Don't Miss!
- Education
International Labour Day 2021: ಮೇ 1ರಂದು ಕಾರ್ಮಿಕರ ದಿನವನ್ನಾಗಿ ಏಕೆ ಆಚರಿಸಲಾಗುತ್ತೆ ?
- News
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವು
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೂಲಿಂಗ್ ಗ್ಲಾಸ್ ಧರಿಸಿ ಪೋಸ್ ಕೊಟ್ಟ ಐರಾ ಬೇಬಿ; ಕೂಲ್ ಲುಕ್ ಗೆ ಫಿದಾ ಆಗದವರಿಲ್ಲ
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಇಬ್ಬರು ಮುದ್ದಾದ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್. ಐರಾ ಮತ್ತು ಯಥರ್ವ ಇಬ್ಬರ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ರಾಧಿಕಾ ಆಗಾಗ ಶೇರ್ ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ.
ಅಪ್ಪ-ಅಮ್ಮನಂತೆ ಇಬ್ಬರೂ ಮುದ್ದು ಮಕ್ಕಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ. ರಾಧಿಕಾ ಪಂಡಿತ್ ಮಕ್ಕಳ ಫೋಟೋವನ್ನು ಆಗಾಗ ಶೇರ್ ಮಾಡದಿದ್ದರೆ, ಅಭಿಮಾನಿಗಳು ಫೋಟೋ ಅಥವಾ ವಿಡಿಯೋವನ್ನು ಹಂಚಿಕೊಳ್ಳುತ್ತಿರುವಂತೆ ಒತ್ತಾಯಿಸುತ್ತಿರುತ್ತಾರೆ. ಸ್ಟಾರ್ ಕಿಡ್ ಗಳ ಬಾಲ್ಯವನ್ನು ನೋಡಿ ಅಭಿಮಾನಿಗಳು ಸಂತಸ ಪಡುತ್ತಿರುತ್ತಾರೆ.
ಯಥರ್ವನ ಈ ಎರಡು ಪದಗಳ ಶಕ್ತಿ ಕಡಿಮೆ ಎಂದು ಭಾವಿಸಬೇಡಿ- ರಾಧಿಕಾ ಪಂಡಿತ್
ಸದ್ಯ ರಾಧಿಕಾ ಮುದ್ದು ಮಗಳ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸಖತ್ ಕ್ಯೂಟ್ ಆಗಿರುವ ಈ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಐರಾ ಬೇಬಿ ಫೋಟೋದಲ್ಲಿ ಕೂಲಿಂಗ್ ಗ್ಲಾಸ್ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದು, ಸಖತ್ ಕೂಲ್ ಆಗಿ ಕಾಣಿಸುತ್ತಿದ್ದಾರೆ. ಈ ಮುದ್ದಾದ ಲುಕ್ ಎಲ್ಲರ ಮನಸೆಳೆಯುತ್ತಿದೆ.
ಇತ್ತೀಚಿಗೆ ರಾಧಿಕಾ ಪುತ್ರ ಯಥರ್ವ ಮುದ್ದಾಗಿ ಮಾತನಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದರು. ತೊದಲು ಮಾತನಾಡಲು ಪ್ರಾರಂಭಿಸುವ ಯಥರ್ವ ಅಮ್ಮ ರಾಧಿಕಾ ಹೇಳಿಕೊಟ್ಟ ಪಾಠ ಕಲಿಯುತ್ತಿದ್ದಾನೆ. ರಾಧಿಕಾ ಪಂಡಿತ್ ಮಕ್ಕಳಿಗೆ ಮೂರು ಭಾಷೆಯನ್ನು ಕಲಿಸುತ್ತಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ರಾಧಿಕಾ ಮಾತೃಭಾಷೆ ಕೊಂಕಣಿ. ಈ 3 ಭಾಷೆಯಲ್ಲೂ ರಾಧಿಕಾ ಮಗನಿಗೆ ಕೇಳುವ ಪ್ರಶ್ನೆಗೆ ಮಗ ಅದೇ ಭಾಷೆಯಲ್ಲಿ ಉತ್ತರಿಸುತ್ತಾನೆ.
ಮುದ್ದಾಗಿ ಮಾತನಾಡುವ ಯಥರ್ವನ ವಿಡಿಯೋ ಶೇರ್ ಮಾಡುವ ಜೊತೆಗೆ ರಾಧಿಕಾ, 'ಈ ಎರಡು ಸಣ್ಣ ಪದಗಳ ಶಕ್ತಿಯನ್ನು ಎಂದಿಗೂ ಕಡಿಮೆ ಎಂದು ಭಾವಿಸಬೇಡಿ. ಅವರು ಮ್ಯಾಜಿಕ್ ಸೃಷ್ಟಿಸುತ್ತಾರೆ' ಎಂದು ಬರೆದುಕೊಂಡಿದ್ದರು.
ರಾಧಿಕಾ ಇಬ್ಬರು ಮಕ್ಕಳ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡುತ್ತ ಅಭಿಮಾನಿಗಳನ್ನು ಸಂತಸ ಪಡಿಸುತ್ತಿದ್ದಾರೆ. ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಚಿತ್ರರಂಗಕ್ಕೆ ಬರಲಿ ಎನ್ನುವುದು ಅಭಿಮಾನಿಗಳ ಆಶಯ. ಉತ್ತಮ ಸ್ಕ್ರಿಪ್ಟ್ ಬಂದರೆ ಸದ್ಯದಲ್ಲೇ ಬಣ್ಣ ಹಚ್ಚಿದರೂ ಅಚ್ಚರಿ ಇಲ್ಲ.