ಕ್ಷಮಿಸಿ: ಕರ್ಮ ಹಿಂದಿರುಗಿ ಬರುತ್ತದೆ ಎಂದ ರಾಗಿಣಿ ದ್ವಿವೇದಿ

ನಟಿ ರಾಗಿಣಿ ದ್ವಿದೇದಿ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಈ ಬಾರಿ ರಾಗಿಣಿ ಕರ್ಮದ ಬಗ್ಗೆ ಪಾಠ ಮಾಡಲು ಬರುತ್ತಿದ್ದಾರೆ. ರಾಗಿಣಿ ಕರ್ಮದ ಬಗ್ಗೆ ಹೇಳಲು ಕಾರಣ ಅವರ ಹೊಸ ಸಿನಿಮಾ. ರಾಗಿಣಿ ನಾಯಕ ನಟಿಯಾಗಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ರಾಗಿಣಿ ಹಂಚಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ವಿಶೇಷವಾಗಿ ಗಮನ ಸೆಳೆದಿದೆ. SORRY: Karma returns ಎನ್ನುವ ಟೈಟಲ್‌ ಚಿತ್ರಕ್ಕೆ ಇಡಲಾಗಿದೆ. ಇದು ಕನ್ನಡಕ್ಕೆ ಅನುವಾದಿಸಿದರೆ ಕ್ಷಮಿಸಿ: ಕರ್ಮ ಹಿಂದಿರುಗಿ ಬರುತ್ತದೆ ಎಂದು ಆಗುತ್ತದೆ. ಅಂದರೆ ನೀವು ಮಾಡಿರುವ ಕರ್ಮಗಳು ಮತ್ತೆ ಹಿಂದಿರುಗಿ ನಿಮ್ಮ ಬಳಿಗೆ ಬರುತ್ತವೆ ಎನ್ನುವ ಅರ್ಥ ಬರುತ್ತದೆ. ಸಿನಿಮಾದಲ್ಲಿ ಇದೇ ಮಾದರಿಯ ಕಥೆ ಇರಲಿದೆ.

ಡ್ರಗ್ ಪ್ರಕರಣದಿಂದ ಸದ್ಯಕ್ಕೆ ಮುಕ್ತಿ ಪಡೆದುಕೊಂಡಿರುವ ನಟಿ ರಾಗಿಣಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಮೊದಲಿನಂತೆಯೇ ರಾಗಿಣಿ ಅವರನ್ನು ಹುಡುಕಿಕೊಂಡು ಸಿನಿಮಾಗಳು ಬರುತ್ತಿವೆ. ರಾಗಿಣಿ ಕೂಡ ಕಥೆಗಳನ್ನು ಕೇಳುವಲ್ಲಿ ನಿರತರಾಗಿದ್ದಾರೆ. ಈಗ ಈ ಹೊಸ ಚಿತ್ರವನ್ನು ಪ್ರಕಟ ಮಾಡಿದ್ದಾರೆ. SORRY: Karma returns ಸಿನಿಮಾ ರಾಗಿಣಿ ಸಿನಿಮಾ ಜೀವನದಲ್ಲಿ ವಿಭಿನ್ನ ಸಿನಿಮಾ ಆಗಿ ನಿಲ್ಲಲ್ಲಿದೆ. ಜೊತೆಗೆ ಈ ಚಿತ್ರ ಕನ್ನಡ ಚಿತ್ರ ರಂಗಕ್ಕೂ ಹೊಸದು ಎನ್ನುತ್ತಾರೆ ರಾಗಿಣಿ. ಈ ಚಿತ್ರ ಬಲವಾದ ಸಾಮಾಜಿಕ ಸಂದೇಶವನ್ನು ಹೊಂದಿದೆ. ಆದರೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಹೆಚ್ಚಿನ ಮಾಹಿತಿ ನೀಡಲಿದೆ. ಸದ್ಯ ಚಿತ್ರದ ಶೂಟಿಂಗ್‌ ಆರಂಭ ಆಗಿದೆ.

ನಟಿ ರಾಗಿಣಿಯ ಲುಕ್‌ ಟೆಸ್ಟ್‌ ಮತ್ತು ಪಾತ್ರದ ಫೊಟೋ ಶೂಟ್ ಕೂಡ ಮುಗಿದಿದೆ. ಚಿತ್ರದಲ್ಲಿನ ರಾಗಿಣಿಯ ಲುಕ್‌ ಕೂಡ ರಿವೀಲ್‌ ಆಗಿದೆ. ರಾಗಿಣಿಯ ಎರಡು ಶೇಡ್‌ಗಳು ರಿವೀಲ್‌ ಆಗಿವೆ. ಒಂದು ಮಾಡ್ರನ್‌ ಲುಕ್‌ ಆದರೆ, ಮತ್ತೊಂದರಲ್ಲಿ ಸೀರೆಯುಟ್ಟು ದಿಟ್ಟ ಮಹಿಳೆಯಂತೆ ರಾಗಿಣಿ ಕಾಣಿಸಿಕೊಂಡಿದ್ದಾರೆ.

