'ಎರಡು ಕೈ ಸೇರಿದ್ರೆ ಚಪ್ಪಾಳೆ' ಕಾಸ್ಟಿಂಗ್ ಕೌಚ್ ಬಗ್ಗೆ ಹೀಗಂದ್ರು ರಾಗಿಣಿ!
ಟಾಲಿವುಡ್ ನಲ್ಲಿ ಬುಗಿಲೆದ್ದ ಕಾಸ್ಟಿಂಗ್ ಕೌಚ್ ವಿವಾದ ಈಗ ಕನ್ನಡಕ್ಕೂ ತಲುಪಿದೆ. ಈಗ ಸ್ಯಾಂಡಲ್ ವುಡ್ ನಟಿಯರು ಕೂಡ ಒಬ್ಬೊಬ್ಬರಾಗಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯ ನಟಿ ರಾಗಿಣಿ ದ್ವಿವೇದಿ ಸಹ ಈ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ.
''ಕಾಸ್ಟಿಂಗ್ ಕೌಚ್ ನಟಿಯರ ಬಿಟ್ಟ ವಿಚಾರ. ಅದು ಅವರ ವೈಯಕ್ತಿಕ ವಿಷಯ. ಆದರೆ, ನನಗೆ ಈ ರೀತಿಯ ಯಾವುದೇ ಅನುಭವವಾಗಿಲ್ಲ. ಒಂದು ಕೈಯಿಂದ ಚಪ್ಪಾಳೆ ತಟ್ಟುವುದಕ್ಕೆ ಆಗಲ್ಲ. ಎರಡು ಕೈ ಸೇರಿದರೆ ಚಪ್ಪಾಳೆ ಆಗುತ್ತದೆ. ಇನ್ನು ನಟಿಯರನ್ನು ಮಂಚಕ್ಕೆ ಕರೆಯುವುದು ಮಾತ್ರ ಕೆಟ್ಟ ಸಂಸ್ಕೃತಿ'' ಎಂದು ಕಾಸ್ಟಿಂಗ್ ಕೌಚ್ ವಿರುದ್ಧ ರಾಗಿಣಿ ಕಿಡಿಕಾರಿದ್ದಾರೆ. ಇಂದು ನಡೆದ 'ಕಿಚ್ಚು' ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ರಾಗಿಣಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಇತ್ತೀಚಿಗಷ್ಟೆ ನಟಿ ಹರ್ಷಿಕಾ ಪೂಣಚ್ಚ ಕೂಡ ಕಾಸ್ಟಿಂಗ್ ಕೌಚ್ ವಿಚಾರದ ಬಗ್ಗೆ ಮಾತನಾಡಿದರು. ''ನಾನು ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾ ಮಾಡಿದ್ದೇನೆ. ಆದರೆ ಸೌತ್ ಇಂಡಸ್ಟ್ರಿಯಲ್ಲಿ ನನಗೆ ಈ ರೀತಿಯ ಅನುಭವ ಆಗಿಲ್ಲ. ಬಾಲಿವುಡ್ ನಲ್ಲಿ ಮಾತ್ರ ಈ ರೀತಿಯ ನನಗೆ ಕೆಟ್ಟ ಅನುಭವ ಆಗಿದೆ.'' ಎಂದು ಅವರು ತಿಳಿಸಿದ್ದಾರೆ. ಇದರ ಜೊತೆಗೆ ಈ ಹಿಂದೆಯೇ ನಟಿ ಶೃತಿ ಹರಿಹರನ್, ಹರಿಪ್ರಿಯಾ ಕೂಡ ಕಾಸ್ಟಿಂಗ್ ಕೌಚ್ ವಿರುದ್ಧ ಸಮರ ಸಾರಿದ್ದರು.


Click it and Unblock the Notifications











