For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ದ್ವಿವೇದಿಯನ್ನ ತಡೆಯೋರು ಯಾರೂ ಇಲ್ಲ

  By ಜೀವನರಸಿಕ
  |

  ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಈಗ ಇದೇ ಹಾಡನ್ನ ಹಾಡ್ತಿದ್ದಾರೆ. ಯಾಕಂದ್ರೆ ಹೆಚ್ಚೂ ಕಡಿಮೆ ಎರಡೂವರೆ ವರ್ಷ ರಾಗಿಣಿ ಅದೊಂದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡಿದರು. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಿರ್ಲಿಲ್ಲ. ಅದು ಕನ್ನಡದಿಂದ ತೆಲುಗು ತಮಿಳಲ್ಲಿ ಮಿಂಚೋದು.

  ತಿಂಗಳುಗಟ್ಟಲೆ ಹೈದರಾಬಾದ್, ಚೆನ್ನೈನಲ್ಲಿ ಅವಕಾಶಕ್ಕಾಗಿ ಅದಷ್ಟೋ ನಿರ್ದೇಶಕರನ್ನ ಕೇಳಿದರು. ಆದರೆ ಈಗ ಅದು ಸಾಧ್ಯವಾಗಿದೆ. ರಾಗಿಣಿ ತೆಲುಗು, ತಮಿಳಲ್ಲಿ ಮಿಂಚ್ತಿದ್ದಾರೆ. ಹೌದು 'ವೀರಮದಕರಿ' ಸಿನಿಮಾ ಮೂಲಕ ರಾಗಿಣಿ ಕನ್ನಡಕ್ಕೆ ಎಂಟ್ರಿಕೊಟ್ಟ ಮೇಲೆ ಒಂದೊಂದೇ ಸಿನಿಮಾಗಳಲ್ಲಿ ಯಶಸ್ವಿಯಾಗ್ತಾ ಪಕ್ಕದ ಕಾಲಿವುಡ್ ಟಾಲಿವುಡ್ ನ ಕನಸು ಕಂಡ್ರು. [ರಾಗಿಣಿಗೆ ಪಿನ್ ಇಟ್ಟ ಕನ್ನಡದ ಸ್ಟಾರ್ ನಟರ್ಯಾರು?]

  ಆದರೆ ಅಷ್ಟರಲ್ಲಾಗಲೇ ಪಾರ್ಮ್ ಕಳೆದುಕೊಂಡಿದ್ದ ರಾಗಿಣಿ ಇತ್ತ ಕನ್ನಡದಲ್ಲೂ ಉಳಿಯಲಾಗದೆ ತಮಿಳು, ತೆಲುಗಿಗೂ ಹಾರಲಾಗದೆ ಪರದಾಡುತ್ತಿದ್ರು. ಆದರೆ ಕನ್ನಡದಲ್ಲಿ 'ಯಾರೇ ಕೂಗಾಡಲಿ' ಚಿತ್ರಮಾಡಿದ್ದ ಸಮುದ್ರಕಣಿ ತಮ್ಮ ಚಿತ್ರ "ನಿಮಿರುಂದ್ ನಿಲ್"ನಲ್ಲಿ ರಾಗಿಣಿಗೆ ಒಂದು ಮುಖ್ಯಪಾತ್ರ ಕೊಟ್ಟಿದ್ದಾರೆ.

  ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ರಾಗಿಣಿ ಟ್ರೈಲರ್ ನಲ್ಲಿ ಕಾಣಿಸಿಕೊಳ್ತಾರೆ. ಇನ್ನು ತೆಲುಗಿನಲ್ಲಿ ಎಂಟ್ರಿಕೊಡಬೇಕು ಅನ್ನೋ ಆಸೆ ಕೂಡ ಈ ಸಿನಿಮಾ ಮೂಲಕ ಈಡೇರ್ತಿದೆ.

  'ನಿಮರುಂದ್ ನಿಲ್' ಸಿನಿಮಾದ ತೆಲುಗು ಅವತರಣಿಕೆ 'ಝಂಡಾ ಪೈ ಕಪಿರಾಜು' ಅನ್ನೋ ಹೆಸರಿನಲ್ಲಿ ಡಬ್ ಆಗುತ್ತಿದೆ. ಈ ಮೂಲಕ ತೆಲುಗಿನಲ್ಲೂ ಮಿಂಚಲಿದ್ದಾರೆ. ಏನೇ ಆಗ್ಲಿ ಯಾರೇ ಪಿನ್ ಇಟ್ರೂ ನನ್ನನ್ನ ತಡೆಯೊಕಗಲ್ಲ ಅಂತಿದ್ದಾರೆ ಗ್ಲಾಮರ್ ಡಾಲ್.

  English summary
  Kannada actress Ragini Dwivedi's Tollywood, Kollywood dream comes true through Samuthirakani upcoming movie Nimirndhu Nil. The actress plays pivotal role in this film. The film is simultaneously being made in Telugu as Janda Pai Kapiraju with Nani replacing Jayam Ravi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X