For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವಾರಿಯರ್ಸ್ ಸಹಾಯಕ್ಕೆ 'ಆರ್ ಡಿ ವೆಲ್ ಫೇರ್' ಪ್ರಾರಂಭಿಸಿದ ರಾಗಿಣಿ

  |

  ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ಆದಾಗಿಂದನೂ ರಾಗಿಣಿ ಹಸಿದವರು, ಬಡವರು, ಕೂಲಿ ಕಾರ್ಮಿಕರಿಗೆ ನೆರವಾಗಿ ಪ್ರತಿದಿನ ಊಟ ನೀಡುತ್ತಿದ್ದಾರೆ.

  ಹೋಮ್ ಕ್ವಾರಂಟೇನ್ ನಲ್ಲಿರುವ ರೋಗಿಗಳಿಗೆ ನಟಿ ರಾಗಿಣಿ ಏನ್ ಕೊಡ್ತಿದ್ದಾರೆ? | Ragini | Stay Home Stay safe

  ಜೊತೆಗೆ ಕೊರೊನಾ ಯೋಧರಿಗೂ ರಾಗಿಣಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ, ಪೊಲೀಸರು ಸೇರಿದಂತೆ ಸಾಕಷ್ಟು ಮಂದಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

  ಸಾಮಾಜಿಕ ಕೆಲಸ ಮಾಡುತ್ತಿರುವ ರಾಗಿಣಿ ಸದ್ಯ ಮತ್ತಷ್ಟು ಜನರಿಗೆ ನೆರವಾಗುವ ಉದ್ದೇಶದಿಂದ "ಆರ್ ಡಿ ವೆಲ್ ಫೇರ್ ಸೆಂಟರ್" ಪ್ರಾರಂಭಿಸಿದ್ದಾರೆ. ಈ ಮೂಲಕ ಕೆಲಸ ಮಾಡಲು ಮುಂದಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಬಿಬಿಎಂಪಿ ಕೆಲಸಗಾರು ಸೇರಿದಂತೆ ಪ್ರತಿಯೊಬ್ಬ ಕೊರೊನಾ ವಾರಿಯರ್ಸ್ ಗೆ ಸಹಾಯ ಮಾಡುವ ಉದ್ದೇಶದಿಂದ ರಾಗಿಣಿ ಈ ವೆಲ್ ಫೇರ್ ಸೆಂಟರ್ ಪ್ರಾರಂಭಿಸಿದ್ದಾರೆ.

  ವಿಡಿಯೋ ಮೂಲಕ ಮಾಹಿತಿ ನೀಡಿರುವ ರಾಗಿಣಿ "ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಬಿಬಿಎಂಪಿ ಕೆಲಸಗಾರರು ಸೇರಿದಂತೆ ಎಲ್ಲಾ ಕೊರೊನಾ ವಾರಿಯರ್ಸ್ ಕೆಲಸ ಮಾಡುತ್ತಿರುವುದು ನಾವೆಲ್ಲರೂ ನೆಮ್ಮದಿಯಾಗಿ ಇರಲಿ ಅಂತ. ತುಂಬಾ ಜನ ನಮ್ಮ ಅಕ್ಕಪಕ್ಕದಲ್ಲಿ ಅವಶ್ಯಕ ವಸ್ತುಗಳು ಇಲ್ಲದೆ ಇರುವವರು ಇದ್ದಾರೆ. ಹಾಗೆ ಸಹಾಯ ಮಾಡುವವರು ಇದ್ದಾರೆ" ಎಂದಿದ್ದಾರೆ.

  "ಎಲ್ಲರಿಗೂ ಸಹಾಯಮಾಡುವ ಉದ್ದೇಶದಿಂದ ನಾನು ಆರ್ ಡಿ ವೆಲ್ ಫೇರ್ ಸೆಂಟರ್ ಪ್ರಾರಂಭಿಸುತ್ತಿದ್ದೀನಿ, ಎಲ್ಲರೂ ಬನ್ನಿ ಸಹಾಯ ಮಾಡಿ, ನಮ್ಮ ಕಡೆಯಿಂದ ಎಷ್ಟು ಆಗುತ್ತೋ ಅಷ್ಟು ಸಹಾಯ ಮಾಡಿ. ಇವರೆಲ್ಲರಿಗೂ ಸಹಾಯ ಮಾಡೋಣ. ಈಗಾಗಲೆ ನಾನು ಸಾಕಷ್ಟು ಸಹಾಯ ಮಾಡುತ್ತಿದ್ದೀನಿ. ಇದನ್ನು ದೊಡ್ಡ ಮಟ್ಟಕ್ಕೆ ತರಬೇಕೆಂದರೆ ಎಲ್ಲರ ಸಹಾಯ ಬೇಕು" ಎಂದು ಹೇಳಿದ್ದಾರೆ.

  ರಾಗಿಣಿ ಈಗಾಗಲೆ ಊಟದ ವ್ಯವಸ್ಥೆ ಜೊತೆಗೆ, ವೈದ್ಯಕೀಯ ಸೇವೆ, ಮಾಸ್ಕ್ ಸೇರಿದಂತೆ ಎಲ್ಲಾ ರೀತಿಯ ಸೇವೆಗಳನ್ನು ರಾಗಿಣಿ ಮಾಡುತ್ತಿದ್ದಾರೆ. ರಾಗಿಣಿ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  English summary
  Kannada Actress Ragini started RD Welfare for support corona warriors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X