Happy Birthday Radhika Pandit ರಾಧಿಕಾ ಪಂಡಿತ್‌ಗೆ 39ನೇ ಹುಟ್ಟುಹಬ್ಬದ ಸಂಭ್ರಮ; ಟೀಚರ್ ಆಗಬೇಕಿದ್ದ ರಾಧಿಕಾ ನಟಿಯಾಗಿದ್ದೇಗೆ?
ಚಂದನವನ ಕಂಡ ಯಶಸ್ವಿ ಹಾಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ ಎವರ್‌ಗ್ರೀನ್ ನಟಿಯರ ಪಟ್ಟಿಯಲ್ಲಿ ರಾಧಿಕಾ ಪಂಡಿತ್ ಕೂಡ ಒಬ್ಬರು. ಇಂದು ( ಮಾರ್ಚ್ 7 ) ರಾಧಿಕಾ ಪಂಡಿತ್ 39ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಮೊದಲಿಗೆ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಧಿಕಾ ಪಂಡಿತ್ ಬಳಿಕ ಸಿನಿಮಾಗಳಲ್ಲಿಯೂ ಆಫರ್ ಗಿಟ್ಟಿಸಿಕೊಂಡು ನಟಿಯಾದರು. ದೊಡ್ಡ ನಟರ ಜತೆ ಅಭಿನಯಿಸಿ ಸ್ಟಾರ್ ಕೂಡ ಆದರು.
ತನ್ನ ಜತೆಯೇ ಸೀರಿಯಲ್ ಹಾಗೂ ಸಿನಿ ಜರ್ನಿಯಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅವರನ್ನೇ ಪ್ರೀತಿಸಿ ಮದುವೆಯಾಗಿರುವ ರಾಧಿಕಾ ಪಂಡಿತ್ ತಮ್ಮ ವಿವಾಹದ ಬಳಿಕ ಯಾವ ಚಿತ್ರದಲ್ಲಿಯೂ ನಟಿಸಿಲ್ಲ. ಮೊಗ್ಗಿನ ಮನಸು ಚಿತ್ರದ ಮೂಲಕ ತನ್ನ ಸಿನಿಮಾ ಜರ್ನಿಯನ್ನು ಆರಂಭಿಸಿದ ರಾಧಿಕಾ ಪಂಡಿತ್ ಆದಿ ಲಕ್ಷ್ಮಿ ಪುರಾಣ ಚಿತ್ರದ ನಂತರ ಯಾವ ಚಿತ್ರದಲ್ಲಿಯೂ ಅಭಿನಯಿಸಿಲ್ಲ. ಒಟ್ಟು 21 ಚಿತ್ರಗಳಲ್ಲಿ ಹಾಗೂ 3 ಧಾರಾವಾಹಿಗಳಲ್ಲಿ ರಾಧಿಕಾ ಪಂಡಿತ್ ಬಣ್ಣ ಹಚ್ಚಿದ್ದಾರೆ.

