twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಭೀತಿ: ಜನರ ಸಹಾಯಕ್ಕೆ ಧಾವಿಸಿದ ತುಪ್ಪದ ಹುಡುಗಿ ರಾಗಿಣಿ

    |

    ಕೊರೊನಾ ಭೀತಿಯಿಂದ ಬೆಂಗಳೂರಿಗರು ಬಹುತೇಕ ಮನೆಗಳಲ್ಲಿ ಉಳಿದಿದ್ದಾರೆ. ಸಿನಿಮಾ ಮಂದಿಯಂತೂ ಚಿತ್ರೀಕರಣ ರದ್ದು ಮಾಡಿಕೊಂಡಿದ್ದಾರೆ. ಆದರೆ ತುಪ್ಪದ ಹುಡುಗಿ ರಾಗಿಣಿ ಮಾತ್ರ ರಸ್ತೆಗೆ ಇಳಿದು ಜನರಿಗೆ ಸಹಾಯ ಮಾಡುತ್ತಿದ್ದಾರೆ.

    ಹೌದು, ರಾಗಿಣಿ ಅವರು ಕೊರೊನಾ ವೈರಸ್‌ ಬಗ್ಗೆ ಜನಜಾಗೃತಿ ಮೂಡಿಸಲು ರಸ್ತೆಗೆ ಇಳಿದಿದ್ದಾರೆ. ಅಷ್ಟೆ ಅಲ್ಲದೆ ಕೊರೊನಾ ವೈರಸ್‌ ಗೆ ಸಾಮಾನ್ಯ ಜನರು ತುತ್ತಾಗದಿರಲೆಂದು ಅಗತ್ಯ ಪರಿಕರವನ್ನು ದಾನ ಮಾಡುತ್ತಿದ್ದಾರೆ.

    ಕೆಲವು ರಾಜಕಾರಣಿಗಳು ಕೊರೊನಾ ವೈರಸ್ ಬಾರದಿರಲೆಂದು ಜನರಿಗೆ ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಿದ್ದರು. ಆದರೆ ರಾಗಿಣಿ ಕೈ ಗ್ಲೌಸ್‌ಗಳನ್ನು ಉಚಿತವಾಗಿ ವಿತರಿಸಿದರು.

    ಉಚಿತವಾಗಿ ಕೈ ಗ್ಲೌಸ್ ವಿತರಿಸಿದ ರಾಗಿಣಿ

    ಉಚಿತವಾಗಿ ಕೈ ಗ್ಲೌಸ್ ವಿತರಿಸಿದ ರಾಗಿಣಿ

    ಹೌದು, ರಾಗಿಣಿ ಅವರು ಉಚಿತವಾಗಿ ಕೈ ಗ್ಲೌಸ್‌ಗಳನ್ನು ಜನರಿಗೆ ವಿತರಿಸಿದರು. ಕೈ ಗ್ಲೌಸ್‌ಗಳನ್ನು ಬಳಸುವುದರಿಂದ ಕೊರೊನಾ ವೈರಸ್ ಬರುವ ಸಾಧ್ಯತೆ ಕಡಿಮೆಯೆಂದು, ಕಡ್ಡಾಯವಾಗಿ ಕೈಗ್ಲೌಸ್‌ಗಳನ್ನು ಧರಿಸಿರೆಂದು ರಾಗಿಣಿ ಜನರಿಗೆ ಮನವಿ ಸಹ ಮಾಡಿದ್ದಾರೆ.

    ಕೈಗಳನ್ನು ಶುದ್ಧವಾಗಿಟ್ಟುಕೊಳ್ಳಿ: ರಾಗಿಣಿ

    ಕೈಗಳನ್ನು ಶುದ್ಧವಾಗಿಟ್ಟುಕೊಳ್ಳಿ: ರಾಗಿಣಿ

    ಜನರು ತಮ್ಮ ಕೈಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು, ಮೂಗು, ಬಾಯಿ ಕಣ್ಣುಗಳನ್ನು ಕೈಗಳಿಂದ ಸ್ಪರ್ಷಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು, ಹೀಗೆ ಮಾಡುವ ಮುನ್ನಾ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯು ಈಗಾಗಲೇ ಎಚ್ಚರಿಕೆ ನೀಡಿದೆ.

    ಕೈ ಗವಸು ಧರಿಸುವುದು ಬಹಳ ಅವಶ್ಯಕ

    ಹಾಗಾಗಿ ಕೈ ಗವಸು ಧರಿಸುವುದು ಮಾಸ್ಕ್ ಧರಿಸುವಷ್ಟೆ ಅವಶ್ಯಕ ಎಂದು ಅರಿತ ರಾಗಿಣಿ ಅವರು ಮಾಸ್ಕ್ ಹಂಚುವ ಬದಲಿಗೆ ಅಷ್ಟೇ ಅವಶ್ಯಕವಾದ ಕೈ ಗ್ಲೌಸ್‌ಗಳನ್ನು ಹಂಚಿದ್ದಾರೆ.

    ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ

    ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ

    ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ರಾಗಿಣಿ, 'ಮಾಸ್ಕ್ ಬದಲಿಗೆ ಗ್ಲೌಸ್‌ಗಳನ್ನು ಧರಿಸಿ, ಮಾಸ್ಕ್ ಖಾಯಿಲೆ ಬಂದವರಿಗೆ, ನಾವು ಕೈಗಳಿಂದ ಎಲ್ಲವನ್ನೂ ಮುಟ್ಟುತ್ತೇವೆ ಹಾಗಾಗಿ ಕೈಗಳ ಶುಚಿತ್ವ ಬಹಳಮುಖ್ಯ ಹಾಗಾಗಿ ವೈರಸ್‌ನಿಂದ ದೂರವಿರಲು ಗ್ಲೌಸ್‌ಗಳು ಅತ್ಯಂತ ಅವಶ್ಯಕ' ಎಂದು ಹೇಳಿದ್ದಾರೆ.

    ಮಾಸ್ಕ್ ಮತ್ತು ಗ್ಲೌಸ್ ಎರಡನ್ನೂ ಬಳಸಿ

    ಮಾಸ್ಕ್ ಮತ್ತು ಗ್ಲೌಸ್ ಎರಡನ್ನೂ ಬಳಸಿ

    ರಾಗಿಣಿ ಅವರು ಮಾಸ್ಕ್ ಬದಲು ಗ್ಲೌಸ್ ಬಳಸಿ ಎಂದು ಹೇಳಿದ್ದಾರೆ. ಆದರೆ ಮಾಸ್ಕ್ ಮತ್ತು ಗ್ಲೌಸ್ ಎರಡೂ ಸಹ ಅತ್ಯಂತ ಅವಶ್ಯಕ. ಹಾಗಾಗಿ ಜನರು ಎರಡನ್ನೂ ಬಳಸಿ ವೈರಸ್ ನಿಂದ ದೂರ ಉಳಿಯಿರು. ಎನ್‌ 95 ಮಾದರಿಯ ಮಾಸ್ಕ್ ಬಳಸುವುದು ಹೆಚ್ಚು ಸೂಕ್ತ.

    English summary
    Actress Ragini distributed hand gloves to people for free and said wear gloves to prevent coronavirus.
    Saturday, March 14, 2020, 20:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X