ಡಿ ಬಾಸ್ ದರ್ಶನ್ ಹುಟ್ಟುಹಬ್ಬಕ್ಕೆ ರಕ್ಷಿತಾ ವಿಶ್ ಮಾಡಿದ್ದು ಹೀಗೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 44ನೇ ವರ್ಷದ ಜನ್ಮದಿನಾಚರಣೆಯನ್ನು ಅಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬ ಎಂದರೆ ಅಭಿಮಾನಿಗಳ ದಂಡೇ ಸೇರಿಸುತ್ತಿದ್ದರು. ನೆಚ್ಚಿನ ನಟನನ್ನು ನೋಡಲು ಮನೆ ಮುಂದೆ ದೊಡ್ಡದಾದ ಕ್ಯೂ ನಿಂತಿರುತ್ತಿತ್ತು. ಆದರೆ ಈ ಬಾರಿ ಎಲ್ಲಾ ಸಂಭ್ರಮ, ಸಡಗರಕ್ಕೆ ಬ್ರೇಕ್ ಹಾಕಲಾಗಿದೆ.

Recommended Video

ಗೆಳೆಯ ಡಿ ಬಾಸ್ ಹುಟ್ಟುಹಬ್ಬಕ್ಕೆ ಸಾಲು ಸಾಲು ಪೋಟೊ ಹಾಕಿದ ರಕ್ಷಿತಾ | Filmibeat Kannada

ಆದರೆ ಅಭಿಮಾನಿಗಳು ಮತ್ತು ಸ್ನೇಹಿತರ ಶುಭಹಾರೈಕೆಗಳು ಕಡಿಮೆಯಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. ಸಾಕಷ್ಟು ಕಲಾವಿದರು ಶುಭಕೋರುತ್ತಿದ್ದಾರೆ. ಕ್ರೇಜಿ ಕ್ವೀನ್ ರಕ್ಷಿತಾ ಸಹ ವಿಶೇಷವಾಗಿ ಶುಭಕೋರಿದ್ದಾರೆ.

ಸ್ಯಾಂಡಲ್ ವುಡ್ ಸುಂಟರಗಾಳಿ ಜೋಡಿ ಎಂದೇ ಖ್ಯಾತಿಗಳಿಸಿರುವ ದರ್ಶನ್ ಮತ್ತು ರಕ್ಷಿತಾ ಜೋಡಿಗೆ ಫಿದಾ ಆಗದವರೇ ಇಲ್ಲ. ಇಬ್ಬರು ಒಟ್ಟಿಗೆ ನಟಿಸಿರುವ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿವೆ. ಸಿನಿಮಾ ಹೊರತಾಗಿಯೂ ರಕ್ಷಿತಾ ಮತ್ತು ದರ್ಶನ್ ಇಬ್ಬರು ಉತ್ತಮ ಸ್ನೇಹಿತರು. ಇಬ್ಬರ ನಡುವೆ ಉತ್ತಮವಾದ ಬಾಂಧವ್ಯವಿದೆ.

Actress Rakshitha prem birthday wishes to Darshan

ಸ್ಯಾಂಡಲ್ ವುಡ್ ಸ್ನೇಹಿತನಿಗೆ ರಕ್ಷಿತಾ ವಿಶೇಷವಾಗಿ ವಿಶ್ ಮಾಡಿದ್ದಾರೆ. ದರ್ಶನ್ ಜೊತೆ ನಟಿಸಿರುವ ಸಿನಿಮಾಗಳ ಫೋಟೋಗಳು ಮತ್ತು ವಿಡಿಯೋಗಳನ್ನು ರಕ್ಷಿತಾ ಶೇರ್ ಮಾಡಿದ್ದಾರೆ. ಫೋಟೋ ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು ದರ್ಶನ್. ಯಾವಾಗಲು ಸಂತೋಷವಾಗಿರಿ, ದೇವರು ಒಳ್ಳೆಯದು ಮಾಡಲಿ' ಎಂದು ಹೇಳಿದ್ದಾರೆ.

ದರ್ಶನ್ ಮತ್ತು ರಕ್ಷಿತಾ ಇಬ್ಬರು ಕಲಾಸಿಪಾಳ್ಯ, ಅಯ್ಯಾ, ಮಂಡ್ಯ ಮತ್ತು ಸುಂಟರಗಾಳಿ ಸಿನಿಮಾಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಸುಂಟರಗಾಳಿ ಸಿನಿಮಾ ಬಳಿಕ ದರ್ಶನ್ ಮತ್ತು ರಕ್ಷಿತಾ ಇಬ್ಬರು ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದರೆ ಇಬ್ಬರ ಸ್ನೇಹ ಬಾಂಧವ್ಯ ಹಾಗೆ ಇದೆ.

More from Filmibeat

English summary
Actress Rakshitha prem birthday wishes to Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X