For Quick Alerts
  ALLOW NOTIFICATIONS  
  For Daily Alerts

  'ಯುವರತ್ನ'ನಿಗಾಗಿ 28 ವರ್ಷದ ನಂತರ ಕನ್ನಡಕ್ಕೆ ಬಂದ ಸೌತ್ ಸ್ಟಾರ್ ನಟಿ

  |
  ಪುನೀತ್ ಗಾಗಿ 28 ವರ್ಷದ ನಂತರ ಕನ್ನಡಕ್ಕೆ ಬಂದ ಸೌತ್ ಸ್ಟಾರ್ ನಟಿ..!

  ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿದೆ. ರಾಜಕುಮಾರ ಚಿತ್ರದ ನಂತರ ಸಂತೋಷ್ ಆನಂದ ರಾಮ್ ಮತ್ತು ಪುನೀತ್ ಜೋಡಿಯಲ್ಲಿ ಈ ಸಿನಿಮಾ ಬರ್ತಿದ್ದು, ತುಂಬಾ ವರ್ಷದ ನಂತರ ಅಪ್ಪು ಕಾಲೇಜ್ ವಿದ್ಯಾರ್ಥಿಯಾಗಿ ನಟಿಸುತ್ತಿದ್ದಾರೆ.

  ಪುನೀತ್ ಗೆ ಈ ಚಿತ್ರದಲ್ಲಿ ಸಯೇಶಾ ಸೈಗಲ್ ನಾಯಕಿಯಾಗಿ ನಟಿಸುತ್ತಿದ್ದು, ಧನಂಜಯ್, ವಸಿಷ್ಠ ಸಿಂಹ ಖಳನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ, ಯುವರತ್ನ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯ ಆಗಮನವಾಗಿದೆ.

  ಪೌರಾಣಿಕ ಚಿತ್ರದಲ್ಲಿ ಪುನೀತ್ : ಅಪ್ಪು ಹೊಸ ಸಿನಿಮಾದ ಎಕ್ಸ್ ಕ್ಲೂಸಿವ್ ಮಾಹಿತಿ! ಪೌರಾಣಿಕ ಚಿತ್ರದಲ್ಲಿ ಪುನೀತ್ : ಅಪ್ಪು ಹೊಸ ಸಿನಿಮಾದ ಎಕ್ಸ್ ಕ್ಲೂಸಿವ್ ಮಾಹಿತಿ!

  ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯ ದಿಗ್ಗಜರ ಜೊತೆ ತೆರೆಹಂಚಿಕೊಂಡಿದ್ದ ಈ ನಟಿ 28 ವರ್ಷದ ಬಳಿಕ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿರುವುದು ನಿಜಕ್ಕೂ ವಿಶೇಷ. ಅಷ್ಟಕ್ಕೂ, ಯಾರು ಆ ನಟಿ? ಮುಂದೆ ಓದಿ......

  'ಯುವರತ್ನ' ತಂಡ ಸೇರಿದ ರಾಧಿಕಾ

  'ಯುವರತ್ನ' ತಂಡ ಸೇರಿದ ರಾಧಿಕಾ

  28 ವರ್ಷದ ಬಳಿಕ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗಿರುವ ರಾಧಿಕಾ ಶರತ್ ಕುಮಾರ್, ಯುವರತ್ನ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಮಾಹಿತಿಯನ್ನ ಸ್ವತಃ ನಿರ್ದೇಶಕರೇ ಖಚಿತ ಪಡಿಸಿದ್ದಾರೆ.

