For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ಈಸ್ ಬ್ಯಾಕ್: ತುಪ್ಪದ ಹುಡುಗಿ ಕೈಯಲ್ಲಿರುವ ಚಿತ್ರಗಳು ಯಾವುದು?

  |

  ಶರಣ್ ಅವರ 'ಅದ್ಯಕ್ಷ ಇನ್ ಅಮೆರಿಕಾ' ಚಿತ್ರದ ಬಳಿಕ ನಟಿ ರಾಗಿಣಿ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. 2020ನೇ ವರ್ಷ ಕೊರೊನಾ ವೈರಸ್ ಕಾಟ ಹಾಗೂ ಡ್ರಗ್ಸ್ ಪ್ರಕರಣ ರಾಗಿಣಿ ಪಾಲಿಗೆ ಕೆಟ್ಟ ಘಳಿಗೆ ಆಗಿತ್ತು.

  ಇದೀಗ, ಡ್ರಗ್ಸ್ ಕೇಸ್, ಜೈಲು ವಾಸ ಮುಗಿಸಿ ಬಂದಿರುವ ರಾಗಿಣಿ ಚಿತ್ರರಂಗದಲ್ಲಿ ಮತ್ತೆ ಬ್ಯುಸಿಯಾಗುವ ಸೂಚನೆ ನೀಡಿದ್ದಾರೆ. ಒಪ್ಪಿಕೊಂಡಿರುವ ಚಿತ್ರಗಳನ್ನು ಮಾಡಿಕೊಡಬೇಕು ಎಂಬ ಉದ್ದೇಶದಿಂದ ಮತ್ತೆ ಸಕ್ರಿಯರಾಗಿದ್ದಾರೆ.

  ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ ರಾಗಿಣಿ: ಕೆಟ್ಟ ಕಾಮೆಂಟ್ ಮಾಡೋರಿಗೆ ಹೇಳಿದ್ದೇನು?ಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟ ನಟಿ ರಾಗಿಣಿ: ಕೆಟ್ಟ ಕಾಮೆಂಟ್ ಮಾಡೋರಿಗೆ ಹೇಳಿದ್ದೇನು?

  ಇತ್ತೀಚಿಗಷ್ಟೆ ಕರ್ವ 3 ಎಂಬ ಹೊಸ ಸಿನಿಮಾ ಘೋಷಿಸಿದ್ದರು. ವಿಶಾಲ್ ಶೇಖರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಕೃಷ್ಣ ಚೈತನ್ಯ ಬಂಡವಾಳ ಹಾಕುತ್ತಿದ್ದಾರೆ. ತಿಲಕ್ ಮತ್ತು ಮೇಘನಾ ಗಾಂವ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

  ರಘು ಹಾಸನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಗಾಂಧಿಗಿರಿ' ಸಿನಿಮಾ ಕೊನೆಯ ಹಂತದ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ. ಶೇಕಡಾ 80ರಷ್ಟು ಶೂಟಿಂಗ್ ಮುಗಿದ್ದು, ಕೆಲವು ದೃಶ್ಯ ಹಾಗೂ ಎರಡು ಹಾಡುಗಳು ಮಾತ್ರ ಉಳಿದಿದೆ. ಜೋಗಿ ಪ್ರೇಮ್ ಈ ಚಿತ್ರದಲ್ಲಿ ನಾಯಕನಾಗಿದ್ದು, ಈ ಸಿನಿಮಾ ಕೆಲಸ ಮತ್ತೆ ಆರಂಭಿಸಲಿದ್ದಾರೆ ರಾಗಿಣಿ.

  ರಾಗಿಣಿ ನಟನೆಯ 'ನಾನೇ ನೆಕ್ಸ್ಟ್ ಸಿಎಂ' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮುಸ್ಸಂಜೆ ಮಹೇಶ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನಮಾಡಿದ್ದಾರೆ. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  Actress Ragini Dwivedi Movies list 2021
  ವಿಶೇಷ ಚೇತನರ ಕ್ರಿಕೆಟ್ ತಂಡಕ್ಕೆ ರಾಗಿಣಿ ರಾಯಭಾರಿ | Filmibeat Kannada

  ಇದರ ಜೊತೆಗೆ ಸೋಮವಾರ ಪ್ರಮುಖ ವಿಷಯವೊಂದು ಪ್ರಕಟಿಸಲಿದ್ದಾರಂತೆ. ಹೊಸ ಸಿನಿಮಾ ಇರಬಹುದಾ ಎಂಬ ಕುತೂಹಲವೂ ಕಾಡುತ್ತಿದೆ.

  English summary
  Kannada Actress Ragini Dwivedi Starrer Nane next CM movie set to release. gandhigiri movie resume shooting and karva 3 starts shooting soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X