Actress Ragini Dwivedi Starerr New Movie Announced

ಸದ್ಯ ರಾಗಿಣಿ ಪಾತ್ರದ ಮೇಲೆ ಮತ್ತು ಸಿನಿಮಾ ಕಥೆಯ ಮೇಲೆ ಕುತೂಹಲ ಮೂಡಿದೆ. ಕಿಸ್ ಇಂಟರ್‌ನ್ಯಾಷನಲ್ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಚಿತ್ರಕ್ಕೆ ಬ್ರಹ್ಮ ಎನ್ನುವವರ ನಿರ್ದೇಶನ ಇದೆ. ಇನ್ನು ಹಾಲಿವುಡ್‌ನ ಟಾಮ್ ಅಂಡ್‌ ಜೆರಿ ಚಿತ್ರಕ್ಕೆ ಕೆಲಸ ಮಾಡಿದ್ದ ಅನಿಮೇಷನ್ ತಂಡ ಈ ಚಿತ್ರವನ್ನ ಸೇರಿ ಕೊಳ್ಳಲಿದೆ. ಇದಿಷ್ಟು ಮಾಹಿತಿಯನ್ನು ನಟಿ ರಾಗಿಣಿ ಹಂಚಿಕೊಂಡಿದ್ದಾರೆ.

ರಾಗಿಣಿ ಹೊಸ ಹೊಸ ಪಾತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇನ್ನು ರಾಗಿಣಿ ಬಾಲಿವುಡ್‌ನತ್ತ ಕೂಡ ಮುಖ ಮಾಡಿದ್ದಾರೆ. ಆಲ್ಬಂ ಹಾಡಿನ ಮೂಲಕ ರಾಗಿಣಿ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈಗಾಗಲೇ ಆಲ್ಬಂ ಹಾಡಿನ ಚಿತ್ರೀಕರಣ ಮುಗಿದಿದೆ. ರಾಗಿಣಿ ಆಲ್ಬಂ ಹಾಡಿನ ಫೋಟೊಗಳನ್ನ ಹಂಚಿಕೊಂಡಿದ್ದರು.

Actress Ragini Dwivedi Starerr New Movie Announced

ಈ ಹಾಡಿನಲ್ಲಿ ರಾಗಿಣಿಗೆ ಬಾಲಿವುಡ್‌ನ ಅರ್ಜುನ್ ಶರ್ಮಾ ಸಾಥ್ ನೀಡಿದ್ದಾರೆ. ಜೊತೆಗೆ ಹೆಸರಾಂತ ನೃತ್ಯ ಸಂಯೋಜಕ ವಿಷ್ಣು ಪ್ರಭು ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಮುಂಬೈನ ಸುತ್ತಮುತ್ತ ಹಾಡಿನ ಚಿತ್ರೀಕರಣ ಮಾಡಲಾಗಿದೆ.

ಡ್ರಗ್‌ ಪ್ರಕರಣದ ಬಳಿಕ ಈಗ ಮತ್ತೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ ರಾಗಿಣಿ. ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳನ್ನ ಒಪ್ಪಿಕೊಳ್ತಿದ್ದಾರೆ. ನಟ ಶ್ರೇಯಶ್ ಕೆ ಮಂಜು ಅಭಿನಯದ ರಾಣ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ರಾಗಿಣಿ ದ್ವಿವೇದಿ ಹೆಜ್ಜೆ ಹಾಕ್ತಿದ್ದಾರೆ. ಜೊತೆಗೆ ಒಂದಷ್ಟು ಕಥೆಗಳನ್ನೂ ರಾಗಿಣಿ ಕೇಳುತ್ತಿದ್ದಾರೆ. ಸದ್ಯದಲ್ಲೇ ರಾಗಿಣಿ ಮತ್ತಷ್ಟು ಸಿನಿಮಾಗಳನ್ನು ಪ್ರಕಟ ಮಾಡುವ ಯೋಜನೆಯಲ್ಲಿದ್ದಾರೆ. ಡ್ರಗ್ ಕೇಸ್‌ ಬಳಿಕ ರಾಗಿಣಿಗೆ ಸಿನಿಮಾ ಅವಕಾಶಗಳು ಕಡಿಮೆ ಎನ್ನುವ ಹಾಗಿಲ್ಲ. ಯಾಕೆಂದರೆ ರಾಗಿಣಿ ವೈಯಕ್ತಿಕ ಜೀವನದಲ್ಲಿ ನಡೆದ ಕಹಿ ಘಟನೆಯಿಂದ ಆಕೆಗೆ ಬರುವ ಸಿನಿಮಾಗಳನ್ನು ಕಸಿದು ಕೊಂಡಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟ ಖ್ಯಾತಿ ರಾಗಿಣಿಗೆ ಇದೆ. ಹಾಗಾಗಿ ಈಗಲೂ ರಾಗಿಣಿಗೆ ಬೇಡಿಕೆ ಇದೆ.

More from Filmibeat

English summary
Actress Ragini Dwivedi Talking About Karma In Her Upcomming Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X