ರಾಕಿಂಗ್ ಜೋಡಿಯ 7ನೇ ವಿವಾಹ ವಾರ್ಷಿಕೋತ್ಸವ: ಮುದ್ದಾದ ಫೋಟೋ ಜೊತೆಗೆ 'ಸಂಗಾತಿ' ಯಶ್‌ಗೆ ಶುಭ ಕೋರಿದ ರಾಧಿಕಾ ಪಂಡಿತ್
ಸ್ಯಾಂಡಲ್‌ವುಡ್‌ನ ರಾಕಿಂಗ್ ಜೋಡಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. 'ಟಾಕ್ಸಿಕ್' ಸಿನಿಮಾ ಘೋಷಣೆ ಮೂಲಕ ಈಗಾಗಲೇ ಟ್ರೆಂಡಿಗ್‌ನಲ್ಲಿರುವ ನಟ ಯಶ್ ಅವರಿಗೆ ಮುದ್ದಾದ ಫೋಟೋಗಳೊಂದಿಗೆ ನಟಿ ರಾಧಿಕಾ ಪಂಡಿತ್ ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಕೋರಿದ್ದಾರೆ.
ಕೆಜಿಎಫ್ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟ ಯಶ್ ಮತ್ತು ಚಂದನವನದ ಪ್ರತಿಭಾನ್ವಿತ ನಟಿ ರಾಧಿಕಾ ಪಂಡಿತ್ ಡಿಸೆಂಬರ್ 9 ರಂದು ತಮ್ಮ ಏಳನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷದಂತೆ, ತಮ್ಮ ವಿಶೇಷ ದಿನದಂದು ತಮ್ಮ ಪತಿಗೆ ಮುದ್ದಾಗಿ ವಿಶ್ ಮಾಡಿದ್ದಾರೆ.

ತನ್ನ 'ಸಂಗಾತಿ' ಯಶ್‌ಗೆ ರಾಧಿಕಾ ಶುಭಾಶಯ ಹೀಗಿದೆ
ತಮ್ಮ 7 ನೇ ವಿವಾಹ ವಾರ್ಷಿಕೋತ್ಸವದಂದು ಯಶ್ ಅವರಿಗೆ ರಾಧಿಕಾ ಪಂಡಿತ್ ಶುಭ ಹಾರೈಸಿದ್ದಾರೆ. ಈ ಚಂದದ ಜೋಡಿ ಮದುವೆಯಾಗಿ ಡಿಸೆಂಬರ್ 9 ಕ್ಕೆ ಏಳು ವರ್ಷಗಳು ಕಳೆದಿವೆ. ಇಬ್ಬರು ಮುದ್ದಾದ ಮಕ್ಕಳಿಗೆ ತಂದೆ ತಾಯಿ ಆಗಿದ್ದಾರೆ. ಈ ವಿಶೇಷ ದಿನದಂದು, ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
"ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಸಂಗಾತಿ" ಎಂದು ಶೀರ್ಷಿಕೆ ನೀಡಿ ಇಬ್ಬರು ಇರುವ ಎರಡು ಸುಂದರವಾದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಯಶ್ ಅವರ ಹಣೆಗೆ ಚುಂಬಿಸುತ್ತಿದ್ದಾರೆ. ಇನ್ನೋಂದರಲ್ಲಿ ಬೆಚ್ಚಗಿನ ಅಪ್ಪುಗೆ ನೀಡಿದ್ದಾರೆ. ಇಲ್ಲಿ ಗಮನ ಸೆಳೆದಿರುವುದು ಮೊದಲ ಫೋಟೋ. ಒಂದು ಪಾಂಡಾ ಮತ್ತು ಪುಟ್ಟ ಡ್ರ್ಯಾಗನ್ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಸಂಗಾತಿಯ ಜೊತೆಗಿನ ಪ್ರಯಾಣದ ಬಗ್ಗೆ ವಿವರಿಸಲಾಗಿದೆ.

ಯಶ್ ಮತ್ತು ರಾಧಿಕಾ ಪಂಡಿತ್ ಲವ್ ಸ್ಟೋರಿ
ನಟ ಯಶ್ ಮತ್ತು ರಾಧಿಕಾ ಪಂಡಿತ್ ಈಟಿವಿಯಲ್ಲಿ ಬರುತ್ತಿದ್ದ 'ನಂದಗೋಕುಲ' ಎಂಬ ಧಾರಾವಾಹಿ ಸೆಟ್‌ನಲ್ಲಿ ಭೇಟಿಯಾಗಿದ್ದರು. ಬಳಿಕ 2008 ರ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಅವರ ಸ್ನೇಹ ಪ್ರೇಮವಾಗಿ ತಿರುಗಿತ್ತು. ಮಿಸ್ಟರ್ ಅಡ್ ಮಿಸಸ್ ರಾಮಾಚಾರಿ ಮತ್ತು ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ.
ತಮ್ಮ ಪ್ರೇಮ ಸಂಬಂಧದ ಬ್ಗಗೆ ಯಾವ ವದಂತಿಗಳಿಗೂ ಆಸ್ಪದ ಕೊಡದ ಈ ಜೋಡಿ ಡಿಸೆಂಬರ್ 9, 2016 ರಂದು ವೈವಾಗಿಕ ಜೀವನಕ್ಕೆ ಕಾಲಿಟ್ಟರು. ಡಿಸೆಂಬರ್ 2018 ರಲ್ಲಿ ಮೊದಲ ಮಗು ಐರಾ ಜನಿಸಿದರೇ, ಮುಂದಿನ ವರ್ಷ ಯಥರ್ವ್‌ಗೆ ಪೋಷಕರಾಗಿದ್ದರು. ಮದುವೆ ಬಳಿಕ ನಟಿ ಕಡಿಮೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಅವರು ಸಿನಿಮಾಕ್ಕೆ ಬರಬೇಕು ಎಂಬ ಬೇಡಿಕೆ ಇಡುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳು
ಕೆಲಸದ ವಿಷಯಕ್ಕೆ ಬರುವುದಾದರೇ, ನಟ ಯಶ್ ಕೊನೆಯದಾಗಿ ಕೆಜಿಎಫ್ ಅಧ್ಯಾಯ 2 ರಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂದಿನ ಸಿನಿಮಾಕ್ಕೆ 'ಟಾಕ್ಸಿಕ್' ಎಂದು ಹೆಸರಿಡಲಾಗಿದೆ. ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳಲಿದ್ದಾರೆ. ಕೆವಿಎನ್ ಪ್ರೋಡಕ್ಷನ್ ಬಂಡವಾಳ ಹೂಡುತ್ತಿರುವ ಈ ಸಿನಿಮಾ ಏಪ್ರಿಲ್ 10, 2025 ರಂದು ಬಿಡುಗಡೆಯಾಗಲಿದೆ. ಇದಲ್ಲದೆ, ವರದಿಗಳ ಪ್ರಕಾರ ಯಶ್ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರೊಂದಿಗೆ ನಟಿಸಲಿದ್ದಾರೆ. ಆದರೆ, ಈ ಬಗ್ಗೆ ನಟ ಯಶ್ ಅಧಿಕೃತವಾಗಿ ಮಾಹಿತಿ ನೀಡಿಲ್ಲ.


Click it and Unblock the Notifications











