'KGF 2' ಸಿನಿಮಾಗೆ ತುಪ್ಪ ಸುರಿದ ರಾಗಿಣಿ ದ್ವಿವೇದಿ ಹೇಳಿದ್ದೇನು?
'ವೀರ ಮದಕರಿ', 'ಕೆಂಪೇಗೌಡ' ಸಿನಿಮಾಗಳ ಮೂಲಕ ಮೋಡಿ ಮಾಡಿರೋ ನಟಿ ರಾಗಿಣಿಗೆ ಇಂದು (ಮೇ 24) 32ನೇ ಹುಟ್ಟುಹಬ್ಬದ ಸಂಭ್ರಮ. ತನ್ನ ಹುಟ್ಟುಹಬ್ಬವನ್ನು ಆಪ್ತರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಸಂವಾದ ನಡೆಸಿದ ರಾಗಿಣಿ ತನ್ನ ಸಿನಿಮಾದ ಜೊತೆಗೆ ಕನ್ನಡದ 'ಕೆಜಿಎಫ್ 2' ಚಿತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕೆಜಿಎಫ್' ಸಿನಿಮಾದಿಂದಾಗಿ ಬೇರೆ ಎಲ್ಲಾ ಇಂಡಸ್ಟ್ರಿ ಅವರು ಕನ್ನಡ ಸಿನಿಮಾಗಳ ಮೇಲೆ ಒಂದು ಕಣ್ಣು ಇಟ್ಟಿದ್ದಾರೆ. ಮುಂದೆ ಏನು ಮಾಡ್ತಾರೆ ಎಂದು ಎದುರು ನೋಡ್ತಿದ್ದಾರೆ. ಹೀಗಾಗಿ 'ಕೆಜಿಎಫ್' ತಂಡ ಹಾಗೂ ಹೊಂಬಾಳೆ ಫಿಲ್ಮ್ಸ್ ಗೆ ಶುಭಾಶಯ ಹೇಳಲು ಇಚ್ಚಿಸುತ್ತೇನೆ ಎಂದಿದ್ದಾರೆ.
ನಟಿ ರಾಗಿಣಿ ಕಳೆದ ವರ್ಷ ಜೈಲಿನಿಂದ ಬಂದ ನಂತರ ಹುಟ್ಟುಹಬ್ಬ ಆಚರಿಸಿರಲಿಲ್ಲ. ಡ್ರಗ್ಸ್ ಪ್ರಕರಣ ಮತ್ತು ಸಾಕಷ್ಟು ಸವಾಲುಗಳನ್ನು ಎದುರಿಸಿದ ನಂತರ ಇದೀಗ ಮತ್ತೆ ಸಹಜ ಜೀವನ ನಡೆಸುತ್ತಿದ್ದಾರೆ ತುಪ್ಪದ ಬೆಡಗಿ. ಇದೀಗ ಮತ್ತೆ ಸಾಲು ಸಾಲು ಸಿನಿಮಾಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾರೆ. ಹಾಗೆ ಸಾಕಷ್ಟು ಬ್ಯುಸಿಯಾಗಿದ್ದಾರೆ ಕೂಡ. ರಾಗಿಣಿ ಹುಟ್ಟು ಹಬ್ಬದ ಅಂಗವಾಗಿ ಸಾರಿ ಕರ್ಮ ರಿಟನ್ಸ್' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಈ ವರ್ಷ ಸಾಲು ಸಾಲು ಸಿನಿಮಾಗಳ ಜೊತೆ ಕಮ್ ಬ್ಯಾಕ್ ಆಗಿದ್ದಾರೆ. ಹೊಸ ಸಿನಿಮಾಗಳ ಅನೌನ್ಸ್ ಮಾಡ್ತಿದ್ದಾರೆ ರಾಗಿಣಿ. ಜೈಲಿಂದ ಬಂದ ನಂತರ ರಾಗಿಣಿಯ ಲಕ್ ಬದಲಾದಂತಿದೆ. ಕನ್ನಡ ಸಿನಿಮಾಗಳ ಜೊತೆ ಜೊತೆಗೆ ಬೇರೆ ಭಾಷೆಗಳಿಂದಲೂ ರಾಗಿಣಿಗೆ ಆಫರ್‌ಗಳು ಬರುತ್ತಿದೆ. ಸದ್ಯ ಗಾಂಧಿಗಿರಿ' ಮತ್ತು ತಮಿಳಿನ ಒಂದು ಪ್ರಾಜೆಕ್ಟ್ ನಲ್ಲಿ ರಾಗಿಣಿ ತೊಡಗಿಸಿಕೊಂಡಿದ್ದಾರೆ.


Click it and Unblock the Notifications











