ವಿಡಿಯೋ: ಮಾವಿನ ಮರ ಹತ್ತಿದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿ ಕೊರೊನಾ ಲಾಕ್‌ಡೌನ್ ಅನ್ನು ಚೆನ್ನಾಗಿ ಎಂಜಾಯ್ ಮಾಡುತ್ತಿದ್ದಾರೆ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿರುವ ಅವರು ಜೊತೆ-ಜೊತೆಗೆ ತುಂಟಾಟಕ್ಕೂ ಸಮಯ ಮೀಸಲಿರಿಸಿಕೊಂಡಿದ್ದಾರೆ.
Recommended Video
ನಿನ್ನೆಯಷ್ಟೆ, ಕೊರೊನಾ ಮುಖ್ಯ ಚಿಕಿತ್ಸಾ ಕೇಂದ್ರವಾಗಿರುವ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೆ ಭರ್ಜರಿ ವೆಜ್, ನಾನ್ ವೆಜ್ ಭೋಜನ ಹಾಕಿಸಿ ಸಮಾಜ ಸೇವೆಯ ಮೂಡ್‌ನಲ್ಲಿದ್ದ ನಟಿ ರಾಗಿಣಿ, ಇಂದು ಏಕಾ-ಏಕಿ ಬಾಲ್ಯಕ್ಕೆ ತೆರಳಿದ್ದಾರೆ.
ನಟಿ ರಾಗಿಣಿ ಮಾವಿನ ಮರ ಹತ್ತುವ ಹುಡುಕು ಸಾಹಸಕ್ಕೆ ಕೈ ಹಾಕಿದ್ದಾರೆ. ಅಪಾಯಕಾರಿ ಸ್ಥಳದಲ್ಲಿರುವ ಮಾವಿನ ಮರವೊಂದನ್ನು ಹತ್ತಿ ಮಾವಿನ ಕಾಯಿ ಕಿತ್ತಿದ್ದಾರೆ ರಾಗಿಣಿ.

ಮಾವಿನ ಮರ ಹತ್ತಿದ ತುಪ್ಪದ ಹುಡುಗಿ ರಾಗಿಣಿ
ಕಬ್ಬಿಣದ ಈಟಿಗಳಂತ ರಚೆನೆಯನ್ನು ಹೊಂದಿರುವ ಕಾಂಪೌಂಡ್ ನ ಅಂಚಿನಲ್ಲಿರುವ ಮಾವಿನ ಮರವನ್ನು ರಾಗಿಣಿ ಮತ್ತು ಸಹೋದರನೊಟ್ಟಿಗೆ ಹತ್ತಿ ಅಲ್ಲಿದ್ದ ಮಾವಿನ ಕಾಯಿ ಕಿತ್ತಿದ್ದಾರೆ. ಅಪಾಯಕಾರಿ ಸ್ಥಳದಲ್ಲಿ ಮರ ಇದ್ದರೂ ಧೃತಿಗೆಡದೆ ಮರ ಹತ್ತಿದ್ದಾರೆ ತುಪ್ಪದ ಹುಡುಗಿ.
ವಿಡಿಯೋ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ
ರಾಗಿಣಿ ಅವರು ಮರ ಏರಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಹಲವರು ಲೈಕ್ ಒತ್ತಿದ್ದಾರೆ. ಹಲವರು ಜಾಗೃತೆಯಾಗಿರಿ ಎಂದು ಪ್ರೀತಿ ಪೂರ್ವಕ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದೊಳ್ಳೆ ವ್ಯಾಯಾಮ ಎಂದ ರಾಗಿಣಿ
ಮರ ಏರಿದ ರಾಗಿಣಿ ಮತ್ತು ಸಹೋದರ ಹಲವು ಮಾವಿನ ಕಾಯಿ ಕಿತ್ತಿದ್ದಾರೆ. ಮನೆಯ ಹತ್ತಿರವೇ ಇರುವ ಮಾವಿನ ಮರ ಇದು ಎಂದು ರಾಗಿಣಿ ವಿಡಿಯೋದಲ್ಲಿ ಹೇಳಿದ್ದಾರೆ. ಹತ್ತು ಮಾವಿನ ಕಾಯಿ ಕಿತ್ತೆವೆಂದು ಹೇಳುವ ರಾಗಿಣಿ, ಇದು ಅದ್ಭುತವಾದ ವ್ಯಾಯಾಮ ಎಂದು ಹೇಳಿದ್ದಾರೆ.

ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಾಗಿಣಿ
ರಾಗಿಣಿ ದ್ವಿವೇದಿ ಅವರು ಕೊರೊನಾ ಸಂಕಷ್ಟದಲ್ಲಿ ಸಾಕಷ್ಟು ಸಮಾಜ ಸೇವೆ ಕಾರ್ಯಗಳನ್ನು ಮಾಡುತ್ತಿದ್ದಾರೆ. ಉಚಿತ ಮಾಸ್ಕ್, ಗ್ಲೌಸ್ ವಿತರಣೆ. ಆಹಾರ, ದಿನಸಿ ವಿತರಣೆ, ನಾಯಿಗಳಿಗೆ ಆಹಾರ ವಿತರಣೆ ಕಾರ್ಯಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











