ನಾಟಿ ತುಪ್ಪ ರಾಗಿಣಿಗೆ ತೀವ್ರ ಜ್ವರ ಆಸ್ಪತ್ರೆಗೆ ದಾಖಲು

By ಉದಯರವಿ

ಸ್ಯಾಂಡಲ್ ವುಡ್ ಪಾಲಿಗೆ ನಾಟಿ ತುಪ್ಪವಾಗಿರುವ ನಟಿ ರಾಗಿಣಿ ದ್ವಿವೇದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಬಾಲಿವುಡ್, ಕೋಲಿವುಡ್ ಆ ವುಡ್ಡು ಈ ವುಡ್ಡು ಎಂದು ಬಿಜಿಯಾಗಿದ್ದೇ ಈಗವರು ಬೆಡ್ಡು ಹಿಡಿಯಲು ಕಾರಣ ಎನ್ನುತ್ತವೆ ಮೂಲಗಳು.

ಎರಡು ದಿನಗಳ ಹಿಂದಷ್ಟೇ ಅವರು ಖಾಸಗಿ ಆಸ್ಪತ್ರೆಗೆ (ಯಾವ ಸೆಲೆಬ್ರಿಟಿಯೂ ಇದುವರೆಗೂ ಗೌರ್ಮೆಂಟ್ ಆಸ್ಪತ್ರೆಗೆ ದಾಖಲಾಗಿಲ್ಲ) ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಕಳೆಯಬೇಕಾಗುತ್ತದಂತೆ.

ವೇಳೆಗೆ ಸರಿಯಾಗಿ ನಿದ್ರೆ, ಆಹಾರ ತೆಗೆದುಕೊಳ್ಳದೆ ಇರುವುದೇ ರಾಗಿಣಿ ಆರೋಗ್ಯ ಕೆಡಲು ಕಾರಣ. ಇತ್ತೀಚೆಗೆ ಅವರ ಓಡಾಟವೂ ಹೆಚ್ಚಾಗಿತ್ತು. ಮುಂಬೈನಿಂದ ಬೆಂಗಳೂರಿಗೆ, ಇಲ್ಲಿಂದ ಚೆನ್ನೈಗೆ ಮತ್ತೆ ಅಲ್ಲಿಂದ ಮುಂಬೈಗೆ ಹೀಗೆ ಅವರು ಸದಾ ಗಾಳಿಯಲ್ಲೆ ಹಾರಾಟ ಹೆಚ್ಚಾಗಿ ಆರೋಗ್ಯ ಹದಗೆಟ್ಟಿದೆ.

ಈ ಬಿಜಿ ಶೆಡ್ಯೂಲ್ ನಲ್ಲೂ ಹಲವಾರು ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಾಗುತ್ತಿದ್ದರು ರಾಗಿಣಿ. ಇದೆಲ್ಲದರ ಅಡ್ಡಪರಿಣಾಮ ಅವರ ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಹಾಗೂ ಬಿಪಿ ಲೆವೆಲ್ ಕಡಿಮೆಯಾಗಿದೆ. ಶುಕ್ರವಾರ (ನ.8) ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದ್ದಕ್ಕಿದ್ದಂತೆ ಸುಸ್ತಾಗಿದ್ದಾರೆ.

ಕೂಡಲೆ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಮತ್ತೆ ತಮ್ಮ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಪ್ರಭುದೇವ ನಿರ್ದೇಶಿಸುತ್ತಿರುವ 'ರ್‍ಯಾಂಬೋ ರಾಜ್ ಕುಮಾರ್' ಚಿತ್ರದಲಿ ಐಟಂ ಹಾಡಿನಲ್ಲಿ ಸೊಂಟ ಕುಣಿಸಿದ್ದಾರೆ ರಾಗಿಣಿ.

ಇದನ್ನು ಹೊರತುಪಡಿಸಿದರೆ ತಮಿಳಿನ 'ನಿಮಿರುಂದ್ ನಿಲ್' ಹಾಗೂ ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಬಸವಣ್ಣ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ 'ನಿಮಿರುಂದ್ ನಿಲ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಸಮುದ್ರಕಣಿ. ತೆಲುಗಿನಲ್ಲೂ ಈ ಚಿತ್ರ ತೆರೆಕಾಣಲಿದೆ. (ಏಜೆನ್ಸೀಸ್)

More from Filmibeat

English summary
Bangalore lass Ragini Dwivedi, who was busy with her schedules in Bollywood and Kollywood, has been admitted to private hospital in the city on Saturday. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X