»   » ನಿರ್ದೇಶಕ ಶ್ರೀನಿವಾಸ್ ರಾಜು ವಿರುದ್ಧ ರಾಂಗ್ ಆದ ರಾಗಿಣಿ

ನಿರ್ದೇಶಕ ಶ್ರೀನಿವಾಸ್ ರಾಜು ವಿರುದ್ಧ ರಾಂಗ್ ಆದ ರಾಗಿಣಿ

Posted By:
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಬೇಡದ ವಿಚಾರಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ನಟಿ ರಾಗಿಣಿ ದ್ವಿವೇದಿ ವಿರುದ್ಧ ಮೊನ್ನೆಯಷ್ಟೇ ನಿರ್ಮಾಪಕ ವೆಂಕಟೇಶ್ ಫಿಲ್ಮ್ ಚೇಂಬರ್ ಗೆ ದೂರನ್ನ ನೀಡಿದ್ದರು.

'ನಾಟಿ ಕೋಳಿ' ಚಿತ್ರದಿಂದ ರಾಗಿಣಿ ಹೊರಬಂದಿದ್ದರೂ, ಪಡೆದಿದ್ದ 20 ಲಕ್ಷ ರೂಪಾಯಿ ಮುಂಗಡ ಹಣವನ್ನ ವಾಪಸ್ಸು ನೀಡಿಲ್ಲ ಅಂತ ವೆಂಕಟೇಶ್, ಚಲನಚಿತ್ರ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು.

ಇದರ ಬೆನ್ನಲ್ಲೇ, 'ನಾಟಿ ಕೋಳಿ' ನಿರ್ದೇಶಕ ಶ್ರೀನಿವಾಸ್ ರಾಜು ಮೇಲೆ ನಟಿ ರಾಗಿಣಿ ಹರಿಹಾಯ್ದಿದ್ದಾರೆ. ''ನಿರ್ದೇಶಕ ಶ್ರೀನಿವಾಸ್ ರಾಜು ಅವರಿಗೆ ವೃತ್ತಿ ಪರತೆ ಇಲ್ಲ. ಅವರ ಪ್ರಕಾರ ಸಿನಿಮಾ ಅಂದ್ರೆ ಕೇವಲ ಅಶ್ಲೀಲ, ಸೆಕ್ಸ್ ಮತ್ತು ಎಕ್ಸ್ ಪೋಸ್'' ಅಂತ ರಾಗಿಣಿ ಗರಂ ಆಗಿದ್ದಾರೆ. ಮುಂದೆ ಓದಿ.....

ಟೆಂಪರ್ ರೈಸ್ ಮಾಡಿಕೊಂಡ ರಾಗಿಣಿ

ನಟಿ ರಾಗಿಣಿ ಗರಂ ಆಗಿದ್ದಾರೆ. ಅದಕ್ಕೆ ಕಾರಣ ನಿರ್ದೇಶಕ ಶ್ರೀನಿವಾಸ್ ರಾಜು. 'ಶಿವಂ' ಚಿತ್ರದ ನಂತ್ರ ನಿರ್ದೇಶಕ ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ 'ನಾಟಿ ಕೋಳಿ' ಚಿತ್ರವನ್ನ ನಟಿ ರಾಗಿಣಿ ಒಪ್ಪಿಕೊಂಡಿದ್ದರು. ಕಳೆದ ತಿಂಗಳು 'ನಾಟಿ ಕೋಳಿ' ಚಿತ್ರದ ಫೋಟೋ ಶೂಟ್ ನಡೆಯಿತು. ಫೋಟೋ ಶೂಟ್ ವೇಳೆ ಆದ ಗಲಾಟೆ ಇಂದಿಗೂ ರಾಗಿಣಿ ತಲೆಯನ್ನ ಕೊರೆಯುತ್ತಿದೆ. ['ನಾಟಿ ಕೋಳಿ' ಸಾರಿಗೆ 'ರಾಗಿಣಿ'ಯ ಮಿರ್ಚಿ ಮಸಾಲೆ]

ಫೋಟೋಶೂಟ್ ನಲ್ಲಾಗಿದ್ದು ಏನು?

