'ಯುವರತ್ನ'ನಿಗಾಗಿ 28 ವರ್ಷದ ನಂತರ ಕನ್ನಡಕ್ಕೆ ಬಂದ ಸೌತ್ ಸ್ಟಾರ್ ನಟಿ
Recommended Video

ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿದೆ. ರಾಜಕುಮಾರ ಚಿತ್ರದ ನಂತರ ಸಂತೋಷ್ ಆನಂದ ರಾಮ್ ಮತ್ತು ಪುನೀತ್ ಜೋಡಿಯಲ್ಲಿ ಈ ಸಿನಿಮಾ ಬರ್ತಿದ್ದು, ತುಂಬಾ ವರ್ಷದ ನಂತರ ಅಪ್ಪು ಕಾಲೇಜ್ ವಿದ್ಯಾರ್ಥಿಯಾಗಿ ನಟಿಸುತ್ತಿದ್ದಾರೆ.
ಪುನೀತ್ ಗೆ ಈ ಚಿತ್ರದಲ್ಲಿ ಸಯೇಶಾ ಸೈಗಲ್ ನಾಯಕಿಯಾಗಿ ನಟಿಸುತ್ತಿದ್ದು, ಧನಂಜಯ್, ವಸಿಷ್ಠ ಸಿಂಹ ಖಳನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ, ಯುವರತ್ನ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯ ಆಗಮನವಾಗಿದೆ.
ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯ ದಿಗ್ಗಜರ ಜೊತೆ ತೆರೆಹಂಚಿಕೊಂಡಿದ್ದ ಈ ನಟಿ 28 ವರ್ಷದ ಬಳಿಕ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿರುವುದು ನಿಜಕ್ಕೂ ವಿಶೇಷ. ಅಷ್ಟಕ್ಕೂ, ಯಾರು ಆ ನಟಿ? ಮುಂದೆ ಓದಿ......

'ಯುವರತ್ನ' ತಂಡ ಸೇರಿದ ರಾಧಿಕಾ
28 ವರ್ಷದ ಬಳಿಕ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗಿರುವ ರಾಧಿಕಾ ಶರತ್ ಕುಮಾರ್, ಯುವರತ್ನ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಮಾಹಿತಿಯನ್ನ ಸ್ವತಃ ನಿರ್ದೇಶಕರೇ ಖಚಿತ ಪಡಿಸಿದ್ದಾರೆ.

ಕನ್ನಡದ ಕೊನೆಯ ಚಿತ್ರ 'ನಾಗಿಣಿ'
ರಾಧಿಕಾ ಶರತ್ ಕುಮಾರ್ ಕನ್ನಡದಲ್ಲಿ ಒಟ್ಟು ನಾಲ್ಕು ಚಿತ್ರದಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಹೆಚ್ಚು ಸಕ್ರಿಯರಾಗಿದ್ದ ರಾಧಿಕಾ, ಪ್ರಚಂಡ ಕುಳ್ಳ, ಜೀವನ ಚಕ್ರ, ಸತ್ಯಂ ಶಿವಂ ಸುಂದರಂ ಹಾಗೂ ಕೊನೆಯದಾಗಿ ನಾಗಿಣಿ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಈಗ ಯುವರತ್ನಿಗಾಗಿ ಚಂದನವನಕ್ಕೆ ಎಂಟ್ರಿಯಾಗಿದ್ದಾರೆ.

ಆ ಚಿತ್ರದಲ್ಲಿ ಪತಿ, ಈ ಚಿತ್ರದಲ್ಲಿ ಪತ್ನಿ
ಅಂದ್ಹಾಗೆ, ರಾಧಿಕಾ ಅವರು ತಮಿಳು ನಟ ಶರತ್ ಕುಮಾರ್ ಅವರ ಪತ್ನಿ. ಸಂತೋಷ್ ಮತ್ತು ಪುನೀತ್ ಜೋಡಿಯ ರಾಜಕುಮಾರ ಚಿತ್ರದಲ್ಲಿ ಶರತ್ ಕುಮಾರ್ ನಟಿಸಿದ್ದರು. ಈಗ ಯುವರತ್ನ ಚಿತ್ರದಲ್ಲಿ ಅವರ ಪತ್ನಿ ರಾಧಿಕಾ ನಟಿಸುತ್ತಿರುವುದು ವಿಶೇಷವಾಗಿದೆ.

ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್
ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಯುವರತ್ನ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಪಕ್ಕಾ ಯೂತ್ ಕಥೆಯೊಂದಿಗೆ ಬರ್ತಿರುವ ಅಪ್ಪು ಲುಕ್ ಮತ್ತಷ್ಟು ಯಂಗ್ ಆಗಿದೆ. ಇದು ಸಹಜವಾಗಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಇನ್ನುಳಿದಂತೆ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗ್ತಿದೆ.


Click it and Unblock the Notifications











