ಸುಂದರ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್: ಅತ್ತಿಗೆ ಯಶ್19 ಅಪ್‌ಡೇಟ್ ಕೊಡ್ಸಿ ಎಂದ ಫ್ಯಾನ್ಸ್!
ಕನ್ನಡದ ಪ್ರತಿಭಾವಂತ ನಟಿ ರಾಧಿಕಾ ಪಂಡಿತ್. ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ರೂ ಮಕ್ಕಳಿಗಾಗಿ ಸಿನಿಮಾದಿಂದ ವಿರಾಮ ಪಡೆದುಕೊಂಡಿದ್ದಾರೆ. ಹೆಚ್ಚಿನ ಸಮಯ ಮಕ್ಕಳ ಜೊತೆಗೆ ಕಳೆಯುವ ರಾಧಿಕಾ ಪಂಡಿತ್ ಆಗ್ಗಾಗೆ ತನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಭಾನುವಾರ ಕೂಡ ನಟಿ ತಮ್ಮ ಕುಟುಂಬದ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಕ್ಯೂಟ್ ಫೋಟೋಗೆ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ತಮ್ಮ ಪ್ರೀತಿ ಸುರಿಸುತ್ತಿದ್ದಾರೆ. ಇದರ ಜೊತೆಗೆ ಫಾನ್ಸ್‌ಗಳು ಯಶ್19 ಬಗ್ಗೆ ಅಪ್‌ಡೆಟ್ ಕೊಡುವಂತೆ ಮನವಿ ಮಾಡುತ್ತಿದ್ದಾರೆ.

ಸಮುದ್ರ ತೀರದಲ್ಲಿ ಯಶ್ ಕುಟುಂಬ
ರಾಧಿಕಾ ಪಂಡಿತ್, ಪತಿ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಮಕ್ಕಳಾದ ಐರಾ ಮತ್ತು ಯಥರ್ವ್ ಹೆಚ್ಚು ಸಮಯ ಕಳೆಯುತ್ತಾರೆ. ಅದರಲ್ಲೂ ಹೆಚ್ಚಾಗಿ ಬೀಚ್ ಸೈಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಚಂದನವನದ ಸುಂದರ ಫ್ಯಾಮಿಲಿಯಾಗಿರುವ ಇದಕ್ಕೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ.
ನಟಿ ರಾಧಿಕಾ ಪಂಡಿತ್ ಯಶ್ ಮತ್ತು ಮಗಳು ಐರಾ ಜೊತೆಗೆ ಬೀಚ್‌ನಲ್ಲಿ ಸಮಯ ಕಳೆದಿದ್ದು, ಅದರ ಕ್ಯೂಟ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ರಾಧಿಕಾ ಪಂಡಿತ್ ಮತ್ತು ಐರಾ ಪ್ರೀತಿಯಿಂದ ಒಬ್ಬರನ್ನೊಬ್ಬರು ನೋಡುತ್ತಿದ್ದಾರೆ. ಆದರೆ ಐರಾ ಕುಳಿತಿರುವುದು ಮರಳಿನ ಮೇಲಲ್ಲ. ಬದಲಾಗಿ ತನ್ನ ತಂದೆ ರಾಕಿಂಗ್ ಸ್ಟಾರ್ ಯಶ್ ಅವರ ಭುಜದ ಮೇಲೆ. ಇದು ಫ್ಯಾನ್ಸ್‌ಗೆ ಹೆಚ್ಚು ಖುಷಿ ಕೊಟ್ಟಿದೆ.
ರಾಧಿಕಾ ಪಂಡಿತ್‌ಗೆ ಫ್ಯಾನ್ಸದ್ ವಿಶೇಷ ಮನವಿ!
ಇಲ್ಲಿ ಇನ್ನೊಂದು ವಿಷಯವೆಂದರೆ ಫೋಟೋಗೆ ಲೈಕ್ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳು ಅತ್ತಿಗೆಯಲ್ಲಿ ವಿಶೇಷ ಮನವಿ ಮಾಡಿದ್ದಾರೆ. 2022 ರಲ್ಲಿ ಬಂದ ಕೆಜಿಎಫ್ ಅಧ್ಯಾಯ 2 ನಂತರ ಯಶ್ ಯಾವುದೇ ಸಿನಿಮಾ ಘೋಷಿಸಿಲ್ಲ. ನಟ ಯಾವುದೇ ಹೊಸ ಚಿತ್ರಕ್ಕೆ ಸಹಿ ಮಾಡಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಈ ಬಗ್ಗೆ ಬೇಸರವಿದೆ.
ಇದನ್ನೇ ನಟಿ ರಾಧಿಕಾ ಪಂಡಿತ್ ಫೋಟೋಗೆ ಕಾಮೆಂಟ್ ಮಾಡುವಾಗ ಹೊರಹಾಕಿದ್ದಾರೆ. ಯಶ್ 19 ರ ಬಗ್ಗೆ ಅಪ್‌ಡೆಟ್ ನೀಡುವಂತೆ ಕೇಳಿಕೊಂಡಿದ್ದಾರೆ. ಅಭಿಮಾನಿಯೊಬ್ಬರು, "ಅತ್ತಿಗೆ ಅವರೇ, ಅಣ್ಣನವರಿಗೆ #yash 19ಗೆ ಸಂಬಂಧಿಸಿದ ಒಂದು ಸಣ್ಣ ಫೋಸ್ಟರ್ ಆದ್ರೂ ಬಿಟ್ಟು ಕೊಡಿ ಅಂತ ನೀವಾದ್ರೂ ಹೇಳಿ. ಸ್ವಲ್ಪ ದಿನ ನಾವು ಅದರಲ್ಲೇ ಹಬ್ಬ ಮಾಡ್ಕೋತೀವಿ" ಎಂದು ಮನವಿ ಮಾಡಿದ್ದಾರೆ.

ಮತ್ತೊಬ್ಬರು ಬಾಸ್ ಯಶ್ 19 ಬಗ್ಗೆ ಅಪ್‌ಡೆಟ್ ಕೊಡಿ ಎಂದಿದ್ದಾರೆ. ಇನ್ನೊಬ್ಬರು "Waiting for Yash19 update" ಎಂದಿದ್ದು ಹಲವು ಮಂದಿ ಅಪ್‌ಡೇಟ್ ಕೊಡಿ ಕೊಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದಾಗಲೆಲ್ಲಾ, ಯಶ್ ಅವರ ಅಭಿಮಾನಿಗಳು ಯಶ್ 19 ರ ಬಗ್ಗೆ ಅಪ್‌ಡೇಟ್ ನೀಡಿ ಎಂದು ಹಲವು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











