»   » 'ಅಮ್ಮ' ಆಗಲಿರುವ ಘಮಘಮ ತುಪ್ಪದ ಬೆಡಗಿ ರಾಗಿಣಿ

'ಅಮ್ಮ' ಆಗಲಿರುವ ಘಮಘಮ ತುಪ್ಪದ ಬೆಡಗಿ ರಾಗಿಣಿ

By: ಉದಯರವಿ
Subscribe to Filmibeat Kannada

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅಮ್ಮ ಆಗಲು ಹೊರಟಿದ್ದಾರೆ. ಇನ್ನೂ ಮದುವೆನೇ ಆಗಿಲ್ಲ ಆಗಲೇ ಅಮ್ಮನಾ ಎಂದು ತಲೆಗೆ ಹುಳಬಿಟ್ಟುಕೊಳ್ಳಬೇಡಿ. ಅವರ ಚಿತ್ರದ ಶೀರ್ಷಿಕೆ ಹೆಸರೇ 'ಅಮ್ಮ'. ಈ ಚಿತ್ರದ ಮೂಲಕ ರಾಗಿಣಿ ತಮ್ಮ ವೃತ್ತಿ ಬದುಕಿನಲ್ಲಿ ಇನ್ನೊಂದು ತಿರುವಿನ ನಿರೀಕ್ಷೆಯಲ್ಲಿದ್ದಾರೆ.

ಅಮ್ಮ ಎಂದರೆ ಏನೋ ಹರುಷವು, ನಮ್ಮಾ ಪಾಲಿಗೆ ಅವಳೇ ದೈವವು, ಅಮ್ಮಾ ಎನ್ನಲೂ ಎಲ್ಲಾ ಮರೆತೆವು, ಎಂದೂ ಕಾಣದಾ ಸುಖವಾ ಕಂಡೆವು ಎಂಬ 'ಕಳ್ಳ ಕುಳ್ಳ' ಹಾಡು ನೆನಪಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಅಮ್ಮ ಎಂದರೆ ನೆನಪಾಗುವುದು ಮಾತ್ರ ಕುಮಾರಿ ಜಯಲಲಿತಾ.

Actress Ragini Dwivedi

ಬಹುಶಃ ಕಥೆ ಯಾವ ಅಮ್ಮನಿಗೆ ಸಂಬಂಧಿಸಿದ್ದು ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಮೇ.24ರ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬದ ದಿನ ಈ ಚಿತ್ರ ಸೆಟ್ಟೇರುತ್ತಿದೆ. ಈ ಚಿತ್ರವನ್ನು ಐದು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದ್ದು ರಾಗಿಣಿ ಪಂಚಭಾಷಾ ತಾರೆಯಾಗಿ ಈ ಚಿತ್ರದ ಮೂಲಕ ಬದಲಾಗಲಿದ್ದಾರೆ.

ಬಾಲಿವುಡ್ ನಿರ್ದೇಶಕ ಫೈಸಲ್ ಸೈಫ್ ಎಂಬುವವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ. ಜೂನ್ ತಿಂಗಳಿಂದ ಚಿತ್ರೀಕರಣ ಆರಂಭ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತದಂತೆ.

ಯೋಗರಾಜ್ ಭಟ್ ಮೂವೀಸ್ ಬ್ಯಾನರ್ ನ 'ಪರಪಂಚ' ಚಿತ್ರದಲ್ಲಿ ರಾಗಿಣಿ ಅವರು ಕಾಲ್ ಗರ್ಲ್ ಹಾಗೂ ಬಾರ್ ಗರ್ಲ್ ಪಾತ್ರವನ್ನು ಪೋಷಿಸುತ್ತಿರುವುದು ಗೊತ್ತೇ ಇದೆ. ಈ ಪಾತ್ರಕ್ಕೆ ಜೀವ ತುಂಬಲು ಸಾಕಷ್ಟು ಕಸರತ್ತುಗಳು ನಡೆಯುತ್ತಿವೆ ಎನ್ನುತ್ತಾರೆ ರಾಗಿಣಿ. (ಏಜೆನ್ಸೀಸ್)

English summary
Kannada actress Ragini Dwivedi next movie titled as Amma. The movie is being made in five languages. It will be officially launched on 24th May, birthday of Ragini.
Please Wait while comments are loading...