»   » ನಟಿ ರಾಧಿಕಾ ಪಂಡಿತ್ ಬಣ್ಣದ ಕನಸು ಏನು ಗೊತ್ತಾ?

ನಟಿ ರಾಧಿಕಾ ಪಂಡಿತ್ ಬಣ್ಣದ ಕನಸು ಏನು ಗೊತ್ತಾ?

Posted By:
Subscribe to Filmibeat Kannada

ಆರಂಭದಿಂದಲೂ ಎಚ್ಚರಿಕೆಯ ನಡೆಯಿಡುತ್ತಾ ಬಂದಿರುವ ಬೆಡಗಿ ರಾಧಿಕಾ ಪಂಡಿತ್. ಅವರು ಅಭಿನಯಿಸಿರುವ ಚಿತ್ರಗಳ ಕಡೆಗೆ ಒಮ್ಮೆ ಕಣ್ಣು ಹಾಯಿಸಿದರೆ ಎಚ್ಚರಿಕೆ ನಡೆ ಎಂಬ ಮಾತನ್ನು ಒಪ್ಪಲೇಬೇಕಾಗುತ್ತದೆ. ಈ ಸ್ಯಾಂಡಲ್ ವುಡ್ ನ ಸಿಂಡ್ರೆಲಾಗೆ ಇಂದು (ಮಾ.7) ಹುಟ್ಟುಹಬ್ಬದ ಸಂಭ್ರಮ.

ಕಿರುತೆರೆಯ 'ನಂದಗೋಕುಲ'ದಿಂದ ಆರಂಭವಾದ ಇವರ ಬಣ್ಣದ ಪಯಣ ಇದೀಗ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ತನಕ ಸಾಗಿಬಂದು ಮುಂದುವರೆದಿದೆ. ರಾಧಿಕಾ ಅಭಿನಯಿಸಿದ ಒಂದು ಡಜನ್ ಚಿತ್ರಗಳಲ್ಲಿ ಬಹುತೇಕ ಬ್ಲಾಕ್ ಬಸ್ಟರ್ ಚಿತ್ರಗಳು ಎಂಬುದು ವಿಶೇಷ. [ಸ್ಯಾಂಡಲ್ ವುಡ್ ಫೇವರಿಟ್ ಜೋಡಿ ಇಲ್ಲಿದೆ ನೋಡಿ]

ಅಭಿನಯಕ್ಕೆ ನಿಂತರೆ ಪಾತ್ರದೊಳಗೆ ಕಳೆದುಹೋಗುವ ರಾಧಿಕಾ ಪಂಡಿತ್ ಅಬಿನಯಕ್ಕೇನೇ ಸತತ ಮೂರು ರಾಜ್ಯ ಪ್ರಶಸ್ತಿಗಳು ಸಂದಿವೆ. ಈ ಚೆಲುವೆಯ ಹುಟ್ಟುಹಬ್ಬಕ್ಕೆ ನಾವೂ ವಿಶ್ ಮಾಡೋಣ, ಈ ರಾಧೆಯ ಸಿನಿಜೀವನದ ಸ್ಪೆಷಲ್ ಝಲಕ್ ಗಳನ್ನ ನೋಡೋಣ ಬನ್ನಿ.

ಗಾಸಿಪ್ ಗಳಿಗೆ ಕಿವಿಗೊಡದ ಬೆಡಗಿ

ರಾಕಿಂಗ್ ಸ್ಟಾರ್ ಯಶ್ ಜೊತೆಗೆ ರಾಧಿಕಾ ಅಭಿನಯಿಸಿದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಸೋತ ಉದಾಹರಣೆಯೇ ಇಲ್ಲ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಅಷ್ಟೊಂದು ಪವರ್ ಫುಲ್. ಇದೇ ಕಾರಣಕ್ಕೋ ಏನೋ ಇವರಿಬ್ಬರ ನಡುವೆ ಗಾಸಿಪ್ ಗಳೂ ಹರಿದಾಡಿದವು.