ಇನ್ನು ರಾಧಿಕಾ ಪಂಡಿತ್ ಮೊಗ್ಗಿನ ಮನಸು ಚಿತ್ರದ ಮೂಲಕ ಚಂದನವಕ್ಕೆ ಕಾಲಿಟ್ಟಿದ್ದು ಹಾಗೂ ಬಳಿಕ ಸ್ಟಾರ್ ಆಗಿ ಸ್ಯಾಂಡಲ್‌ವುಡ್ ಸಿಂಡ್ರೆಲಾ ಎನಿಸಿಕೊಂಡಿದ್ದು ಸಿನಿ ರಸಿಕರಿಗೆ ತಿಳಿದಿರುವ ವಿಷಯವೇ. ಆದರೆ ರಾಧಿಕಾ ಪಂಡಿತ್ ನಟನಾ ಕ್ಷೇತ್ರಕ್ಕೆ ಹೇಗೆ ಬಂದರು, ಈ ಕ್ಷೇತ್ರಕ್ಕೆ ಬರಲು ಕಾರಣ ಯಾರು ಹಾಗೂ ಒಂದು ವೇಳೆ ರಾಧಿಕಾ ಪಂಡಿತ್ ನಟನಾ ಕ್ಷೇತ್ರ ಪ್ರವೇಶಿಸಿದ್ದರೆ ಏನಾಗಿರುತ್ತಾ ಇದ್ರು ಎಂಬ ವಿಷಯ ಹಲವರಿಗೆ ತಿಳಿದಿಲ್ಲ.
ಹೌದು, ರಾಧಿಕಾ ಪಂಡಿತ್ ನಟಿಯಾಗಬೇಕು ಎಂಬ ಕನಸನ್ನು ಕಂಡು ಬೆಳೆದವರಲ್ಲ, ಆದರೂ ಸಹ ಇಂದು ಸ್ಟಾರ್ ಆಗಿದ್ದಾರೆ. ಓದು ಮುಗಿಸಿ ಶಿಕ್ಷಕಿಯಾಗಬೇಕು ಎಂದುಕೊಂಡಿದ್ದ ರಾಧಿಕಾ ಪಂಡಿತ್ ಅಂದು ಸ್ನೇಹಿತೆ ಮನವೊಲಿಸಿದ ಕಾರಣ ಇಂದು ನಟಿಯಾಗಿ ಖ್ಯಾತಿ ಗಳಿಸಿದ್ದಾರೆ. ಹೌದು, ಬೆಂಗಳೂರಿನ ಮಲ್ಲೇಶ್ವರದಲ್ಲಿ ಬೆಳೆದ ರಾಧಿಕಾ ಪಂಡಿತ್ ಕ್ಲೂನಿ ಹೈಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದರು. ಬಳಿಕ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಕಾಂ ಮುಗಿಸಿದರು.

ರಾಧಿಕಾ ಪಂಡಿತ್ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಮುಗಿಸಿದ ಬಳಿಕ ಶಿಕ್ಷಕಿಯಾಗಬೇಕೆಂಬ ಆಸೆಯನ್ನು ಹೊಂದಿದ್ದರು. ಆದರೆ 2007ರಲ್ಲಿ ಬಿಕಾಂ ಫೈನಲ್ ಇಯರ್ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಸ್ನೇಹಿತೆಯೊಬ್ಬಳು ಕನ್ನಡದ ನಂದಗೋಕುಲ ಧಾರಾವಾಹಿಗೆ ನಡೆಯುತ್ತಿದ್ದ ಆಡಿಷನ್‌ನಲ್ಲಿ ಭಾಗವಹಿಸುವಂತೆ ಮನವೊಲಿಸಿದ್ದರು. ಈ ರೀತಿ ರಾಧಿಕಾ ಪಂಡಿತ್ ನಂದಗೋಕುಲ ಧಾರಾವಾಹಿಗೆ ಆಯ್ಕೆಯಾದರು. ಅದೇ ವರ್ಷ ಸುಮಂಗಲಿ ಎಂಬ ಮತ್ತೊಂದು ಧಾರಾವಾಹಿಯಲ್ಲಿಯೂ ಸಹ ರಾಧಿಕಾ ಪಂಡಿತ್ ನಟಸಿದರು.
ಈ ಧಾರಾವಾಹಿಯಲ್ಲಿನ ರಾಧಿಕಾ ಪಂಡಿತ್ ಫೋಟೊಗಳು ಮ್ಯಾಗಜಿನ್‌ಗಳಲ್ಲಿ ಹರಿದಾಡುತ್ತಿದ್ದವು. ಇದು ನಿರ್ದೇಶಕ ಶಶಾಂಕ್ ಕಣ್ಣಿಗೆ ಬಿದ್ದಿತ್ತು. ಹೊಸ ಮುಖಗಳನ್ನು ಹುಡುಕುತ್ತಿದ್ದ ಶಶಾಂಕ್ ರಾಧಿಕಾ ಪಂಡಿತ್ ಅವರನ್ನು ತನ್ನ ಚಿತ್ರ ಮೊಗ್ಗಿನ ಮನಸುಗೆ ಆರಿಸಿಕೊಂಡರು. ಹೀಗೆ ಶಿಕ್ಷಕಿಯಾಗಬೇಕು ಎಂಬ ಗುರಿಯನ್ನು ಹೊಂದಿದ್ದ ರಾಧಿಕಾ ಪಂಡಿತ್ ಸ್ನೇಹಿತೆ ಮನವೊಲಿಸಿದ ಕಾರಣ ಇಂದು ಸ್ಟಾರ್ ಆಗಿದ್ದಾರೆ.


Click it and Unblock the Notifications











