ರಾಗಿಣಿ ಸುದ್ದಿಗೋಷ್ಠಿ: ಡ್ರಗ್ಸ್ ಪ್ರಕರಣದ ಬಗ್ಗೆ ತುಪ್ಪದ ಹುಡುಗಿ ಏನಂದ್ರು?

ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿದ್ದ ನಟಿ ರಾಗಿಣಿ ದ್ವಿವೇದಿ ಜೈಲಿನಿಂದ ಬಿಡುಗಡೆಯಾದ ಬಳಿಕ ಮೊಟ್ಟ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದಿದ್ದರು. ವಿಶೇಷ ಚೇತನ ಕ್ರಿಕೆಟ್ ಪಟುಗಳು ಆಯೋಜಿಸಿರುವ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೂರ್ನಿಗೆ ರಾಗಿಣಿ ರಾಯಭಾರಿಯಾಗಿದ್ದು, ಈ ಸಂಬಂಧ ಮಾಹಿತಿ ನೀಡಲು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Recommended Video

ವಿಶೇಷ ಚೇತನರ ಕ್ರಿಕೆಟ್ ತಂಡಕ್ಕೆ ರಾಗಿಣಿ ರಾಯಭಾರಿ | Filmibeat Kannada

ಜೈಲಿನಿಂದ ಹೊರ ಬಂದ ದಿನ ಡ್ರಗ್ಸ್ ಕೇಸ್‌ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ರಾಗಿಣಿ ''ಮಾತಾನಾಡುವುದು ಜಾಸ್ತಿ ಇದೆ, ಪ್ರೆಸ್ ಮೀಟ್ ಮಾಡ್ತೀನಿ'' ಅಂದಿದ್ದರು. ಆಮೇಲೆ ರಾಗಿಣಿ ಈ ವಿಚಾರದ ಕುರಿತು ಎಲ್ಲಿಯೂ ಚರ್ಚಿಸಿಲ್ಲ. ಹಾಗಾಗಿ, ಇಂದು ನಡೆದ ರಾಗಿಣಿಯ ಸುದ್ದಿಗೋಷ್ಠಿ ಕುತೂಹಲ ಮೂಡಿಸಿತ್ತು.

ಡ್ರಗ್ಸ್ ಪ್ರಕರಣದ ಬಗ್ಗೆ ರಾಗಿಣಿ ಮಾತನಾಡಬಹುದು, ಈ ಕೇಸ್‌ನಲ್ಲಿ ತನ್ನ ಪಾತ್ರ ಏನು ಎಂಬುದರ ಬಗ್ಗೆ ಹೇಳಬಹುದು ಎಂದು ನಿರೀಕ್ಷಿಸಲಾಗಿತ್ತು. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳ ಸಹ ರಾಗಿಣಿ ಅವರನ್ನು ಪ್ರಶ್ನಿಸಿದರು. ಆದರೆ, ನಟಿ ರಾಗಿಣಿ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ''ನನಗೆ ಬೇಡವಾದ ವಿಚಾರ ಇದು, ನಾನು ಮಾತನಾಡಲ್ಲ'' ಎಂದು ಹೇಳಿ ಸುಮ್ಮನಾದರು. ಮುಂದೆ ಓದಿ...

ಈ ವರ್ಷದ ಕಡೆ ಹೆಚ್ಚು ಗಮನ ಕೊಡೋಣ

ಈ ವರ್ಷದ ಕಡೆ ಹೆಚ್ಚು ಗಮನ ಕೊಡೋಣ

''ಕಳೆದ ವರ್ಷ ಎಲ್ಲರ ಜೀವನದಲ್ಲೂ ಕಷ್ಟವಾಗಿತ್ತು. ಈ ವರ್ಷ ಒಳ್ಳೆಯ ಕಡೆ ಗಮನ ಹರಿಸೋಣ. ನನಗೆ 2021ನೇ ವರ್ಷ ಪಾಸಿಟಿವ್ ಆಗಿರಲಿದೆ. ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡ್ತೇನೆ, ಕೆಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ. ಸೋಮವಾರ ಮತ್ತೊಂದು ಪ್ರಮುಖ ಪ್ರಕಟಣೆ ಮಾಡುತ್ತೇನೆ'' ಎಂದು ತಿಳಿಸಿದರು.

