For Quick Alerts
  ALLOW NOTIFICATIONS  
  For Daily Alerts

  ಪ್ರಜ್ವಲ್ ದೇವರಾಜ್ ಗೆ ಜೊತೆಯಾದ ರಾಜಶ್ರಿ ಪೊನ್ನಪ್ಪ

  |

  ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಲ್ಕೈದು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಪ್ರಜ್ವಲ್ ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್', 'ಟೈಸನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ರಾಮ್ ನಾರಾಯಣ್ ಪ್ರಜ್ವಲ್ ಮುಂದಿನ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಬೆಂಗಳೂರಿನಲ್ಲಿ ಭರ್ಜರಿ ಶೂಟಿಂಗ್ ನಡೆಯುತ್ತಿದೆ.

  ಮತ್ತೆ ಒಂದಾದ ಪ್ರಜ್ವಲ್ ದೇವರಾಜ್-ಪಿಸಿ ಶೇಖರ್ ಜೋಡಿ

  ವಿಶೇಷ ಅಂದ್ರೆ ಚಿತ್ರಕ್ಕೆ ನಾಯಕಿಯಾಗಿ ರಾಜಶ್ರೀ ಪೊನ್ನಪ್ಪ ಆಯ್ಕೆಯಾಗಿದ್ದಾರೆ. ಈ ಹಿಂದೆ ಹ್ಯಾಪಿ ನ್ಯೂ ಇಯರ್ ಸಿನಿಮಾದಲ್ಲಿ ಮೋಡಿ ಮಾಡಿದ್ದ ರಾಜಶ್ರೀ ಈಗ ಪ್ರಜ್ವಲ್ ಗೆ ಜೋಡಿಯಾಗಿ ಮಿಂಚಲು ತಯಾರಾಗಿದ್ದಾರೆ.

  ಇನ್ನು ಹೆಸರಡಿದ ಈ ಚಿತ್ರದಲ್ಲಿ ರಾಜಶ್ರೀ ಪಾತ್ರ ವಿಭಿನ್ನವಾಗಿರಲಿದೆಯಂತೆ. ಲಾಯರ್ ಮಗಳಾಗಿ ಮುಗ್ಧ ಹುಡುಗಿಯಾಗಿ ಈ ಸಿನಿಮಾದಲ್ಲಿ ಮಿಂಚಲಿದ್ದಾರಂತೆ. ರಾಮ್ ನಾರಾಯಣ್ ಪ್ರಜ್ವಲ್ ಗಾಗಿಯೆ ರೆಡಿಮಾಡಿದ ಕಥೆ ಇದಾಗಿದೆಯಂತೆ. ಸದ್ಯ ಚಿತ್ರೀಕರಣ ಪ್ರಾರಂಭಸಿರುವ ಚಿತ್ರತಂಡ ಇನ್ನಷ್ಟು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸಲಿದೆಯಂತೆ.

  ಪ್ರಜ್ವಲ್ ದೇವರಾಜ್ ಈಗಾಗಲೆ ಇನ್ಸ್ಪೆಕ್ಟರ್ ವಿಕ್ರಮ್, ಜೆಂಟಲ್ ಮ್ಯಾನ್, ಅರ್ಜುನ್ ಗೌಡ, ರುಧೀರಾ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಪಿಸಿ ಶೇಖರ್ ನಿರ್ದೇಶನದ ಚಿತ್ರದಲ್ಲು ಪ್ರಜ್ವಲ್ ನಾಯಕನಾಗಿ ಮಿಂಚುತ್ತಿದ್ದಾರೆ.

  English summary
  Kannada actress Rajshri Ponnappa to lead opposite Actor Prajwal Devaraj for their untitled film. This film is directed by Ram Narayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X