  ನಟ ಆರ್ಯ ಭಾವಿ ಪತ್ನಿಯೇ 'ಯುವರತ್ನ'ಗೆ ನಾಯಕಿನಟ ಆರ್ಯ ಭಾವಿ ಪತ್ನಿಯೇ 'ಯುವರತ್ನ'ಗೆ ನಾಯಕಿ

  ಕನ್ನಡದ ಕೊನೆಯ ಚಿತ್ರ 'ನಾಗಿಣಿ'

  ಕನ್ನಡದ ಕೊನೆಯ ಚಿತ್ರ 'ನಾಗಿಣಿ'

  ರಾಧಿಕಾ ಶರತ್ ಕುಮಾರ್ ಕನ್ನಡದಲ್ಲಿ ಒಟ್ಟು ನಾಲ್ಕು ಚಿತ್ರದಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಹೆಚ್ಚು ಸಕ್ರಿಯರಾಗಿದ್ದ ರಾಧಿಕಾ, ಪ್ರಚಂಡ ಕುಳ್ಳ, ಜೀವನ ಚಕ್ರ, ಸತ್ಯಂ ಶಿವಂ ಸುಂದರಂ ಹಾಗೂ ಕೊನೆಯದಾಗಿ ನಾಗಿಣಿ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಈಗ ಯುವರತ್ನಿಗಾಗಿ ಚಂದನವನಕ್ಕೆ ಎಂಟ್ರಿಯಾಗಿದ್ದಾರೆ.

  ಯುವರತ್ನನ ಪವರ್ ಹೆಚ್ಚಿಸಲು ಡಾಲಿ ಜೊತೆ ಚಿಟ್ಟೆನೂ ಎಂಟ್ರಿ.! ಯುವರತ್ನನ ಪವರ್ ಹೆಚ್ಚಿಸಲು ಡಾಲಿ ಜೊತೆ ಚಿಟ್ಟೆನೂ ಎಂಟ್ರಿ.!

  ಆ ಚಿತ್ರದಲ್ಲಿ ಪತಿ, ಈ ಚಿತ್ರದಲ್ಲಿ ಪತ್ನಿ

  ಆ ಚಿತ್ರದಲ್ಲಿ ಪತಿ, ಈ ಚಿತ್ರದಲ್ಲಿ ಪತ್ನಿ

  ಅಂದ್ಹಾಗೆ, ರಾಧಿಕಾ ಅವರು ತಮಿಳು ನಟ ಶರತ್ ಕುಮಾರ್ ಅವರ ಪತ್ನಿ. ಸಂತೋಷ್ ಮತ್ತು ಪುನೀತ್ ಜೋಡಿಯ ರಾಜಕುಮಾರ ಚಿತ್ರದಲ್ಲಿ ಶರತ್ ಕುಮಾರ್ ನಟಿಸಿದ್ದರು. ಈಗ ಯುವರತ್ನ ಚಿತ್ರದಲ್ಲಿ ಅವರ ಪತ್ನಿ ರಾಧಿಕಾ ನಟಿಸುತ್ತಿರುವುದು ವಿಶೇಷವಾಗಿದೆ.

  ಫೋಟೋ ಆಫ್ ದಿ ಡೇ: ಇದು ಇಂಡಸ್ಟ್ರಿಗೆ ಬೇಕಾಗಿರುವುದು.! ಫೋಟೋ ಆಫ್ ದಿ ಡೇ: ಇದು ಇಂಡಸ್ಟ್ರಿಗೆ ಬೇಕಾಗಿರುವುದು.!

  ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್

  ಕುತೂಹಲ ಹೆಚ್ಚಿಸಿದ ಫಸ್ಟ್ ಲುಕ್

  ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಯುವರತ್ನ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಪಕ್ಕಾ ಯೂತ್ ಕಥೆಯೊಂದಿಗೆ ಬರ್ತಿರುವ ಅಪ್ಪು ಲುಕ್ ಮತ್ತಷ್ಟು ಯಂಗ್ ಆಗಿದೆ. ಇದು ಸಹಜವಾಗಿ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಇನ್ನುಳಿದಂತೆ ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗ್ತಿದೆ.

  English summary
  Versatile actress Radikaa sharath kumar on board for Puneeth Rajkumar's Yuvarathnaa movie to play a pivotal role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X