ತಮ್ಮ ನಡುವಿನ ಗಾಸಿಪ್ ಗೆ ಯಶ್ ಉತ್ತರ

ಆದರೆ ಯಶ್ ಆಗಲಿ ರಾಧಿಕಾ ಆಗಲಿ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ನಮ್ಮ ವಿರುದ್ಧ ಬರೆದರೆ ಕೆಲವರಿಗೆ ಹೊಟ್ಟೆ ತುಂಬುತ್ತೆ ಎಂದಾದರೆ ಬರೆಯಲಿ ಬಿಡಿ ಎಂದು ಲೈಟ್ ಆಗಿ ತೆಗೆದುಕೊಂಡರು. ಆದರೂ ಗಾಸಿಪ್ ಗಳು ಹರಿದಾಡುವುದು ಮಾತ್ರ ಇನ್ನೂ ನಿಂತಿಲ್ಲ.

ನೆನಪಿನಲ್ಲಿ ಉಳಿಯುವ ಸಿನಿಮಾ ಮಾಡ್ಬೇಕು

ಹತ್ತು ಸಿನಿಮಾ ಮಾಡಿದ್ರೆ ಐದು ನೆನಪಲ್ಲಿ ಉಳೀಬೇಕು. ನೂರು ಸಿನಿಮಾ ಮಾಡಿ ಒಂದೂ ಚೆನ್ನಾಗಿಲ್ಲದಿದ್ರೆ ಹೇಗೆ ಅಂತಾರೆ ಈ ಸಿಂಡ್ರೆಲಾ.

ಕುಟುಂಬದ ಜೊತೆಗೆ ಕಾಲ ಕಳೆಯುವ ಬೆಡಗಿ

ರಾಧಿಕಾ ಫ್ಯಾಮಿಲಿಯನ್ನ ತುಂಬಾ ಇಷ್ಟಪಡ್ತಾರೆ. ಟೈಂ ಸಿಕ್ರೆ ಫ್ಯಾಮಿಲಿಯವ್ರ ಜೊತೆ ಕಾಲ ಕಳೀತಾರೆ.

ಹೊಸಬರಿಗೆ ಲಕ್ಕಿ ಹೀರೋಯಿನ್

ಮೊದಲ ಸಿನಿಮಾ 'ಮೊಗ್ಗಿನ ಮನಸ್ಸಿ'ಗೇ ಸ್ಟೇಟ್ ಅವಾರ್ಡ್ ಪಡೆದ ಟ್ಯಾಲೆಂಟೆಡ್ ಚೆಲುವೆ, ಹೊಸಬರಿಗೆ ಲಕ್ಕಿ ಹೀರೋಯಿನ್ ಅಂತಾನೇ ರಾಧಿಕಾ ಪಂಡಿತ್ ಫೇಮಸ್.

ರಾಧಿಕಾ ಪಂಡಿತ್ ಕನಸು ಏನು ಗೊತ್ತಾ

ರಾಧಿಕಾ ಪಂಡಿತ್ ಗೆ 'ಜೋಧಾ ಅಕ್ಬರ್' ತರಹದ ಸಿನಿಮಾದಲ್ಲಿ ನಟಿಸೋ ಕನಸು. ಅದು ಯಾವಾಗ ನೆರವೇರುತ್ತದೋ ಕಾದುನೋಡಬೇಕು.

ಒಳ್ಳೇ ಸಿನಿಮಾದಲ್ಲಿ ನಟಿಸೋದೇ ಗುರಿ

ರಾಧಿಕಾ ಪಂಡಿತ್ ರೆಸೊಲ್ಯೂಷನ್ ಮತ್ತಷ್ಟು ಹಾರ್ಡ್ ವರ್ಕ್ ಮಾಡಬೇಕು, ಒಳ್ಳೇ ಸಿನಿಮಾದಲ್ಲಿ ನಟಿಸಬೇಕು ಅನ್ನೋದು.

English summary
Actress Radhika Pandit celebrating her 30th birthday on 7th of March. The actress's colourful dream is to act in 'Jodha Akbar' like moives. Filmibeat Kannada Wishes very very happy birthday to Radhika.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada