಳಾಸ ಕೊಟ್ಟು ಆಹ್ವಾನ ನೀಡಿದ ರಾಧಿಕಾ ಕುಮಾರಸ್ವಾಮಿ

ನವೆಂಬರ್ 11ರಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿರುವ ರಾಧಿಕಾ ಕುಮಾರಸ್ವಾಮಿ, ಈ ಬಾರಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. "ಎಲ್ಲರಿಗೂ ನಮಸ್ಕಾರ. ಎಷ್ಟೋ ವರ್ಷಗಳಿಂದ ನಾನು ನನ್ನ ಅಭಿಮಾನಿಗಳನ್ನು ಭೇಟಿ ಮಾಡೋಕೆ ಆಗಿರಲಿಲ್ಲ. ಅದ್ಕಕೆ ಈ ವರ್ಷ ನನ್ನ ಹುಟ್ಟುಹಬ್ಬವನ್ನು ನನ್ನ ಮನೆಯಲ್ಲಿ ನಿಮ್ಮ ಜೊತೆ ಆಚರಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೇನೆ. ಇದೇ ನವೆಂಬರ್ 11ರಂದು ಶನಿವಾರ ನನ್ನ ಮನೆಯಲ್ಲಿ ಸಂಜೆ 6.30 ರಿಂದ 9 ಗಂಟೆವರೆಗೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಿಸಿಕೊಳ್ಳುತ್ತಿದ್ದಿನಿ. ಹೀಗಾಗಿ ಶನಿವಾರ ಸಿಗೋಣ. ಲವ್ ಯು ಆಲ್.. ಬೈ.. ನಮಸ್ಕಾರ" ಎಂದು ಆಹ್ವಾನ ನೀಡಿದ್ದಾರೆ.

radhika-kumaraswamy-to-celebrate-birthday

ಅಭಿಮಾನಿಗಳು ಎಲ್ಲಿ ಭೇಟಿಯಾಗಬೇಕು ಎಂದು ಪಿನ್‌ಕೋಡ್ ಸಮೇತ ವಿಳಾಸ ಕೂಡ ನೀಡಿದ್ದಾರೆ. ವಿಳಾಸ ಈ ಕೆಳಗಿನಂತಿದೆ. 10/11 ಎರಡನೇ ಮುಖ್ಯರಸ್ತೆ, ಎರಡನೇ ಕ್ರಾಸ್.. ಆರ್​ಎಂವಿ ಎರಡನೇ ಸ್ಟೇಜ್, ಮೂರನೇ ಬ್ಲಾಕ್ ನ್ಯೂ ಬೆಲ್ ರೋಡ್, ಡಾಲರ್ಸ್ ಕಾಲೋನಿ, ಬೆಂಗಳೂರು- 560094.

ರಾಧಿಕಾ ಅವರ ವಿಡಿಯೋಗೆ ಹಲವು ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಈಗಾಗಲೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಯೊಬ್ಬರು, " ಹಾಯ್ ರಾಧಿಕಾ ಮ್ಯಾಮ್.. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮ್ಯಾಮ್.. ನಗ್ತಾ ಹೀಗೆ ಮುದ್ದು ಮುದ್ದಾಗಿರಿ.... ನಂದೊಂದು ಪ್ರಶ್ನೆ ಇಷ್ಟೊಂದು ಮುದ್ದಾಗಿದಿರಲ್ಲಾ ಹೆಂಗದು..." ಎಂದು ಪ್ರಶ್ನೆ ಜೊತೆಗೆ ಮುದ್ದಾದ ಹೊಗಳಿಕೆ ನೀಡಿದ್ದಾರೆ.

ಕೆಲವು ಕಾಲ ಸಿನಿಮಾದಿಂದ ದೂರವಿದ್ದ ಅವರು ಈಗ ಮತ್ತೆ ಬಣ್ಣ ಹಚ್ಚಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಚಿತ್ರ ಇನ್ನೇನು ಬಿಡುಗಡೆ ಹಂತದಲ್ಲಿ. ಇನ್ನು ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಜೊತೆಗೆ ನಟಿಸಿರುವ ಅಜಾಗ್ರತ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

More from Filmibeat

English summary
Radhika Kumaraswamy to celebrate birthday with fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X