»   » ಕಾಲ್ ಗರ್ಲ್ ಆದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ಕಾಲ್ ಗರ್ಲ್ ಆದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

By: ಉದಯರವಿ
Subscribe to Filmibeat Kannada

ಕಳ್ಳ ಮಳ್ಳ ಸುಳ್ಳ ಚಿತ್ರದ ಆ ಒಂದು ಹಾಡು ನಟಿ ರಾಗಿಣಿ ಅವರ ವೃತ್ತಿ ಬದುಕಿನಲ್ಲಿ ಹೊಸ ತಿರುವು ನೀಡಿತು ಎಂದೇ ಹೇಳಬೇಕು. ತುಪ್ಪಾ ಬೇಕಾ ತುಪ್ಪಾ ಹಾಡಿನ ಮೂಲಕ ರಾಗಿಣಿ ಕೂಡ ಜೋಕೆ ನಾನು ಬಳ್ಳಿಯ ಮಿಂಚು ಎಂದು ತೋರಿಸಿದರು. ಆ ಬಳಿಕ ಅವರಿಗೆ ಅಂಥಹದ್ದೇ ಸಾಕಷ್ಟು ಪಾತ್ರಗಳು ಬಂದವು. ಆದರೆ ಅವರು ಚೂಸಿಯಾದರು.

ಬಳಿಕ ಬಂದ 'ಶಿವ' ಚಿತ್ರದ ಅವರ ಪಾತ್ರ ಪ್ರೇಕ್ಷಕರ ನೆನಪಿನಲ್ಲಿ ಉಳಿಯಲಿಲ್ಲ. 'ವಿಕ್ಟರಿ' ಸಿಂಬಲ್ ಚಿತ್ರದಲ್ಲಿ ಒಂದು ಸ್ಪೆಷಲ್ ಸಾಂಗ್ ಮಾಡಿದರೂ ಖಾಲಿ ಕ್ವಾಟ್ರು ಬಾಟ್ಲಿಯಂತೆ ಲೈಫು...ಹಾಡಿನ ಮುಂದೆ ಅದು ಕಳೆದುಹೋಯಿತು. ಆದರೆ ರಾಗಿಣಿ ಪ್ರಯತ್ನ ಮಾತ್ರ ಮುಂದುವರೆದೇ ಇತ್ತು. [ರಾಗಿಣಿ ದ್ವಿವೇದಿಗೆ ಕೂಡಿಬಂತು ಕಂಕಣ ಭಾಗ್ಯ!]

ಇದೀಗ ಅವರು ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಇನ್ನೂ ಎಷ್ಟು ದಿನ ತುಪ್ಪಾ ಬೇಕಾ ತುಪ್ಪಾ ಗುಂಗಿನಲ್ಲಿ ಇರಲು ಸಾಧ್ಯ. ಈಗವರು ಕಾಲ್ ಗರ್ಲ್ ಪಾತ್ರಕ್ಕೆ ಓಕೆ ಎಂದಿದ್ದಾರೆ. ಈ ಮೂಲಕ ಕನ್ನಡದ ಉಳಿದ ತಾರೆಗಳಿಗೆ ಸ್ವಲ್ಪ ಶಾಕ್ ಕೂಡ ಕೊಟ್ಟಿದ್ದಾರೆ.

ಪಾತ್ರಕ್ಕೆ ಜೀವತುಂಬುತ್ತೇನೆ ಎಂದ ರಾಗಿಣಿ

ಯೋಗರಾಜ್ ಭಟ್ ಮೂವೀಸ್ ಬ್ಯಾನರ್ ನ 'ಪರಪಂಚ' ಚಿತ್ರದಲ್ಲಿ ರಾಗಿಣಿ ಅವರು ಕಾಲ್ ಗರ್ಲ್ ಹಾಗೂ ಬಾರ್ ಗರ್ಲ್ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ.

ಯಾವುದೇ ಸಂಕೋಚವಿಲ್ಲ ಎಂದ ರಾಗಿಣಿ

ಕಾಲ್ ಗರ್ಲ್ ಪಾತ್ರ ಮಾಡುತ್ತಿರುವುದಕ್ಕೆ ತಮಗೇನು ಸಂಕೋಚವಿಲ್ಲ. ಯಾಕೆಂದರೆ ತಾನೊಬ್ಬ ನಟಿ. ಪಾತ್ರ ಯಾವುದೇ ಇರಲಿ ಅದಕ್ಕೆ ನ್ಯಾಯ ಸಲ್ಲಿಸಬೇಕಾದದ್ದು ನನ್ನ ಧರ್ಮ ಎನ್ನುತ್ತಾರೆ ರಾಗಿಣಿ.

ಬಾರ್ ಗರ್ಲ್ ಜೊತೆಗೂ ಮಾತನಾಡುತ್ತಾರಂತೆ

ಈ ಪಾತ್ರಕ್ಕಾಗಿ ರಾಗಿಣಿ ಟೈಮ್ ಸಿಕ್ಕಿದರೆ ಕಾಲ್ ಗರ್ಲ್ ಹಾಗೂ ಬಾರ್ ಗರ್ಲ್ ಜೊತೆಗೂ ಮಾತನಾಡುತ್ತಾರಂತೆ. ಇದರಿಂದ ತಮ್ಮ ಪಾತ್ರಕ್ಕೆ ಇನ್ನಷ್ಟು ತೂಕ ತರಬಹುದು ಎಂಬುದು ರಾಗಿಣಿ ಲೆಕ್ಕಾಚಾರ.

ಚಿತ್ರದ ನಾಯಕ ನಟ ಧೂದ್ ಪೇಡ ದಿಗಂತ್

'ಪರಪಂಚ' ಚಿತ್ರಕ್ಕೆ ಕ್ರಿಶ್ ಜೊಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ನಾಯಕ ನಟ ಧೂದ್ ಪೇಡ ದಿಗಂತ್. ಇತ್ತೀಚೆಗೆ ಚಿತ್ರದ ಬೆತ್ತಲೆ ಫೋಟೋ ಭಾರಿ ಸದ್ದು ಮಾಡಿತ್ತು. ಆದರೆ ಬಳಿಕ ಅದು ಬೆತ್ತಲೆ ಅಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದ್ದು ಗೊತ್ತೇ ಇದೆ.

'ಪರಪಂಚ' ಬಾರ್ ಅಂಡ್ ರೆಸ್ಟೊರೆಂಟ್

ಇನ್ನು ಚಿತ್ರದಲ್ಲಿ 'ಪರಪಂಚ' ಎಂಬುದು ಒಂದು ಬಾರ್ ಅಂಡ್ ರೆಸ್ಟೋರೆಂಟ್ ಅಂತೆ. ಅದರ ಟ್ಯಾಗ್ ಲೈನ್ 'ವೆಜ್ ಅಂಡ್ ನಾನ್ ವೆಜ್'. ಒಟ್ಟಾರೆಯಾಗಿ ನಾನಾ ಕಾರಣಗಳಿಂದ ಪರಪಂಚ ಚಿತ್ರ ಭಾರಿ ಸದ್ದು ಮಾಡುತ್ತಿದೆ.

English summary
"Thuppa Beka Thuppa.." special song fame Actress Ragini Dwivedi to play a role of Call girl in Kannada movie 'Parapancha'. There is an amazing song written by Yogaraj sir that I will be dancing too, said the actress.
Please Wait while comments are loading...