twitter
    For Quick Alerts
    ALLOW NOTIFICATIONS  
    For Daily Alerts

    ಸಾಕ್ಷ್ಯ ನಾಶಕ್ಕೆ ರಾಗಿಣಿ ಮಾಸ್ಟರ್ ಪ್ಲಾನ್: ವಾಟ್ಸಪ್ ಡಿಲೀಟ್ ಮಾಡಿದ ನಟಿ

    By ಫಿಲ್ಮ್ ಡೆಸ್ಕ್
    |

    ಇಂದು (ಸೆಪ್ಟಂಬರ್ 4) ಬೆಳಗ್ಗೆ 6.30ಕ್ಕೆ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಯಲಹಂಕದಲ್ಲಿರುವ ರಾಗಿಣಿ ಮನೆ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. 2 ಕಾರಿನಲ್ಲಿ ಬಂದಿಳಿದ ಸಿಸಿಬಿ ಅಧಿಕಾರಿಗಳು ರಾಗಿಣಿ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    Recommended Video

    ರಾಗಿಣಿ ಮನೆಗೆ ಪೋಲೀಸರ ಎಂಟ್ರಿ | Filmibeat Kannada

    ಸಿಸಿಬಿ ಅಧಿಕಾರಿಗಳಿಗೆ ರಾಗಿಣಿಯ ಹಲವು ನಡೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಾಕ್ಷ್ಯ ನಾಶಕ್ಕೆ ರಾಗಿಣಿ ಮಾಸ್ಟರ್ ಪ್ಲಾನ್ ಮಾಡಿದ್ದಾರಾ ಎನ್ನವ ಶಂಕೆ ವ್ಯಕ್ತವಾಗಿದೆ. ಅನುಮಾನಕ್ಕೆ ಕಾರಣವಾಗಿದ್ದು, ನಟಿ ತನ್ನ ವಾಟ್ಸಪ್ ಅನ್ನು ಡಿಲೀಟ್ ಮಾಡಿರುವುದು. ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಂತೆ ರಾಗಿಣಿ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾರೆ. ಮುಂದೆ ಓದಿ..

    ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಿಢೀರ್ ದಾಳಿನಟಿ ರಾಗಿಣಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ದಿಢೀರ್ ದಾಳಿ

    ವಾಟ್ಸಪ್ ಡಿಲೀಟ್ ಮಾಡಿದ ರಾಗಿಣಿ

    ವಾಟ್ಸಪ್ ಡಿಲೀಟ್ ಮಾಡಿದ ರಾಗಿಣಿ

    ನಟಿ ರಾಗಿಣಿ ಆಪ್ತ ರವಿಶಂಕರ್ ವಶಕ್ಕೆ ಪಡೆದ ಬಳಿಕ ನಟಿ ರಾಗಿಣಿ ವಾಟ್ಸಪ್ ಚಾಟ್ ಡಿಲೀಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ವಾಟ್ಸಪ್ ಅಪ್ ಡಿಲೀಟ್ ಮಾಡಿ ಹೊಸ ಮೊಬೈಲ್ ಖರೀದಿಸಿ ವಾಟ್ಸಪ್ ಇನ್ ಸ್ಟಾಲ್ ಮಾಡಿಕೊಂಡಿದ್ದಾರೆ. ವಾಟ್ಸಪ್ ಚಾಟ್ ಸಿಗದ್ದಂತೆ ಮಾಡಿದ್ದಾರೆ.

    ವಿಚಾರಣೆ ತಪ್ಪಿಸಿಕೊಂಡಿದ್ದ ರಾಗಿಣಿ

    ವಿಚಾರಣೆ ತಪ್ಪಿಸಿಕೊಂಡಿದ್ದ ರಾಗಿಣಿ

    ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಂತೆ ರಾಗಿಣಿ ಎಸ್ಕೇಪ್ ಆಗಲು ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಸಿಬಿ ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕಿದ ರಾಗಿಣಿ ಹಲವು ಕಾರಣಗಳನ್ನು ನೀಡಿ ತಪ್ಪಿಸಿಕೊಂಡಿದ್ದಾರೆ. ಸೋಮವಾರ ವಿಚಾರಣೆಗೆ ಬರುವುದಾಗಿ ಹೇಳಿ ಟ್ವೀಟ್ ಮಾಡಿದ್ದ ರಾಗಿಣಿಗೆ ಸಿಸಿಬಿ ಮತ್ತೊಂದು ನೋಟಿಸ್ ನೀಡಿ ಇಂದೇ ವಿಚಾರಣೆಗೆ ಹಾಜರಾಗುವಂತೆ ಎಚ್ಚರಿಕೆ ನೀಡಿತ್ತು.

    ರಾಗಿಣಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ವಶಕ್ಕೆ

    ರಾಗಿಣಿ ಮೊಬೈಲ್ ಮತ್ತು ಲ್ಯಾಪ್ ಟಾಪ್ ವಶಕ್ಕೆ

    ಆದರೆ ರಾಗಿಣಿ ನಡೆ ಅನುಮಾನ ಮೂಡಿಸಿದ ಹಿನ್ನಲೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ದಿಢೀರ್ ದಾಳಿ ನಡೆಸಿದ್ದಾರೆ. ದಾಳಿ ಬಳಿಕ ಅಧಿಕಾರಿಗಳು ರಾಗಿಣಿಗೆ ಸೇರಿದ 4 ಮೊಬೈಲ್, 2 ಲ್ಯಾಪ್ ಟಾಪ್ ಅನ್ನು ಸೀಜ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ರವಿಶಂಕರ್ ಹೇಳಿಕೆ ಆಧರಿಸಿ ರಾಗಿಣಿ ವಿಚಾರಣೆ

    ರವಿಶಂಕರ್ ಹೇಳಿಕೆ ಆಧರಿಸಿ ರಾಗಿಣಿ ವಿಚಾರಣೆ

    ಸದ್ಯ ಶೋಧ ಕಾರ್ಯ ಮುಗಿಸಿರುವ ಅಧಿಕಾರಿಗಳು ರಾಗಿಣಿಗೆ ಅನೇಕ ಪ್ರಶ್ನೆ ಮಾಡುತ್ತಿದ್ದಾರೆ. ಬಳಿಕ ರಾಗಿಣಿಯನ್ನು ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ರಾಗಿಣಿ ಆಪ್ತ ರವಿಶಂಕರ್ ಸಿಸಿಬಿ ವಶದಲ್ಲಿದ್ದು, ಮಹತ್ವದ ಮಾಹಿತಿಯನ್ನು ಹೊರಹಾಕಿದ್ದಾರೆ. ರವಿಶಂಕರ್ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ರಾಗಿಣಿ ಮನೆ ಮೇಲೆ ದಾಳಿ ನಡೆಸಿದ್ದಾರೆ.

    English summary
    Actress Ragini has destroyed the evidence and Uninstall her Whatsapp.
    Friday, September 4, 2020, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X