ಇವತ್ತಾದರೂ ಜೈಲಿನಿಂದ ಹೊರಬರ್ತಾರಾ ನಟಿ ರಾಗಿಣಿ?
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ್ದ ನಟಿ ರಾಗಿಣಿಗೆ ಇವತ್ತು ಜೈನಿಲಿಂದ ಹೊರಬರುವ ಸಾಧ್ಯತೆ ಇದೆ. ರಾಗಿಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದರೂ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. 140ಕ್ಕೂ ಹೆಚ್ಚು ದಿನಗಳು ಜೈಲು ವಾಸ ಅನುಭವಿಸಿದ್ದ ರಾಗಿಣಿಗೆ ಸುಪ್ರೀಂ ಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.
ಇಂದು ರಾಗಿಣಿ ಬಿಡುಗಡೆಗೆ ಅಗತ್ಯವಿರುವ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ ರಾಗಿಣಿ ಪರ ವಕೀಲರು. ಎನ್ ಡಿಪಿಎಸ್ ಕೋರ್ಟ್ ನಲ್ಲಿ ಷರತ್ತುಗಳನ್ನ ಪೂರೈಸಿ ವಕೀಲರು ಬಿಡುಗಡೆ ಆದೇಶ ಪಡೆಯಲಿದ್ದಾರೆ.
ಕಳೆದ ಗುರುವಾರ (ಜನವರಿ 21) ಸುಪ್ರೀಂ ಕೋರ್ಟ್ ನಿಂದ ಜಾಮೀನು ಸಿಕ್ಕಿದ್ದು, ಶುಕ್ರವಾರ ಮಧ್ಯಾಹ್ನದ ಬಳಿಕ ವಕೀಲರು ಸುಪ್ರೀಂ ಆದೇಶ ಪ್ರತಿ ಹಿಡಿದು ಬೆಂಗಳೂರಿಗೆ ಬಂದಿದ್ದರು. ಶನಿವಾರ ಎನ್ ಡಿ ಪಿ ಎಸ್ ಕೋರ್ಟ್ ನಲ್ಲಿ ಸುಪ್ರೀಂ ಕೋರ್ಟ್ ಆದೇಶ ಪ್ರತಿ ಹಾಜರು ಪಡಿಸಿದ್ದರು.

ರಾಗಿಣಿಗೆ ಜಾಮೀನು ಮಂಜೂರು ಮಾಡಲು ಕೋರ್ಟ್ ಷರತ್ತುಗಳನ್ನು ವಿಧಿಸಿದ್ದು, 3 ಲಕ್ಷ ಬಾಂಡ್, ಇಬ್ಬರು ವ್ಯಕ್ತಿಗಳ ಶ್ಯೂರಿಟಿ, 15 ದಿನಕ್ಕೊಮ್ಮೆ ತನಿಖಾಧಿಕಾರಿ ಮುಂದೆ ಹಾಜರಾಗಿ ಸಹಿ ಹಾಕಬೇಕು ಎಂಬ ಷರತ್ತುಗಳು ಹಾಕಿತ್ತು.
ಆದರೆ ಷರತ್ತುಗಳನ್ನು ಪೂರೈಸಲು ಸಮಯಾವಕಾಶ ಕೇಳಿದ್ದ ರಾಗಿಣಿ ಪರ ವಕೀಲರು ಸೋಮವಾರ ಪ್ರತಿಕ್ರಿಯೆ ಪೂರ್ಣ ಮಾಡುವುದಾಗಿ ಹೇಳಿದ್ದರು. ಇವತ್ತು ಸಂಜೆ ಅಷ್ಟೊತ್ತಿಗೆ ರಾಗಿಣಿ ಜೈಲಿನಿಂದ ಹೊರಬರುವ ಸಾಧ್ಯತೆ ಹೆಚ್ಚಿದೆ.


Click it and Unblock the Notifications