ವಿಲ್ಸನ್ ಗಾರ್ಡನ್ ಸ್ಟುಡಿಯೋದಲ್ಲಿ 'ನಾಟಿ ಕೋಳಿ' ಚಿತ್ರದ ಫೋಟೋಶೂಟ್ ನಡೆಯುತ್ತಿತ್ತು. ಅಲ್ಲಿ ಏಕಾಏಕಿ ಆಗಮಿಸಿದ 'ಹುಲಿ' ಚಿತ್ರದ ನಿರ್ಮಾಪಕ ಶಿವಪ್ರಕಾಶ್, ನಿರ್ದೇಶಕ ಶ್ರೀನಿವಾಸ್ ರಾಜು ಮತ್ತು ನಿರ್ಮಾಪಕ ವೆಂಕಟೇಶ್ ಮೇಲೆ ಹಲ್ಲೆ ಮಾಡಿದರು. ಅಲ್ಲದೇ, ತಾನು ರಾಗಿಣಿ ಬಾಯ್ ಫ್ರೆಂಡ್ ಅಂತ ಎಚ್ಚರಿಕೆ ನೀಡಿದರು. ಜಾಸ್ತಿ ಎಕ್ಸ್ ಪೋಸ್ ಮಾಡಿಸದಂತೆ ಜೀವ ಬೆದರಿಕೆಯನ್ನೂ ಹಾಕಿದರು. [ರಾಗಿಣಿ ದ್ವಿವೇದಿ 'ನಾಟಿಕೋಳಿ' ಮೇಲೆ ಎರಗಿದ 'ಹುಲಿ' ]

ಚೇಂಬರ್ ಮೆಟ್ಟಿಲೇರಿದ 'ನಾಟಿ ಕೋಳಿ' ಟೀಮ್

ಇಷ್ಟೆಲ್ಲಾ ರಾದ್ಧಾಂತದ ನಂತ್ರ ನಿರ್ಮಾಪಕ ವೆಂಕಟೇಶ್ ಫಿಲ್ಮ್ ಚೇಂಬರ್ ಗೆ ದೂರು ನೀಡಿದರು. ಘಟನೆಗೆ ಪರೋಕ್ಷವಾಗಿ ರಾಗಿಣಿ ಕಾರಣ ಅಂತ ಬೆಟ್ಟು ಮಾಡಿ ತೋರಿಸಿದರು ಕೂಡ.! ['ನಾಟಿ ಕೋಳಿ' ರಾಗಿಣಿ ವಿರುದ್ಧ ಕಂಪ್ಲೇಂಟ್..!]

'ನಂಗೇನು ಗೊತ್ತಿಲ್ಲ' ಅಂದಿದ್ದ ರಾಗಿಣಿ..!

ಘಟನೆ ನಡೆದಾಗ ಮೇಕಪ್ ರೂಮ್ ನಲ್ಲಿದ್ದ ರಾಗಿಣಿಗೆ ಶಿವಪ್ರಕಾಶ್ ಪರಿಚಯವೇ ಇಲ್ವಂತೆ. ಹೀಗಂತ ಅಂದೇ ಸ್ಪಷ್ಟನೆ ಕೂಡ ನೀಡಿದ್ದರು. ಆದ್ರೆ, ಗಲಾಟೆ ಬಳಿಕ 'ನಾಟಿ ಕೋಳಿ' ಚಿತ್ರದಲ್ಲಿ ರಾಗಿಣಿ ಮುಂದುವರಿಯಲಿಲ್ಲ. ಚಿತ್ರತಂಡದಿಂದ ನಟಿ ರಾಗಿಣಿ ಅವರನ್ನ ಕೈಬಿಟ್ಟಿದ್ದೇವೆ ಅಂತ ನಿರ್ದೇಶಕ ಶ್ರೀನಿವಾಸ್ ರಾಜು ಹೇಳ್ತಾರೆ. ಆದರೆ, ರಾಗಿಣಿ ಈಗ ಆಡುತ್ತಿರುವ ಮಾತುಗಳೇ ಬೇರೆ..! [ಜಂಬದ ಕೋಳಿಗೆ ಕೊಕ್ ಪ್ರಿಯಾಮಣಿ 'ನಾಟಿಕೋಳಿ']

ಅಶ್ಲೀಲ ಸಿನಿಮಾ ಮಾಡ್ತಾರಂತೆ ಶ್ರೀನಿವಾಸ್ ರಾಜು.!

