ನಟಿ ರಂಭಾ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ

By ಅನಂತರಾಮು, ಹೈದರಾಬಾದ್

ಕೆಲವು ತಿಂಗಳ ಹಿಂದೆ ಬಹುಭಾಷಾ ನಟಿ ರಂಭಾ ಅವರ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಸುದ್ದಿಯೊಂದು ಬರಸಿಡಿಲಿನಂತೆ ಎರಗಿತ್ತು. ಇಂದಿರನ್ ಪದ್ಮನಾಭನ್ ಜೊತೆಗಿನ ಅವರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂಬ ಸುದ್ದಿ ಬಂದಿತ್ತು. ಆದರೆ ಆ ಸುದ್ದಿ ಗಾಳಿಸುದ್ದಿಯಾಗಿಯೇ ಉಳಿಯಿತು.

ಇದೀಗ ರಂಭಾ ಅವರ ಮೇಲೆ ಮತ್ತೊಂದು ಗಂಭೀರ ಆರೋಪ ಎದುರಾಗಿದೆ. ರಂಭಾ ಮತ್ತವರ ತಂದೆತಾಯಿ ಹಾಗೂ ಸಹೋದರನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ ರಂಭಾ ಅವರ ಅತ್ತಿಗೆ ಪಲ್ಲವಿ. ಈ ಸಂಬಂಧ ಹೈದರಾಬಾದಿನ ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ವಿರೋಧಿ ಕಾಯಿದೆಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ. [ಕವಲುದಾರಿಯಲ್ಲಿ ನಟಿ ರಂಭಾ ದಾಂಪತ್ಯ ಜೀವನ?]

"ಕಳೆದ ಕೆಲ ವರ್ಷಗಳಿಂದ ರಂಭಾ ಮತ್ತು ಅವರ ಕುಟುಂಬಿಕರು ತಮ್ಮನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದಾರೆ" ಎಂದು ಪಲ್ಲವಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ರಂಭಾ ಹಾಗೂ ಅವರ ಸಹೋದರ ಪಿ ಶ್ರೀನಿವಾಸ ರಾವ್ ವಿರುದ್ಧ ಪೊಲೀಸರು ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ.

ಪಲ್ಲವಿ ನೀಡಿರುದ ದೂರಿನಲ್ಲಿ ಏನಿದೆ?

ಪಲ್ಲವಿ ನೀಡಿರುದ ದೂರಿನಲ್ಲಿ ಏನಿದೆ?

ಪಲ್ಲವಿ ನೀಡಿರುವ ದೂರಿನ ಪ್ರಕಾರ, ಗಂಡ ಶ್ರೀನಿವಾಸ್ ಕಳೆದ ಒಂದು ವರ್ಷದಿಂದಲೂ ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ವ್ಯವಹಾರದಲ್ಲಿ ಕೈಸುಟ್ಟುಕೊಂಡಿದ್ದ ಶ್ರೀನಿವಾಸ್ ರಾವ್ ಕುಡಿತದ ದಾಸನಾಗಿದ್ದಾರೆ. ಬಿಜಿನೆಸ್ ನಲ್ಲಿ ಆದ ನಷ್ಟ ಭರಿಸಲು ತವರು ಮನೆಯಿಂದ ಹಣ ತರಲು ಪಲ್ಲವಿ ಅವರನ್ನು ಪೀಡಿಸತೊಡಗಿದ್ದಾರೆ.

ತನ್ನ ಸೋದರನ ಪರವಾಗಿ ಇದ್ದಾರಾ ರಂಭಾ?

ತನ್ನ ಸೋದರನ ಪರವಾಗಿ ಇದ್ದಾರಾ ರಂಭಾ?

ಇದಕ್ಕೆ ಅವರ ಪೋಷಕರ ಕುಮ್ಮಕ್ಕೂ ಸಿಕ್ಕಿದೆ. ರಂಭಾ ಸಹ ತನ್ನ ಸಹೋದರನ ಪರವಾಗಿ ನಿಂತಿದ್ದಾರೆ. ಪಲ್ಲವಿಯ ತವರಿನವರು ನೀಡಿದ್ದ ಎಲ್ಲಾ ಒಡವೆಗಳನ್ನ ಅಡವಿಟ್ಟುಕೊಂಡಿದ್ದಾರೆ. ಚೆನ್ನೈನಲ್ಲಿರುವ ಗಂಡನ ಮನೆಯಲ್ಲಿನ ಕಾಟ ತಡೆಯಲಾಗದೇ ಪಲ್ಲವಿ ಆರು ತಿಂಗಳ ಹೈದರಾಬಾದ್ ನಲ್ಲಿರುವ ತನ್ನ ತವರಿಗೆ ಮರಳಿದ್ದಾರೆ.

ನಾಲ್ವರು ಆರೋಪಿಗಳ ವಿರುದ್ಧ ದೂರು

ನಾಲ್ವರು ಆರೋಪಿಗಳ ವಿರುದ್ಧ ದೂರು

ಇದೀಗ, ಗಂಡನ ಮನೆಯವರ ವಿರುದ್ಧ ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್'ನಲ್ಲಿ ದೂರು ಸಲ್ಲಿಸಿದ್ದಾರೆ. ಕೋರ್ಟ್ ಸೂಚನೆಯ ಮೇರೆಗೆ ಬಂಜಾರಾ ಹಿಲ್ಸ್ ಠಾಣೆಯ ಪೊಲೀಸರು ಪ್ರಕರಣ ನಾಲ್ವರು ಆರೋಪಿಗಳ ವಿರುದ್ಧ ದಾಖಲಿಸಿಕೊಂಡಿದ್ದಾರೆ.

ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿರುವ ಪೊಲೀಸರು

ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿರುವ ಪೊಲೀಸರು

ಪ್ರಕರಣದಲ್ಲಿ ರಂಭಾ ಅವರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಾಧಾರಗಳನ್ನು ಕಲೆಹಾಕುತ್ತಿದ್ದೇವೆ. ತನಿಖೆ ನಡೆಯುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿ ಸತ್ಯನಾರಾಯಣ ತಿಳಿಸಿದ್ದಾರೆ.

ಪಲ್ಲವಿ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ

ಪಲ್ಲವಿ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ

ಶ್ರೀನಿವಾಸ ರಾವ್ ಹಾಗೂ ಪಲ್ಲವಿ ಅವರು 1999ರಲ್ಲಿ ವಿವಾಹವಾಗಿದ್ದರು. ಈ ದಂಪತಿಗಳಿ ಇಬ್ಬರು ಮಕ್ಕಳಿದ್ದಾರೆ. ಇಬ್ಬರ ನಡುವಿನ ತಗಾದೆಳ ಕಾರಣ ಪಲ್ಲವಿ ಅವರು ತಮ್ಮ ಪೋಷಕರ ಜೊತೆಗಿದ್ದಾರೆ. ಫೆಬ್ರವರಿಯಲ್ಲಿ ತಮ್ಮ ಗಂಡನ ವಿರುದ್ಧ ಪಲ್ಲವಿ ದೂರು ದಾಖಲಿಸಿದ್ದರು. ಇದೀಗ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

More from Filmibeat

English summary
South Indian actress Rambha, her parents and her brother have been booked for abuse and dowry harassment. The complaint has been filed by Rambha's sister-in-law.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X