ಫಿಲ್ಮೀಬೀಟ್ ಲೈವ್: ಅಭಿಮಾನಿಗಳ ಪ್ರಶ್ನೆಗೆ ನಟಿ ರಾಧಿಕಾ ನಾರಾಯಣ್ ಉತ್ತರಗಳು

ರಂಗಿತರಂಗ ಮೂಲಕ ಸಿನಿಪಯಣ ಆರಂಭಿಸಿದ ಪ್ರತಿಭಾವಂತ ನಟಿ ರಾಧಿಕಾ ನಾರಾಯಣ್ ಫಿಲ್ಮೀಬೀಟ್ ಕನ್ನಡ ಫೇಸ್‌ಬುಕ್ ಮೂಲಕ ಲೈವ್ ಬಂದಿದ್ದರು. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ಸಾಹದಿಂದ ಉತ್ತರಿಸಿದರು.

ಮೆಚ್ಚಿನ ನಟಿಗೆ ಸಿನಿಮಾ, ಹವ್ಯಾಸ, ನೆಚ್ಚಿನ ನಟ, ನಟಿ, ಊರು, ಮದುವೆ ಹೀಗೆ ಹಲವು ವಿಷಯಗಳ ಬಗ್ಗೆ ಅಭಿಮಾನಿಗಳು ಪ್ರಶ್ನೆ ಕೇಳಿದರು. ಎಲ್ಲಾ ಪ್ರಶ್ನೆಗೆ ಉತ್ಸಾಹದಿಂದ ಉತ್ತರಿಸಿದರು ನಟಿ ರಾಧಿಕಾ ನಾರಾಯಣ್.

ಲಾಕ್‌ಡೌನ್ ಕಾರಣಕ್ಕೆ ಮನೆಯಲ್ಲಿರುವ ನಟಿ ರಾಧಿಕಾ ನಾರಾಯಣ್, ಅಡುಗೆ ಮಾಡುವ ಕಾರ್ಯವನ್ನು ಮಾಡುತ್ತಿದ್ದಾರಂತೆ. ಅಡುಗೆ ಮಾಡಿ ಬಡಿಸುವುದರಲ್ಲಿ ಒಂದು ರೀತಿಯ ಆನಂದ ಇದೆ ಎಂಬುದು ಅವರು ಕಂಡುಕೊಂಡ ಸತ್ಯ.

ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ರಾಧಿಕಾ ನಾರಾಯಣ್ ಉತ್ತರ

ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ರಾಧಿಕಾ ನಾರಾಯಣ್ ಉತ್ತರ

ಮದುವೆ ಯೋಚನೆಗಳಿವೆಯೇ? ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ನೇರವಾಗಿ 'ಸದ್ಯಕ್ಕಿಲ್ಲ' ಎಂದರು ರಾಧಿಕಾ. ಈಗ ಆ ಬಗ್ಗೆ ಮಾತೇ ಬೇಡ ಎಂದು ಪ್ರಶ್ನೆಯನ್ನು ಪಾಸ್ ಮಾಡಿಬಿಟ್ಟರು ರಂಗಿತರಂಗ ನಟಿ.

ಸಿನಿಮಾಕ್ಕೆ ಬಂದಿದ್ದು ಹೇಗೆ?

ಸಿನಿಮಾಕ್ಕೆ ಬಂದಿದ್ದು ಹೇಗೆ?

ಸಿನಿಮಾಕ್ಕೆ ಬಂದಿದ್ದು ಆಕಸ್ಮಿಕವಾಗಿಯೋ ಅಥವಾ ಇಚ್ಛೆಯಿಂದಲೋ ಎಂಬುದಕ್ಕೆ ಎರಡನೇ ಆಯ್ಕೆ ಆರಿಸಿಕೊಂಡರು ರಾಧಿಕಾ. ಮೊದಲಿಗೆ ಇಂಗ್ಲಿಷ್, ಕನ್ನಡ ನಾಟಕಗಳಲ್ಲಿ ನಟಿಸುತ್ತಿದ್ದ ರಾಧಿಕಾ, ರಂಗಿತರಂಗ ಮೂಲಕ ಸಿನಿಮಾ ಪ್ರವೇಶಿಸಿದರು. ರಂಗಿತರಂಗ ಅವರ ನಟನೆಯ ಮೆಚ್ಚಿನ ಸಿನಿಮಾವಂತೆ.

ಇಷ್ಟದ ನಟ-ನಟಿ ಯಾರು?

ಇಷ್ಟದ ನಟ-ನಟಿ ಯಾರು?

