For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಸಂಜನಾ-ರಾಗಿಣಿ

  |

  ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರಿಗೂ ಷರತ್ತುಬದ್ಧ ಜಾಮೀನು ದೊರೆತಿದ್ದು. ಇಂದು ಇಬ್ಬರೂ ನಟಿಯರು ಷರತ್ತಿನಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದರು.

  ರಾಗಿಣಿ ಹಾಗೂ ಸಂಜನಾ ಅವರುಗಳು ಪ್ರತ್ಯೇಕವಾಗಿ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನಟಿರಾಗಿಣಿಯು ತಮ್ಮ ತಂದೆ ಹಾಗೂ ವಕೀಲರ ಜೊತೆಗೆ ಆಗಮಿಸಿದ್ದರು.

  ರಾಗಿಣಿಗೆ ಎನ್‌ಡಿಪಿಎಸ್ ನ್ಯಾಯಾಲಯವು ಕೆಲವು ಷರತ್ತುಗಳನ್ನು ವಿಧಿಸಿತ್ತು. ಕೆಲವು ಷರತ್ತುಗಳನ್ನು ವಕೀಲರು ಪೂರೈಸಿದ್ದರಾದರೂ, ರಾಗಿಣಿ ಸಹ ಖುದ್ದಾಗಿ ಹಾಜರಾಗಿ ಕೆಲವು ಷರತ್ತು ಪೂರೈಸಬೇಕಿತ್ತು, ಜೊತೆಗೆ ಪ್ರಕರಣದ ವಿಚಾರಣೆಯೂ ಇಂದು ನಡೆಯುವುದಿತ್ತು ಹಾಗಾಗಿ ರಾಗಿಣಿ ನ್ಯಾಯಾಲಯಕ್ಕೆ ಆಗಮಿಸಿದ್ದರು.

  ಇನ್ನು ನಟಿ ಸಂಜನಾ ಸಹ ಎನ್‌ಡಿಪಿಎಸ್‌ ನ್ಯಾಯಾಲಯಕ್ಕೆ ಬಂದಿದ್ದರು. ಇಬ್ಬರೂ ಸಹ ಎನ್‌ಡಿಪಿಎಸ್ ನ್ಯಾಯಾಲಯದಲ್ಲಿ ಕೆಲ ಕಾಲ ಇದ್ದರು. ವಿಚಾರಣೆ ನಡೆದ ಬಳಿಕ ಇಬ್ಬರೂ ಹೊರಗೆ ಬಂದು. ಪರಸ್ಪರ ಅಪ್ಪಿಕೊಂಡು ಶುಭಹಾರೈಕೆ ವಿನಿಮಯ ಮಾಡಿಕೊಂಡರು.

  ಸುದೀಪ್ ಮನೆ ಅಡವಿಟ್ಟು ಮಾಡಿದ ಸಿನಿಮಾ ಇದು | Filmibeat Kannada

  ನಟಿ ರಾಗಿಣಿ ಮಾಧ್ಯಮಗಳೊಟ್ಟಿಗೆ ಮಾತನಾಡಿ, 'ಸಾಮಾನ್ಯ ವಿಚಾರಣೆಗೆ ಹಾಜರಾಗಿದ್ದೆ. ನನಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇನ್ನಷ್ಟು ಗಟ್ಟಿಯಾಗಿದೆ. ಬೇರೆ ಆರೋಪಿಗಳ ಬಗ್ಗೆ ನಾನು ಈಗ ಮಾತನಾಡುವುದಿಲ್ಲ' ಎಂದರು.

  English summary
  Actress Ragini Dwivedi and Sanjana Galrani attended NDPS court today in related to drugs case. Both were out on bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X