ನನಗೆ ಬೇಡವಾದ ವಿಷಯ ಬಿಡಿ

ನನಗೆ ಬೇಡವಾದ ವಿಷಯ ಬಿಡಿ

''ರಾಗಿಣಿ ದ್ವಿವೇದಿ ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ನನ್ನ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಅಗತ್ಯ ನನಗಿಲ್ಲ. ಮಾಧ್ಯಮಗಳಲ್ಲಿ ನನ್ನ ಕುರಿತು ಬಗೆ ಬಗೆಯಾದ ಸ್ಟೋರಿಗಳು, ಚರ್ಚೆಗಳು, ತೀರ್ಮಾನಗಳು ಆಗಿವೆ, ನನ್ನ ಅಗತ್ಯವಿದ್ದಿದ್ದರೆ ಕಾಯಬೇಕಿತ್ತು ಅಲ್ವೇ?. ಈಗ ಮಾತಾಡಿದ್ರೆ ಏನು ಪ್ರಯೋಜನ'' ಎಂದು ಪ್ರಶ್ನಿಸಿದರು.

ಹೊಸ ಸಿನಿಮಾ ಕರ್ವ 3

ಹೊಸ ಸಿನಿಮಾ ಕರ್ವ 3

ವಿಶಾಲ್ ಶೇಖರ್ ನಿರ್ದೇಶನ ಮಾಡುತ್ತಿರುವ ಕರ್ವ 3 ಚಿತ್ರದಲ್ಲಿ ನಟಿ ರಾಗಿಣಿ ನಟಿಸುತ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತಿಲಕ್ ಮತ್ತು ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಈ ಇಬ್ಬರು ಜೊತೆ ಈಗ ರಾಗಿಣಿ ದ್ವಿವೇದಿ ಜೊತೆಯಾಗಿದ್ದಾರೆ. ಈ ಸಂಬಂಧ ನಿರ್ಮಾಪಕ ಕೃಷ್ಣ ಚೈತನ್ಯ ಹಾಗೂ ಕೆ ಮಂಜು ರಾಗಿಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಡ್ರಗ್ಸ್ ಪ್ರಕರಣದ ಹಿನ್ನೆಲೆ

ಡ್ರಗ್ಸ್ ಪ್ರಕರಣದ ಹಿನ್ನೆಲೆ

ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ಎ2 ಆಗಿದ್ದರು. ಈ ಹಿನ್ನೆಲೆ ಕಳೆದ ವರ್ಷ ಸೆಪ್ಟೆಂಬರ್ 4 ರಂದು ನಟಿ ರಾಗಿಣಿ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಸೆಪ್ಟೆಂಬರ್ 14ರವರೆಗೂ ಸಿಸಿಬಿ ಕಸ್ಟಡಿಯಲ್ಲಿದ್ದ ನಟಿಯನ್ನು ಸೆಪ್ಟೆಂಬರ್ 15 ರಂದು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಸುಮಾರು 145ಕ್ಕೂ ಹೆಚ್ಚು ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ರಾಗಿಣಿ ಇರಬೇಕಾಯಿತು. ಜನವರಿ 21 ರಂದು ರಾಗಿಣಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಆದರೆ, ಕಾನೂನು ಪ್ರಕ್ರಿಯೆ ವಿಳಂಬವಾದ ಕಾರಣ ಜನವರಿ 25 ರಂದು ಜೈಲಿನಿಂದ ರಿಲೀಸ್ ಆದರು.

More from Filmibeat

English summary
Kannada Actress Ragini Dwivedi denied to react about drugs case in press meet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X