ಇಷ್ಟದ ನಟ ರಮೇಶ್ ಅರವಿಂದ್ ಮತ್ತು ಪುನೀತ್ ರಾಜ್‌ಕುಮಾರ್. ಶಿವಾಜಿ ಸೂರತ್ಕಲ್ ಸಿನಿಮಾದಲ್ಲಿ ರಮೇಶ್ ಅವರೊಂದಿಗೆ ನಟಿಸಿ ಅವರ ವ್ಯಕ್ತಿತ್ವಕ್ಕೆ, ಶಿಸ್ತಿಗೆ ಮಾರು ಹೋಗಿರುವ ರಾಧಿಕಾ, ಹಿರಿಯ ನಟನನ್ನು ಗೌರವ ಭಾವದಿಂದ ಹೊಗಳಿದರು. ಅವರ ವ್ಯಕ್ತಿತ್ವ, ಶಿಸ್ತು ಅನುಕರಣೀಯ ಎಂದರು. ಪುನೀತ್ ನಟನೆ ಮತ್ತು ಡಾನ್ಸ್ ಇಷ್ಟವಂತೆ. ಇನ್ನು ಇಷ್ಟದ ನಟಿ ಲಕ್ಷ್ಮಿ ಮತ್ತು ಮಾಧುರಿ ದೀಕ್ಷಿತ್. ಮಾಧುರಿ ಅವರಂತಾಗುವ ಕನಸನ್ನು ಬಾಲ್ಯದಲ್ಲಿಯೇ ಕಂಡಿದ್ದರಂತೆ ರಾಧಿಕಾ.

ಜೆನ್ ಟ್ಯಾಂಗಲ್ ಚಿತ್ರಕಲೆ

ಜೆನ್ ಟ್ಯಾಂಗಲ್ ಚಿತ್ರಕಲೆ

ಬಿಡುವಿನ ಸಮಯದಲ್ಲಿ 'ಜೆನ್ ಟ್ಯಾಂಗಲ್' ಎಂಬ ಭಿನ್ನ ಬಗೆಯ ಚಿತ್ರಕಲೆ ಮಾಡುತ್ತಿರುವುದಾಗಿ ಹೇಳಿದ ರಾಧಿಕಾ, ಇದು ಮನಸ್ಸಿಗೆ ಶಾಂತಿ ಒದಗಿಸುತ್ತದೆ. ಪೆನ್ಸಿಲ್ಲು, ಪೇಪರ್‌ ನಲ್ಲಿ ಸರಳವಾಗಿ ಮಾಡಬಹುದಾದ ಚಿತ್ರಕಲೆ ಇದಾಗಿದ್ದು, ಇದನ್ನು ಮಾಡುವುದರಿಂದ ಶಾಂತಿಯ ಅನುಭವವಾಗುತ್ತದೆ ಎಂದು ತಾವು ರಚಿಸಿದ ಚಿತ್ರವನ್ನು ತೋರಿಸಿದರು.

ಕಾಲಹರಣ ಬೇಡ, ಕೌಶಲ್ಯ ಕಲಿಯಿರಿ: ರಾಧಿಕಾ ನಾರಾಯಣ್

ಕಾಲಹರಣ ಬೇಡ, ಕೌಶಲ್ಯ ಕಲಿಯಿರಿ: ರಾಧಿಕಾ ನಾರಾಯಣ್

ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತು ಕಾಲಹರಣ ಮಾಡುವ ಬದಲಿಗೆ ಸಣ್ಣ-ಸಣ್ಣ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದು ಒಳ್ಳೆಯದು ಎಂದ ರಾಧಿಕಾ ನಾರಾಯಣ್, ಹೊಲಿಗೆ ಮಾಡುವುದು, ಅಡುಗೆ ಮಾಡುವುದು ಇಂಥಹಾ ಸಣ್ಣ-ಸಣ್ಣ ಕೌಶಲ್ಯಗಳನ್ನು ಕಲಿಯುವುದು ಒಳ್ಳೆಯದು ಎಂದರು.

ಚೇಸ್ ಸಿನಿಮಾ ಬಗ್ಗೆ ಭರವಸೆಯ ಮಾತು

ಚೇಸ್ ಸಿನಿಮಾ ಬಗ್ಗೆ ಭರವಸೆಯ ಮಾತು

ತಮ್ಮ ಮುಂದಿನ ಸಿನಿಮಾ ಚೇಸ್ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದ ರಾಧಿಕಾ ನಾರಾಯಣ್, 'ಸಿನಿಮಾದಲ್ಲಿ ಹೊಸ ರೀತಿಯ ಪಾತ್ರ ನಿರ್ವಹಿಸಿದ್ದೇನೆ ಇಲ್ಲಿ ನಾನು ಫೈಟ್ ಮಾಡಿದ್ದೇನೆ, ಚೇಸ್ ಮಾಡಿದ್ದೇನೆ, ಇದೆಲ್ಲಾ ನನಗೆ ಹೊಸ ಅನುಭವ, ಮೊದಲ ಬಾರಿಗೆ ಆಕ್ಷನ್ ದೃಶ್ಯಗಳಲ್ಲಿ ನಟಿಸುತ್ತಿದ್ದೇನೆ' ಲಾಕ್‌ಡೌನ್ ಮುಗಿದ ಕೆಲವೇ ತಿಂಗಳುಗಳ ಬಳಿಕ ಸಿನಿಮಾ ತೆರೆಗೆ ಬರಲಿದೆ ಎಂದರು.

More from Filmibeat

English summary
Actress Radhika Narayan came live in Kannada filmibeat Facebook page and answers fans questions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X