ರಾಗಿಣಿ ಹುಟ್ಟು ಹಬ್ಬ: ವಿಶೇಷ ಉಡುಗೊರೆ ಕೊಟ್ಟಿದ್ದು ಯಾರು ಗೊತ್ತಾ?
ನಟಿ ರಾಗಿಣಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ರಾಗಿಣಿ ತಮ್ಮ ಹುಟ್ಟು ಹಬ್ಬವನ್ನು ಆಪ್ತರು, ಗೆಳೆಯರ ಜೊತೆಗೆ ಆಚರಿಸಿಕೊಳ್ಳುತ್ತಾ ಇದ್ದಾರೆ. ಇನ್ನು ರಾಗಿಣಿ ಹುಟ್ಟು ಹಬ್ಬದ ಪ್ರಯುಕ್ತ ಅವರ ಮುಂದಿನ ಸಿನಿಮಾ, 'ಸಾರಿ ಕರ್ಮ ರಿಟರ್ನ್ಸ್' ಸಿನಿಮಾದ ಟೀಸರ್ ರಿಲೀಸ್ ಆಗಿದೆ.
ಕನ್ನಡ ಸಿನಿಮಾರಂಗದಲ್ಲಿ ತುಪ್ಪದ ಬೆಡಗಿ ಅಂತಲೇ ಖ್ಯಾತಿ ಪಡೆದಿರುವ ನಟಿ ರಾಗಿಣಿ ದ್ವಿವೇದಿ ಸದ್ಯ ಸಿನಿಮಾ ರಂಗದಲ್ಲಿ ಮತ್ತೆ ಸಕ್ರಿಯವಾಗಿದ್ದಾರೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ರಾಣಿಗಿ ಅಭಿನಯಿಸುತ್ತಾ ಇದ್ದಾರೆ. ಇನ್ನು ಹುಟ್ಟು ಹಬ್ಬದ ಪ್ರಯುಕ್ತ ಒಂದಷ್ಟು ಹೊಸ ಸಿನಿಮಾ ಮತ್ತು ಯೋಜನೆಗಳನ್ನು ಕೈಗೊಂಡಿದ್ದಾರೆ ರಾಗಿಣಿ.
ಸಿನಿಮಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ನಟಿ ರಾಗಿಣಿ ವೈಯಕ್ತಿಕ ಬದುಕಿನ ಬಗ್ಗೆ ಒಂದಷ್ಟು ವಿಚಾರಗಳನ್ನು ಫಿಲ್ಮಿ ಬೀಟ್ ಜೊತೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಮಂಗಳ ಮುಖಿಯರಿಗೆ ರಾಗಿಣಿ ಆಸರೆ!
ಅರ್ಥಪೂರ್ಣವಾಗಿ ಹುಟ್ಟ ಹಬ್ಬದ ಆಚರಣೆ ಮಾಡಿಕೊಂಡಿದ್ದಾರೆ ನಟಿ ರಾಗಿಣಿ. ಈ ಹಿಂದೆ ಕೊರೊನ ಸಮಯದಲ್ಲಿ ಸಾಕಷ್ಟು ಜನರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವುದರ ಮೂಲಕ ಗಮನ ಸೆಳೆದಿದ್ದರು. ಹಾಗಾಗಿ ಇವರ ಸಹಾಯ ಅರಸಿ ಹೋಗಿದ್ದರಂತೆ ಹಲವು ಮಂಗಳ ಮುಖಿಯರು. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಹೇಳಿಕೊಂಡಿರುವ ರಾಗಿಣಿ, ಮಂಗಳ ಮುಖಿಯರ ಪರವಾಗಿ ಹೊಸ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂದಾಗಿದ್ದಾರೆ.
Recommended Video


ಮೊದಲ ಗಿಫ್ಟ್ ರಾಗಿಣಿ ನೆಚ್ಚಿನ ಹೂ ಗುಚ್ಚಾ!
ಪ್ರತಿ ವರ್ಷ ಹುಟ್ಟು ಹಬ್ಬವನ್ನು ನಟಿ ರಾಗಿಣಿ ತಮ್ಮ ಬಳಗದಲ್ಲೇ ಆಚರಿಸುತ್ತಾರಂತೆ ಇನ್ನು ಈ ಹುಟ್ಟು ಹಬ್ಬಕ್ಕೆ ಸಿಕ್ಕ ವಿಶೇಷ ಉಡುಗೊರೆ ಬಗ್ಗೆ ಹೇಳಿದ್ದು ಹೀಗೆ. "ನನಗೆ ಹುಟ್ಟು ಹಬ್ಬ ಅಂದರೆ ಕುಟುಂಬ, ಸದಾ ಹುಟ್ಟು ಹಬ್ಬವನ್ನು ಕುಟುಂಬದ ಜೊತೆಗೆ ಆಚರಣೆ ಮಾಡುತ್ತೇನೆ. ಈ ಬಾರಿ ಮೊದಲು ಸಿಕ್ಕಿದ್ದು ನನಗೆ 3 ಸ್ಟೋರೀಸ್ ರೋಸ್. ಗುಲಾಬಿ ಹೂ ಗುಚ್ಚಾ. ಇದು ನನ್ನ ಫೇವರೆಟ್. ಬೆಳಿಗ್ಗೆ ಮನೆಗೆ ಬಂದ ಈ ಗುಚ್ಚವನ್ನು ನೋಡಿ ತುಂಬಾ ಖುಷಿ ಆಯ್ತು." ಎಂದಿದ್ದಾರೆ.

ಅಮ್ಮ ಮಾಡುವ ಬೊಂಬೆ ಕೇಕ್ ತುಂಬಾ ಇಷ್ಟ!
ಇನ್ನು ನಟಿ ರಾಗಿಣಿಗೆ ಚಿಕ್ಕವಯಸ್ಸಿನಿಂದಲೂ ತಮ್ಮ ತಾಯಿ ಮಾಡುವ ಕೇಕ್ ಎಂದರೆ ಬಲು ಇಷ್ಟವಂತೆ. "ನನ್ನ ಅಮ್ಮ ತುಂಬಾ ಚೆನ್ನಾಗಿ ಕೇಕ್ ಮಾಡುತ್ತಾರೆ. ಅವರು ನನಗಾಗಿ ಕಾರ್ಟೂನ್ ಬೊಂಬೆಗಳ ಕೇಕ್ ಮಾಡುತ್ತಾ ಇದ್ದರು. ಟೆಡ್ಡಿ ಬೇರ್, ಎಲಿಫ್ಯಾಂಟ್ ಹೀಗೆ ಹಲವು ಬಗೆಯ ಕೇಕ್ ಮಾಡುತ್ತಿದ್ದರು. ಇದು ನನ್ನ ಪ್ರತಿ ಬಾರಿ ಬರ್ತ್ ಡೇ ವಿಶೇಷ ಆಗಿರುತ್ತಾ ಇತ್ತು'' ಎಂದಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ರಾಗಿಣಿ ಬ್ಯೂಸಿ!
ನಟಿ ರಾಗಿಣಿ ದ್ವಿವೇದಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕನ್ನಡದ ಮೂರು ಸಿನಿಮಾಗಳು ಮತ್ತು ಮಲಯಾಳಂನಲ್ಲಿ ಒಂದು ಸಿನಿಮಾ ಮಾಡುತ್ತಾ ಇದ್ದಾರೆ. ಇದರ ಜೊತೆಗೆ ಮತ್ತೊಂದು ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಾಗಿಣಿ ನಟಿಸಲು ತಯಾರಿ ನಡೆಸಿದ್ದಾರೆ.


Click it and Unblock the Notifications











