For Quick Alerts
  ALLOW NOTIFICATIONS  
  For Daily Alerts

  ಆರೋಗ್ಯದಲ್ಲಿ ವ್ಯತ್ಯಯ: ಜೈಲಿನಿಂದ ಆಸ್ಪತ್ರೆಗೆ ರಾಗಿಣಿ ದ್ವಿವೇದಿ ಸ್ಥಳಾಂತರ

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರದಲ್ಲಿ ದಿನ ಕಳೆಯುತ್ತಿರುವ ನಟಿ ರಾಗಿಣಿ ದ್ವಿವೇದಿ ಆರೋಗ್ಯದಲ್ಲಿ ವ್ಯತ್ಯಯವಾಗಿದೆ.

  ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆದ ರಾಗಿಣಿ | Ragini Hospitalised | Filmibeat Kannada

  ನಿನ್ನೆ (ಡಿಸೆಂಬರ್ 24) ರಾತ್ರಿ ರಾಗಿಣಿ ಆರೋಗ್ಯದಲ್ಲಿ ವ್ಯತ್ಯವಾಗಿದ್ದು, ಕೂಡಲೇ ಅವರನ್ನು ಜೈಲಿನಿಂದ ನಗರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

  ರಾಗಿಣಿ ಉಸಿರಾಟದ‌ ತೊಂದರೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರಾದರೂ, ನಿನ್ನೆ ರಾತ್ರಿ ಸಮಸ್ಯೆ ಹೆಚ್ಚಾದ ಕಾರಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  ನಟಿ ರಾಗಿಣಿಯನ್ನು ಡ್ರಗ್ಸ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಸೆಪ್ಟೆಂಬರ್ 4 ರಂದು ಬಂಧಿಸಿದ್ದರು. ಆರಂಭದಲ್ಲಿ ಕೆಲ ದಿನ ಸಿಸಿಬಿ ವಶದಲ್ಲಿದ್ದ ರಾಗಿಣಿ ನಂತರ ನ್ಯಾಯಾಂಗ ಬಂಧನದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

  ರಾಗಿಣಿ ನಂತರ ಬಂಧನಕ್ಕೆ ಒಳಗಾಗಿದ್ದ ಸಂಜನಾ ಗಲ್ರಾನಿಗೆ ಕೆಲವು ದಿನಗಳ ಮುಂಚೆಯಷ್ಟೆ ಜಾಮೀನು ದೊರೆತಿದೆ. ಸಂಜನಾ ಗಲ್ರಾನಿಯು ಆರೋಗ್ಯ ಕಾರಣ ಮುಂದಿಟ್ಟು ಜಾಮೀನಿಗೆ ಅರ್ಜಿ ಹಾಕಿದ್ದರು, ಅಂತೆಯೇ ಆರೋಗ್ಯ ವಿಷಯದ ಆಧಾರದಲ್ಲಿ ಸಂಜನಾ ಗೆ ಜಾಮೀನು ನೀಡಲಾಗಿದೆ.

  ಇದೀಗ ರಾಗಿಣಿಗೂ ಆರೋಗ್ಯ ಸಮಸ್ಯೆ ಎದುರಾಗಿದ್ದು, ರಾಗಿಣಿಯೂ ಸಹ ಆರೋಗ್ಯದ ಕಾರಣ ಮುಂದಿಟ್ಟು ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ.

  English summary
  Actress Ragini Dwivedi transferred to private hospital from jail yesterday night. Ragini had some health issues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X