ಮೂರು ದಿನ ರಾಗಿಣಿ ಸಿಸಿಬಿ ವಶಕ್ಕೆ ನೀಡಿದ ನ್ಯಾಯಾಲಯ
ಮಾದಕ ವಸ್ತು ಸೇವನೆ ಹಾಗೂ ಮಾದಕ ವಸ್ತು ಮಾರಾಟಗಾರರೊಂದಿಗೆ ಸಂಪರ್ಕ ಆರೋಪದಡಿ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ.
Recommended Video
ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Filmibeat Kannada
ಇಂದು ಮಧ್ಯಾಹ್ನದಿಂದ ನಟಿ ರಾಗಿಣಿಯನ್ನು ವಿಚಾರಣೆಗೆ ಒಳಪಡಿಸಿದ್ದ ಸಿಸಿಬಿ ಪೊಲೀಸರು, ಸಂಜೆ ವೇಳೆಗೆ ಅವರನ್ನು ಬಂಧಿಸಿದ್ದರು.
ಬಂಧನದ ಬಳಿಕ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ರಾಗಿಣಿಯನ್ನು ಹಾಜರುಪಡಿಸಿ, ಸಿಸಿಬಿ ವಶಕ್ಕೆ ಅನುಮತಿ ಕೇಳಲಾಯಿತು. ಅಂತೆಯೇ ನ್ಯಾಯಾಧೀಶರು, ಮೂರು ದಿನಗಳ ಕಾಲ ರಾಗಿಣಿಯನ್ನು ಸಿಸಿಬಿ ವಶಕ್ಕೆ ಒಪ್ಪಿಸಿದರು. ನಟಿ ರಾಗಿಣಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಯಿತು.

ಇಂದು ರಾತ್ರಿ ರಾಗಿಣಿ, ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ತಂಗಲಿದ್ದಾರೆ. ನಾಳೆಯಿಂದ ಮತ್ತೆ ವಿಚಾರಣೆ ಆರಂಭವಾಗಲಿದೆ.
English summary
Actress Ragini Dwivedi given to CCB custody for three days. She has been arrested on Friday evening.


Click it and Unblock the Notifications