ಪರೀಕ್ಷೆಗೆ ಕಳುಹಿಸಿದ್ದ ರಾಗಿಣಿ-ಸಂಜನಾ ತಲೆಗೂದಲು ಮಾದರಿ ವಾಪಸ್!
ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರು ಡ್ರಗ್ಸ್ ಸೇವಿಸಿದ್ದಾರೋ ಇಲ್ಲವೋ ಎಂಬ ಬಗ್ಗೆ ತನಿಖೆ ನಡೆಸಲು ಅವರಿಂದ ಸಂಗ್ರಹಿಸಿದ್ದ ಕೂದಲಿನ ಮಾದರಿ ವಾಪಸ್ ಬಂದಿದೆ.
Recommended Video
ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರುಗಳು ಡ್ರಗ್ಸ್ ಸೇವಿಸಿದ್ದಾರೆಯೋ ಇಲ್ಲವೋ ಎಂದು ಪತ್ತೆ ಹಚ್ಚಲು ಅವರ ಕೂದಲಿನ ಮಾದರಿಯನ್ನು ಪಡೆಯಲಾಗಿತ್ತು. ಅದನ್ನು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಈಗ ಆ ಕೂದಲ ಮಾದರಿ ವಾಪಸ್ ಬಂದಿದೆ.
ಇಬ್ಬರೂ ನಟಿಯರ ಕೂದಲು ಮಾದರಿ, ಮೂತ್ರ ಮಾದರಿ, ರಕ್ತ ಮಾದರಿಯನ್ನು ಪಡೆಯಲಾಗಿತ್ತು. ಕೂದಲು ಮಾದರಿಯನ್ನು ಹೈದರಾಬಾದ್ ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಆದರೆ ಕೆಲವು ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮಾದರಿಯು ವಾಪಸ್ ಬಂದಿದೆ.

'ಕೂದಲು ಮಾದರಿ ತೆಗೆದುಕೊಂಡಿರುವ ವಿಧಾನ ವೈಜ್ಞಾನಿಕವಾಗಿಲ್ಲ' ಎಂದು ಕಾರಣ ನೀಡಿ ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯದಿಂದ ಇಬ್ಬರೂ ನಟಿಯರ ಕೂದಲು ಮಾದರಿಯನ್ನು ವಾಪಸ್ ಕಳುಹಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, 'ಸಣ್ಣ ತಾಂತ್ರಿಕ ಸಮಸ್ಯೆಯಿಂದಾಗಿ ಈ ರೀತಿಯಾಗಿದೆ, ಈಗ ಎಲ್ಲವೂ ಸರಿಯಾಗಿದೆ' ಎಂದಿದ್ದಾರೆ.


Click it and Unblock the Notifications