ಸಾಮಾಜಿಕ ಜಾಲತಾಣದಲ್ಲಿ ನಟಿ ರಾಗಿಣಿ ಹೇಳಿಕೊಂಡಿರುವ ಪ್ರಕಾರ 'ನಾಟಿ ಕೋಳಿ' ಚಿತ್ರದಿಂದ ತಾವೇ ಹೊರ ಬಂದಿದ್ದಾರೆ. ಅದಕ್ಕೆ ಸೂಕ್ತ ಕಾರಣಗಳನ್ನೂ ತಮ್ಮ ಅಭಿಮಾನಿಗಳ ಮುಂದಿಟ್ಟಿದ್ದಾರೆ. ''ನಿರ್ದೇಶಕ ಶ್ರೀನಿವಾಸ್ ರಾಜು ಅವರಿಗೆ ವೃತ್ತಿಪರತೆ ಇಲ್ಲ. ಅವರ ಪ್ರಕಾರ ಸಿನಿಮಾ ಅಂದ್ರೆ ಸೆಕ್ಸ್, ಅಶ್ಲೀಲತೆ ಮತ್ತು ಹೀರೋಯಿನ್ ಗಳನ್ನ ಬಿಚ್ಚಮ್ಮಂದಿರನ್ನಾಗಿ ಮಾಡುವುದು. ಅವರಿಗೆ ಅವರ ಸ್ಕ್ರಿಪ್ಟ್ ನಲ್ಲಿ ಕ್ಲ್ಯಾರಿಟಿ ಇರುವುದಿಲ್ಲ. ಸ್ಕ್ರಿಪ್ಟ್ ನರೇಷನ್ ಕೇಳಿದರೆ, ಸೆಟ್ ನಲ್ಲಿ ಮೈಂಡ್ ಗೆ ಬರುತ್ತೆ ಅಂತಾರೆ. ನನ್ನ ಅಭಿಪ್ರಾಯಕ್ಕೆ ಮನ್ನಣೆ ಇಲ್ಲದೇ ಕಾಂಟ್ರ್ಯಾಕ್ಟ್ ಗೆ ಸಹಿ ಹಾಕಿಸಿಕೊಳ್ತಾರೆ. ಯಾವ ನಟಿಯನ್ನೂ ಕೇವಲವಾಗಿ ನೋಡುವುದು ಸರಿಯಲ್ಲ. ನನಗೆ ಸಹಕರಿಸಿದ ಕಲಾವಿದರ ಸಂಘ ಮತ್ತು ಫಿಲ್ಮ್ ಚೇಂಬರ್ ಗೆ ಧನ್ಯವಾದ'' ಅಂತ ಫೇಸ್ ಬುಕ್ ನಲ್ಲಿ ರಾಗಿಣಿ ಪೋಸ್ಟ್ ಮಾಡಿದ್ದಾರೆ.

ನಿಲ್ಲದ 'ನಾಟಿ ಕೋಳಿ' ಜಗಳ

ಈ ಮಧ್ಯೆ ಪಡೆದಿರುವ 20 ಲಕ್ಷ ರೂಪಾಯಿ ವಾಪಸ್ ನೀಡುತ್ತಿಲ್ಲ ಅಂತ ನಟಿ ರಾಗಿಣಿ ಮೇಲೆ ನಿರ್ಮಾಪಕ ವೆಂಕಟೇಶ್ ಕಂಪ್ಲೇಂಟ್ ನೀಡಿದ್ದಾರೆ. ಇಬ್ಬರ ನಡುವೆ ಕೆಸರೆರಚಾಟ ನಡೆಯುತ್ತಿದೆ. ಇದೆಲ್ಲಾ ಎಂದು ನಿಲ್ಲುವುದೋ...?!

English summary
Kannada Actress Ragini Dwivedi has officially walked out from Kannada movie 'Nati Koli'. The Actress has taken her facebook account to describe the reason behind this decision to her fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada