ಯಾರೆಲೇ ನಿನ್ನ ಮುದ್ದು ಗಂಡ ಎಂದಿದ್ದಕ್ಕೇ ನಾಚಿ ನೀರಾದ ನಟಿ ರಾಧಿಕಾ ಕುಮಾರಸ್ವಾಮಿ!

ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿದ್ದಾರೆ. ಹಲವು ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಫ್ಯಾನ್ಸ್‌ಗೆ ಮನರಂಜನೆ ನೀಡುತ್ತಾರೆ. ಕ್ರಿಸ್ಮಸ್ ಹಬ್ಬದಲ್ಲಿಯೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದರು. ಆ ವಿಡಿಯೋ ಕೂಡ ವೈರಲ್ ಆಗಿತ್ತು.

ಇನ್ನು, ಇತ್ತೀಚೆಗೆ ನಟಿ ರಾಧಿಕಾ ಕುಮಾರಸ್ವಾಮಿ, ಸಿಪಾಯಿ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈಗಾಗಲೇ ಎಂಟೂವರೆ ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿರುವ ಈ ರೀಲ್ಸ್‌ಗೆ ನೆಟ್ಟಿಗರು ತರಾವರಿ ಕಾಮೆಂಟ್‌ಗಳನ್ನು ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

Actress Radhika Kumaraswamys Sipayi movie Songs Reels went viral

ಯಾರಲೇ ನಿನ್ನ ಮೆಚ್ಚಿದವನು ಹಾಡಿಗೆ ರಾಧಿಕಾ ಸಕತ್ ಸ್ಟೆಪ್ಸ್

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಸಿಪಾಯಿ ಸಿನಿಮಾದ 'ಯಾರಲೇ ನಿನ್ನ ಮೆಚ್ಚಿದವನು' ಹಾಡಿಗೆ ನಟಿ ರಾಧಿಕಾ ಕುಮಾರಸ್ವಾಮಿ ಸೊಂಟ ಬಳುಕಿಸಿದ್ದಾರೆ. ಸೀರೆಯುಟ್ಟು ನವಿಲಿನಂತೆ ನುಲಿದಿದ್ದು, ನೆಟ್ಟಿಗರು ಕಾಮೆಂಟ್ ಮೂಲಕ ಯಾರಲೇ ನಿನ್ನ ಮುದ್ದು ಗಂಡ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ತಾವೇ ಉತ್ತರವನ್ನು ನೀಡಿದ್ದಾರೆ.

ನಟಿ ರಾಧಿಕಾ ಕುಮಾರಸ್ವಾಮಿ ಇಲ್ಲಿಯವರೆಗೂ ತಮ್ಮ ಗಂಡನ ಹೆಸರನ್ನು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಕಡು ನೀಲಿ ಮತ್ತು ಗುಲಾಬಿ ಬಣ್ಣದ ಸೀರೆಯುಟ್ಟು, ಕೈ ತುಂಬಾ ಬಲೆಗಳು, ಮೂಗಿಗೆ ಮೂಗುತಿ, ಕೊರಳಿಗೆ ಚಮದನೆಯ ಚೋಕರ್ ಹಾಕಿ ಸೊಂಟ ಬಳುಕಿಸಿದ್ದಾರೆ. ಯಾರಲೇ ನಿನ್ನ ಮುದ್ದು ಗಂಡ ಎಂದಾಗ ನಾಚಿ ನಲಿದಿದ್ದಾರೆ.

Actress Radhika Kumaraswamys Sipayi movie Songs Reels went viral

ಯಾರಲೇ ನಿನ್ನ ಮುದ್ದು ಗಂಡ ಎಂದ ನೆಟ್ಟಿಗರು!

ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ, ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸೌಂದರ್ಯ ನಟನೆಯ ಸಿಪಾಯಿ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಮತ್ತಷ್ಟು ಸ್ಲಿಮ್ ಮತ್ತು ಸುಂದರವಾಗಿ ಕಾಣಿಸುತ್ತಿದ್ದಾರೆ. ಅದಕ್ಕೆ ಯಾರಲೇ ನಿನ್ನ ಮುದ್ದು ಗಂಡ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.ಜೊತೆಗೆ ಸ್ವೀಟಿ, ರಾಧಿಕಾ ಮೇಡಂ ಬ್ಯೂಟಿ ಕ್ವೀನ್ ಆಫ್ ಕರ್ನಾಟಕ, ಓಲ್ಡ್ ಐಸ್ ಗೋಲ್ಡ್ ಕನ್ನಡ ಸಾಂಗ್, ನಿಮ್ಮ ಸೊಂಟ ಸೂಪರ್ ಆಗಿದೆ, ಹೀಗೆ ನಿಮ್ಮ ಅಂದವನ್ನು ಮೆಂಟೈನ್ ಮಾಡಿ, ಸೂಪರ್ ಮೇಡಂ ನಿಮ್ಮ ಭೈರಾದೇವಿ ಸಿನಿಮಾ ಯಶಸ್ಸು ಗಳಿಸಲಿ ಎಂದು ಹಲವು ಮಂದಿ ಕಾಮೆಂಟ್ ಮಾಡಿದ್ದಾರೆ.

ರಾಧಿಕಾ ಕುಮಾರಸ್ವಾಮಿ

ನಿನಗಾಗಿ, ಅಣ್ಣ ತಂಗಿ, ತವರಿಗೆ ಬಾ ತಂಗಿ, ಹಠವಾದಿ, ಸ್ವೀಟಿ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸದ್ಯ 'ಅಜಾಗ್ರತ' ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರು ಕೂಡ ಹಲವು ರಿಲ್ಸ್‌ಗಳಿಗೆ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಶೇಕ್ ಇಟ್ ಪುಷ್ಪವತಿ ಎಂದು ನಟ ಶ್ರೇಯಸ್ ಜೊತೆಗೆ ಮಾಡಿದ್ದ ರೀಲ್ಸ್ ಸಕತ್ ಹಿಟ್ ಆಗಿತ್ತು. ಇತ್ತೀಚೆಗೆ ನಟ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದ್ದರು. ಈಗ ಸುಧಾರಿಸಿಕೊಂಡಿದ್ದಾರೆ.

More from Filmibeat

English summary
Actress Radhika Kumaraswamy's new video went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X